ಬಿಜೆಪಿ ಶಾಸಕ ಸಿಟಿ ರವಿ ಮನೆಗೆ ನಾಗಾ ಸಾಧು ಭೇಟಿ
Recommended Video

ಚಿಕ್ಕಮಗಳೂರು, ಡಿಸೆಂಬರ್ 18: ಅದ್ಯಾಕೋ ಗೊತ್ತಿಲ್ಲಾ ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ರಾಜಕಾರಣಿಗಳ ಮನೆಗಳಿಗೆ ನಾಗಾ ಸಾಧು ಭೇಟಿ ಹಲವು ಕುತೂಹಲಗಳು ಮೂಡಿಸುತ್ತಿವೆ.
ಇತ್ತೀಚೆಗೆ 18 ನಾಗಾ ಸಾಧುಳು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿದ್ದ ಬೆನ್ನಲ್ಲಿಯೇ ಇದೀಗ ಚಿಕ್ಕಮಗಳೂರು ಶಾಸಕ ಸಿಟಿ ರವಿ ಅವರ ಮನೆಗೆ ಭೇಟಿ ನೀಡಿದ್ದಾರೆ.

ಸೋಮವಾರ ನಾಗಾ ಸಾಧುವೊಬ್ಬರು ಶಾಸಕ ಸಿಟಿ ರವಿ ಅವರ ಮನೆಗೆ ಭೇಟಿ ನೀಡಿ ಆಶೀರ್ವದಿಸಿ ಹೋಗಿದ್ದಾರೆ. ಬಗ್ಗೆ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿರುವ ಸಿಟಿ ರವಿ ಅವರು, "ಇಂದು ನಾಗಾ ಸಾಧುಗಳು ನಮ್ಮ ಮನೆಗೆ ಆಗಮಿಸಿದ್ದು ನನ್ನ ಅದೃಷ್ಟ. ಸಾಧುಗಳ ಆಶೀರ್ವಾದ ಪಡೆಯಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಭಾವಿಸುವೆ. ಅವರ ಆಶೀರ್ವಾದ ನಾಡಿನ ಸಮಸ್ತ ಜನರಿಗೆ ಇರಲಿ ಎಂದು ಕೇಳಿಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ವಾರಣಾಸಿಯಿಂದ ದೇಶ ಸಂಚಾರ ಮಾಡಿಕೊಂಡು ಬಂದಿದ್ದ ಹದಿನೆಂಟು ನಾಗಾ ಸಾಧುಗಳು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನು ಆಶೀರ್ವದಿಸಿ ಹೋಗಿದ್ದರು.

ಇದಾದ ಬಳಿಕ ಮೈಸೂರು ಕಾಂಗ್ರೆಸ್ ಮುಖಂಡ ಕಂಸಾಳೆ ರವಿ ಎನ್ನುವರು ನಾಗಾ ಸಾಧುಗಳನ್ನು ತಮ್ಮ ಮನೆಗೆ ಕರೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೋಲಾರ ಶಾಸಕ ಪಕ್ಷೇತರ ವರ್ತೂರು ಪ್ರಕಾಶ್ ಅವರ ಒಳಿತಿಗಾಗಿ ಸಾಧುಗಳಿಂದ ಪೂಜೆ ಮಾಡಿಸಿದ್ದರು.
Fortunate with the divine visit of Naga Sadhus to my residence. Sought their blessings for the State and our People. pic.twitter.com/XPPe4EvRbs
— C.T.Ravi (@CTRavi_BJP) December 18, 2017
ಅಷ್ಟೇ ಅಲ್ಲದೇ ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿನ ಖಾಸಗಿ ಕಾರ್ಯಕ್ರಮವೊಂದಕ್ಕೆ ಕೇದಾರನಾಥ್ ನಿಂದ ಆಗಮಿಸಿದ್ದ ನಾಗಾ ಸಾಧುಗಳನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ರೇವಣ್ಣ ಜೊತೆಯಾಗಿ ಹೋಗಿ ಭೇಟಿ ಮಾಡಿ, ಆಶೀರ್ವಾದ ಪಡೆದುಕೊಂಡಿದ್ದರು.
ಈ ವೇಳೆ ಕೈ ಮುಷ್ಟಿಕಟ್ಟಿ, ಕಮಲ ಮುದುಡುವುದು, ಹೊಸ ತೆನೆಗೆ ದಾರಿಯಾಗುವುದು ಎಂದು ಒಗಟಿನ ರೂಪದಲ್ಲಿ ನಾಗಸಾಧು ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ದೂರವಾಣಿ ಮೂಲಕ ಭವಿಷ್ಯ ನುಡಿದಿರುವುದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications