'ಮೈಸೂರು ಪೈಂಟ್ಸ್ ಆಂಡ್ ವಾರ್ನಿಷ್'ಗೆ ಕಾಯಕಲ್ಪ: ಇದೇ ಬಣ್ಣದಿಂದ ರಂಗೇರಲಿವೆ ಸರ್ಕಾರಿ ಕಟ್ಟಡಗಳು
ಬೆಂಗಳೂರು, ಆಗಸ್ಟ್ 19: ರಾಜ್ಯ ಸರ್ಕಾರವು ತನ್ನ ವ್ಯಾಪ್ತಿಯ ಕಾರ್ಖಾನೆಗಳಿಗ ಮರು ಜೀವ ನೀಡಲು ಎಲ್ಲ ತಯಾರಿ ಮಾಡಿಕೊಂಡಿದೆ. ಈಗಾಗಲೇ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL) ಮರುಜೀವ ನೀಡಿ ಲಾಭದತ್ತ ಮುನ್ನಡೆಸಲಾಗುತ್ತಿದೆ. ಇದೀಗ ಚುನಾವಣೆ ವೇಳೆ ಕೋಟ್ಯಂತರ ರೂ. ಮೌಲ್ಯದ ಶಾಹಿ ಉತ್ಪಾದಿಸಿ ಪೂರೈಸಿವು ಸರ್ಕಾರಿ ಸ್ವಾಮ್ಯದ 'ಮೈಸೂರು ಪೈಂಟ್ಸ್ ಆಂಡ್ ವಾರ್ನಿಷ್ ಲಿಮಿಟೆಡ್' ಸಂಸ್ಥೆಗೂ ಕಾಯಕಲ್ಪ ನೀಡಲಾಗುತ್ತಿದೆ.
ಈ ಕುರಿತು ಮೂಲಸೌಕರ್ಯಾಭಿವೃದ್ಧಿ ಹಾಗೂ ಕೈಗಾರಿಕೆ ಸಚಿವ ಪಾಟೀಲ್ ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್) ಮಾಹಿತಿ ನೀಡಿದ್ದಾರೆ. ಮಹತ್ವದ ಗುರಿ ಉದ್ದೇಶದೊಂದಿಗೆ ಮೈಸೂರು ಪೇಂಟ್ಸ್ ಆಂಡ್ ವಾರ್ನಿಷ್ ಲಿಮಿಟೆಡ್ ಸಂಸ್ಥೆಗೆ ಮರುಜೀವ ನೀಡಲಾಗುವುದು.

ಮುಂದಿನ ದಿನಗಳಲ್ಲಿ ರಾಜ್ಯದ ಸರ್ಕಾರದ ಎಲ್ಲಾ ಕಟ್ಟಡಗಳಿಗೆ ಮೈಸೂರು ಪೇಂಟ್ಸ್ ಬಣ್ಣ ಬಳಕೆ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಸರ್ಕಾರಿ ಕಟ್ಟಡಗಳಿಗೆ ಮೈಸೂರು ಪೇಂಟ್ಸ್ ರಾರಾಜಿಸಲಿದೆ. ಇದಲ್ಲದೇ ಇನ್ನೂ ಕೆಲವು ಹೆಚ್ಚಿನ ಪುನಶ್ಚೇತನ ಕ್ರಮಗಳ ಮೂಲಕ 2024-25ನೇ ಸಾಲಿನಲ್ಲಿ 500 ಕೋಟಿ ರೂಪಾಯಿ ಲಾಭ ಗಳಿಕೆ ಮಾಡುವ ಗುರಿ ಹೊಂದಲಾಗಿದೆ ಎಂದ ತಿಳಿಸಿದ್ದಾರೆ.
ಅಭಿವೃದ್ಧಿಯತ್ತ ಕಾರ್ಖಾನೆ
ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಟ್ಟಿ ಬೆಳೆಸಿದ ಸಂಸ್ಥೆಗಳನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲಿದ್ದೇವೆ. ಈ ಪೈಕಿ ಮೈಸೂರು ಪೇಂಟ್ಸ್ ಆಂಡ್ ವಾರ್ನಿಷ್ ಲಿಮಿಟೆಡ್ ಸಹ ಒಂದಾಗಿದೆ. ಈ ಬಗ್ಗೆ ಈಗಾಗಲೆ ಕೆಲವು ಸಭೆಗಳಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿದ್ದ ಸಚಿವರು ಒಂದಷ್ಟು ಪ್ಲಾನ್ ಮಾಡಿಕೊಂಡಿದ್ದರು. ಅವುಗಳ ಸಾಕಾರಕ್ಕೆ ಕಾಲ ಈ ಸನ್ನಿಹಿತವಾಗಿದೆ.
ಇತ್ತೀಚೆಗೆ ನಡೆದ ಕೆಲವು ಸಭೆಗಳಲ್ಲಿ ಸರ್ಕಾರವು ಈ ಕಂಪನಿಯ ಉತ್ಪಾದನ ಸಾಮರ್ಥ್ಯ ಹೆಚ್ಚಿಸು ಜೊತೆಗೆ ವಹೀವಾಟು ಹೆಚ್ಚಿಸಲು ಕ್ರಮಕ್ಕೆ ಮುಂದಾಗಿದ್ದರು. ಅದಕ್ಕಾಗಿ ಅನುಸರಿಸಬೇಕಾದ ಕಾರ್ಯತಂತ್ರಗಳನ್ನು ರೂಪಿಸಲು ಸಂಬಂಧಿಸಿದವರಿಗೆ ಸೂಚಿಸಲಾಗಿತ್ತು. ಅದರ ಭಾಗವಾಗಿಯೇ ಇಂದು ರಾಜ್ಯದ ಸರ್ಕಾರಿ ಕಟ್ಟಡಗಳಿಗೆ ಇದೇ ಕಂಪನಿಯ ಬಣ್ಣ ಬಳಿಯಲು ನಿರ್ಧರಿಸಲಾಗಿದೆ. ಈ ಮೂಲಕ ಮೈಸೂರು ಪೇಂಟ್ಸ್ ಆಂಡ್ ವಾರ್ನಿಷ್ ಲಿಮಿಟೆಡ್ ಅನ್ನು ಒಂದು ಬ್ರ್ಯಾಂಡ್ ಆಗಿ ಬದಲಾಯಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಮನೆಗಳಿಗೆ ಬಣ್ಣ ಉತ್ಪದಾನೆ ಮಾರುಕಟ್ಟೆಗೆ ಲಗ್ಗೆ ಶೀಘ್ರ
ಇದೇ ಕಂಪನಿಯು ವಾರ್ಷಿಕವಾಗಿ ಪ್ರಸ್ತುತದಲ್ಲಿ 35 ಕೋಟಿ ವಹೀವಾಟು ನಡೆಸುತ್ತದೆ. ಆದರೆ ಈ ಬಾರಿ ನಡೆದ ಲೋಕಸಭಾ ಚುನಾವಣೆ 2024 ವೇಳೆ ಒಟ್ಟು 77ಕೋಟಿ ರೂಪಾಯಿ ಶಾಹಿ ಉತ್ಪಾದಿಸಿ ಕಳುಹಿಸಿತ್ತು. ಈ ಮೂಲಕ ಅತ್ಯಧಿಕ ವಹೀವಾಟು ನಡೆಸಿತ್ತು.
ಇಂದಿನ ಸ್ಪರ್ಧಾತ್ಮಕ ಯುಗದ ದೂರದೃಷ್ಟಿ ಇಟ್ಟುಕೊಂಡು ಕಂಪನಿಯನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಆದಷ್ಟು ಶೀಘ್ರವೇ ಎಮಲ್ಷನ್ ತಯಾರಿಸಲು ಯೋಜಿಸಲಾಗಿದೆ. ಮೂಲಕ ಈ ಕಂಪನಿಯು ಮನೆಗಳಿಗೆ ಬಣ್ಣ ಹಚ್ಚುವ ಮಾರುಕಟ್ಟೆಗೂ ಶೀಘ್ರವೇ ಲಗ್ಗೆ ಇಡಲಿದೆ ಎಂದು ಎಂಬಿ ಪಾಟೀಲ್ ಈ ಹಿಂದೆ ತಿಳಿಸಿದ್ದರು. ಅದೀಗ ನಿಜವಾಗುತ್ತಿದೆ.












Click it and Unblock the Notifications