Get Updates
Get notified of breaking news, exclusive insights, and must-see stories!

Profile : ಘಟಾನುಘಟಿಗಳಿಗೆ ಸೆಡ್ಡು ಹೊಡೆದು ಮಂತ್ರಿ ಪಟ್ಟ ಪಡೆದ ಎನ್.ಎಸ್.ಬೋಸರಾಜ್ ಯಾರು? ರಾಜಕೀಯ ಹಿನ್ನೆಲೆ ಏನು?

ರಾಯಚೂರು ಮೇ.27: ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಪುಟದಲ್ಲಿ ರಾಯಚೂರು ಜಿಲ್ಲೆಯ ಮಾಜಿ ಶಾಸಕ ಎನ್.ಎಸ್.ಬೋಸರಾಜ್ ಅವರ ಪಕ್ಷ ನಿಷ್ಠೆಗೆ ಸಚಿವ ಸ್ಥಾನ ದೊರಕಿದೆ.

ಮೂಲತಃ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲೂರು ಗ್ರಾಮದವರಾದ ಎನ್.ಎಸ್. ಬೋಸರಾಜ್, ಕೃಷಿಕ ಕುಟುಂಬದಲ್ಲಿ ಜನಿಸಿದರು. ಮದ್ರಾಸ್‌ನಲ್ಲಿ ಡಿಪ್ಲೊಮಾ ಇನ್ ಆಟೋಮೊಬೈಲ್ ಎಂಜಿನಿಯರಿಂಗ್‌ ಮುಗಿಸಿದ್ದು, ಓದುತ್ತಿರುವಾಗಲೇ ನಾಯಕತ್ವ ಗುಣ ಹೊಂದಿ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಆಸಕ್ತಿ ಹೊಂದಿದ್ದರು.

N. S.Boseraju Profile: Biography of N. S. Boseraju Minister In Siddaramaiahs Cabinet in Karnataka

1969ರಲ್ಲಿ ಡಿಪ್ಲೊಮಾ ಪದವಿ ಪೂರ್ಣಗೊಳಿಸಿದ ಬೋಸರಾಜ್ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಜೀನೂರು ಕ್ಯಾಂಪ್‌ನಲ್ಲಿ ತಮ್ಮ ಕೃಷಿ ಚಟುವಟಿಕೆಗಳನ್ನು ಆರಂಭಿಸಿದರು. ಕೃಷಿಯಲ್ಲಿ ಹೈನುಗಾರಿಕೆ, ಕೋಳಿ ಸಾಕಾಣಿಕೆಯನ್ನು ಬೃಹತ್ ಪ್ರಮಾಣದ ಉದ್ಯಮವಾಗಿಸುವ ಜೊತೆಗೆ ಎನ್.ಎಸ್.ಬೋಸರಾಜ್ ಅವರು ರಾಜಕೀಯ ಪ್ರವೇಶ ಮಾಡಿದರು.

ಎನ್.ಎಸ್.ಬೋಸರಾಜ್ ರಾಜಕೀಯ ಪರಿಚಯ

ಕವಿತಾಳ ರಾಜಶೇಖರಪ್ಪ ಮತ್ತು ಬಸವರಾಜೇಶ್ವರಿ ಅವರೊಂದಿಗೆ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಚಟುವಟಿಕೆಗಳನ್ನು ಆರಂಭಿಸಿದ ಬೋಸರಾಜ್, ಕ್ರಮೇಣ ರಾಯಚೂರು ಜಿಲ್ಲೆಯ ರಾಜಕಾರಣಕ್ಕೆ ಪ್ರವೇಶ ಮಾಡುವುದರ ಜೊತೆಗೆ ಕೈಗಾರಿಕೆಯನ್ನು ಸ್ಥಾಪಿಸಿ ಉದ್ಯಮಿಯೂ ಆಗಿದ್ದ ಅವರು 1978ರಿಂದ ರಾಯಚೂರು ನಗರಕ್ಕೆ ತಮ್ಮ ರಾಜಕೀಯ ಚಟುವಟಿಕೆ ವಿಸ್ತರಿಸಿಕೊಂಡರು.

1980ರ ದಶಕದಲ್ಲಿ ರಾಯಚೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಪ್ರವರ್ಧಮಾನರಾಗಿದ್ದ ಆಗಿನ ಸಚಿವ ಸುಧೀಂದ್ರರಾವ್ ಕಸ್ಬೆ ಅವರೊಂದಿಗೆ ಓಡನಾಟ ಆರಂಭಿಸಿದ ಬೋಸರಾಜ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಆರ್.ಆಂಜನೇಯಲು, ಪಾರಸಮಲ್ ಸುಖಾಣಿ, ಎ.ಪಾಪಾರೆಡ್ಡಿ , ಮಹಮದ್ ಉಮರ್ ಅವರೊಂದಿಗೆ ರಾಜಕಾರಣಿಯಾಗಿ ಹೊರ ಹೊಮ್ಮಿದರು.

N. S.Boseraju Profile: Biography of N. S. Boseraju Minister In Siddaramaiahs Cabinet in Karnataka

ಅವಿಭಜಿತ ರಾಯಚೂರು ಜಿಲ್ಲೆಯಲ್ಲಿ ಅವರನ್ನು ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ಕೊಪ್ಪಳ ಸಂಸದ ಎಚ್.ಜಿ.ರಾಮುಲು ಅವರ ಒಡನಾಟದೊಂದಿಗೆ ಮತ್ತಷ್ಟು ರಾಜಕೀಯ ಪ್ರವರ್ಧಮಾನಕ್ಕೆ ಬಂದ ಬೋಸರಾಜ್ ಅವರು ತಮ್ಮ ರಾಜಕೀಯ ವ್ಶೆರಿಗಳಿಗಳನ್ನು ತಮ್ಮ ಜಾಣ್ಮೆ ನಡೆಯಿಂದಲೇ ಎದುರಿಸುವ ಜಾಣತನ ಹೊಂದಿದ್ದಾರೆ. ಸಂಸದರಾಗಿದ್ದ ರಾಜಾ ಅಂಬಣ್ಣ ನಾಯಕ ಮತ್ತು ಬಸವರಾಜ ಪಾಟಿಲ್ ಅನ್ವರಿ ಅವರೊಂದಿಗೆ ರಾಜಕೀಯ ಭಿನ್ನಾಭಿಪ್ರಾಯ ಹೊಂದಿದ್ದ ಅವರು, ತಮ್ಮ ಚಾಣಾಕ್ಷ ನಡೆಯಿಂದಲೇ ಎದುರಿಸಿ ಜಿಲ್ಲಾ ಕಾಂಗ್ರೆಸ್ ನಲ್ಲಿ ತಮ್ಮದೇ ಆದ ಶಕ್ತಿ ಪ್ರದರ್ಶನ ಮಾಡಿದರು.

ರಾಜ್ಯದ ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ , ಬಂಗಾರಪ್ಪ , ವೀರಪ್ಪ ಮೊಯ್ಲಿ , ಧರ್ಮಸಿಂಣ್ ಅವರೊಂದಿಗೆ ಅಲ್ಲದೆ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಿತರಾಗಿ ಗುರುತಿಸಿಕೊಂಡ ಅವರು ಬಳಿಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಅವರ ನಿಕಟವರ್ತಿಯಾಗಿದ್ದಾರೆ.

1985ರಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬಸವರಾಜ ಪಾಟೀಲ ಅನ್ವರಿ ವಿರುದ್ಧ ಪರಾಭವಗೊಂಡ ಅವರು ಮುಂದಿನ ಒಂದು ದಶಕಗಳ ಕಾಲ ಮಾನ್ವಿ ತಾಲ್ಲೂಕಿನಲ್ಲಿಯೇ ತಮ್ಮ ರಾಜಕೀಯ ಚಟುವಟಿಕೆಗಳನ್ನು ಜೀವಂತ ಇಟ್ಟು ಹೋರಾಟ ಮಾಡಿದ ಅವರು ನೀರಾವರಿಯಲ್ಲಿ ಅಪಾರ ಅನುಭವ ಮತ್ತು ಆಸಕ್ತಿ ಹೊಂದಿ ತುಂಗಭದ್ರಾ ಎಡದಂಡೆ ನಾಲೆ ಸಮಸ್ಯೆಯನ್ನು ಮುಂದಿಟ್ಟುಕೊಂಡು ಆಡಳಿತ ಹಾಗೂ ಪ್ರತಿಪಕ್ಷದ ಶಾಸಕರ ಗಮನ ಸೆಳೆಯುವ ಮೂಲಕ ನೀರಾವರಿ ವಿಷಯಗಳಿಗೆ ಆದ್ಯತೆ ನೀಡುತ್ತಿದ್ದರು.

ರಾಯಚೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ ಸಂಸದ ಎ.ವೆಂಕಟೇಶ್ ನಾಯಕ ಅವರೊಂದಿಗೆ ಸುಮಾರು ಎರಡು ದಶಕಗಳ ಕಾಲ ಜಿಲ್ಲಾ ರಾಜಕಾರಣದಲ್ಲಿ ತಮ್ಮದೇ ಆದ ಹಿಡಿದ ಹೊಂದಿದ ಬೋಸರಾಜ್ ಅವರು ಜಿಲ್ಲೆಯ ಚತುರ ಮತ್ತು ಅಭಿವೃದ್ಧಿ ಪರ ರಾಜಕಾರಣಿ ಎಂದೇ ಖ್ಯಾತಿ ಹೊಂದಿದ್ದರು.

1992ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಅವರು ಮಾನ್ವಿ , ರಾಯಚೂರು ತಾಲೂಕಿನ ಕೊನೆಭಾಗದ ರೈತರಿಗೆ ನೀರು ತಲುಪಿಸಲು ಅನುಕೂಲವಾಗುವಚಿತೆ ಗಣೇಕಲ್ ಬಳಿ 7ಟಿಎಂಸಿ ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ಮಾಣಕ್ಕೆ ಕಾರಣೀಭೂತರಾದ ಬೋಸರಾಜ್ ಅವರು ನಚಿತರ ತುಂಗಭದ್ರಾ ಕಾಡಾ ಅಧ್ಯಕ್ಷರಾಗಿ ನೇಮಕಗೊಂಡರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿ ಆಗಿದ್ದಾಗ ಪುನಃ ಬೋಸರಾಜ್ ಅವರನ್ನೇ ತುಂಗಭದ್ರಾ ಕಾಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಆಗ ತುಂಗಭದ್ರ ಎಡದಂಡೆ ನಾಲೆ ಬಿರುಕು ಬಿಟ್ಟು ಪದೇ ಪದೇ ಒಡೆಯುತ್ತಿತ್ತು. ಅದಕ್ಕೆ ಶಾಶ್ವತ ಪರಿಹಾರ ಮಾಡಲು ಚಿನಿವಾಲ್ ಸಮಿತಿ ರಚಿಸಲು ಕಾರಣೀಭೂತರಾದ ಬೋಸರಾಜ್ ನಚಿತರ ನಾಲೆ ಶಾಶ್ವತ ದುರಸ್ತಿಗೆ ಸರ್ಕಾರದ ಮೇಲೆ ಒತ್ತಡ ತಂದ ಪೂರ್ಣಗೊಳಿಸುವವರೆಗೂ ಛಲ ಬಿಡಲಿಲ್ಲ.

ಅವರ ನೀರಾವರಿ ಆಸಕ್ತಿಯಿಂದಾಗಿ ಜಿಲ್ಲೆಯಲ್ಲಿ ನೀರಾವರಿ ತಜ್ಞ ಎಂದೇ ಕರೆಯಲ್ಪಡುವ ಬೋಸರಾಜ್, ಎಚ್.ಕೆ.ಪಾಟೀಲ್ ಅವರು ನೀರಾವರಿ ಸಚಿವರಾಗಿದ್ದಾಗ ಅವರಿಗೆ ನೀರಾವರಿ ಮಾಹಿತಿ ನೀಡುವ ಮೂಲಕ ರಾಜ್ಯದ ಕೆಲ ನೀರಾವರಿ ಸಮಸ್ಯೆಗಳ ಪರಿಹಾರಕ್ಕೂ ಇವರು ಸಲಹೆ ನೀಡಿದ್ದರು. ಹೀಗೆ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಎನ್.ಎಸ್.ಬೋಸರಾಜ್ ಅವರಿಗೆ 1999ರಲ್ಲಿ ಮಾನ್ವಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿದ ಅವರನ್ನು ಆಗಿನ ಹೈದರಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ (ಎಚ್‌ಕೆಡಿಬಿ) ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.

ಮಾನ್ವಿ ಕ್ಷೇತ್ರದ ರಾಜಕೀಯವಾಗಿ ಪ್ರಬಲರಾದ ಅವರು ಪುನಃ 2004ರಲ್ಲಿ ಸಹ ಅದೇ ಕ್ಷೇತ್ರದಿಂದ ಜಯಗಳಿಸಿದರು. ಅದೇ ಅವಧಿಯಲ್ಲಿ ಅವರಿಗೆ ಧರಮ್ ಸಿಂಗ್ ಸಂಪುಟದಲ್ಲಿ ಸಚಿವರಾಗುವ ಅವಕಾಶ ಒದಗಿ ಬಂದಿತ್ತು. ಆದರೆ ಕೊನೆಗಳಿಗೆಯಲ್ಲಿ ಅದು ತಪ್ಪಿದಾಗ ಅವರನ್ನು ಧರಮ್ ಸಿಂಗ್ ಅವರೇ ತಮ್ಮ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿದ್ದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರ ಪರಿಶಿಷ್ಚ ಪಂಗಡಕ್ಕೆ ಮೀಸಲಾದ ಕಾರಣ ಕ್ಷೇತ್ರ ಕಳೆದುಕೊಂಡ ಅವರು ಕಾಂಗ್ರೆಸ್ ಪಕ್ಷದಲ್ಲಿಯೇ ಸಕ್ರಿಯರಾಗಿ ಇದ್ದರು. ಇದನ್ನು ಗಮನಿಸಿದ ಕಾಂಗ್ರೆಸ್ ಪಕ್ಷ ಅವರಿಗೆ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದಾಗ ಅದನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಪಕ್ಷದ ವರಿಷ್ಠರ ಮೆಚ್ಚುಗೆಗೆ ಪಾತ್ರರಾದ ಕಾರಣ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಸಹ ನೇಮಕ ಮಾಡಲಾಯಿತು.

ಇದೇ ವೇಳೆ ಎಐಸಿಸಿ ಕಾರ್ಯದರ್ಶಿಯಾಗಿ ನೇಮಕಗೊಂಡ ಬೋಸರಾಜ್, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮಟ್ಟದ ನಾಯಕರಾಗಿ ಬೆಳೆಯುವುದರ ಜೊತೆಗೆ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದರು. ಅವರ ಸಂಘಟನಾ ಚತುರತೆಯನ್ನು ಪರಿಗಣಿಸಿ ತೆಲಂಗಾಣ ಉಸ್ತುವಾರಿಯನ್ನಾಗಿ ವಹಿಸಲಾಯಿತು.

ಭಾರತ್ ಜೋಡೋ ಪಾದಯಾತ್ರೆ ಉಸ್ತುವಾರಿ

ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಿದ ಭಾರತ್ ಜೋಡೋ ಪಾದಯಾತ್ರೆಯ ಕಲ್ಯಾಣ ಕರ್ನಾಟಕ ಭಾಗದ ಉಸ್ತುವಾರಿಯಾಗಿದ್ದ ಎನ್.ಎಸ್.ಬೋಸರಾಜ್ ಅವರು ರಾಯಚೂರುಗೆ ಪಾದಯಾತ್ರೆ ಆಗಮಿಸಿದಾಗ ಅದನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಿದ್ದು ಎಐಸಿಸಿ ಮಟ್ಟದಲ್ಲಿಯೂ ದಾಖಲೆಯಾಗಿದ್ದು ಅಂದಿನಿಂದ ಬೋಸರಾಜ್ ಅವರ ಸಂಘಟನಾತ್ಮಕ ಚತುರತೆಗೆ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿ ಮುಂದೆ ವಿಧಾನಸಭೆಗೆ ಟಿಕೆಟ್ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ಆದರೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಅನಿವಾರ್ಯತೆ ಎದುರಾದಾಗ ಖುದ್ದಾಗಿ ಬೋಸರಾಜ್ ಅವರನ್ನು ನವದೆಹಲಿಗೆ ಆಹ್ವಾನಿಸಿದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ನಿಮ್ಮನ್ನು ಪ್ರಥಮ ಸಂಪುಟದಲ್ಲಿಯೇ ಸಚಿವರನ್ನಾಗಿ ಮಾಡುವುದಾಗಿ ನೀಡಿದ ಭರವಸೆ ಈಗ ಈಡೇರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+