'ನನ್ನನ್ನು ಕೆಲವರು ಹಿಂಬಾಲಿಸುತ್ತಿದ್ದಾರೆ, ಫೋನ್ ಟ್ಯಾಪ್ ಆಗಿದೆ'

Posted By: Gururaj
Subscribe to Oneindia Kannada
ನನ್ನ ಫೋನ್ ಟ್ರ್ಯಾಪ್ ಆಗಿದೆ ಎಂದು ದೂರಿದ ಡಿ ಕೆ ಶಿವಕುಮಾರ್ | Oneindia Kannada

ಬೆಂಗಳೂರು, ನವೆಂಬರ್ 07 : 'ನನ್ನ ದೂರವಾಣಿ ಕರೆಯ ಕದ್ದಾಲಿಕೆಯೂ ನಡೆಯುತ್ತಿದೆ. ನಿತ್ಯ ನನ್ನನ್ನು ಕೆಲವರು ಹಿಂಬಾಲಿಸುತ್ತಿದ್ದಾರೆ' ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸೋಮವಾರ ತಮ್ಮ ಫೋನ್ ಟ್ಯಾಪ್ ಆಗುತ್ತಿದೆ ಎಂದು ಹೇಳಿದ್ದರು.

ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, 'ನಿತ್ಯ ನನ್ನನ್ನ ಕೆಲವರು ಫಾಲೋ ಮಾಡುತ್ತಿದ್ದಾರೆ. ನಾನು ಹೋದ ಕಡೆಯಲ್ಲ ಕೆಲವು ಬೆನ್ನ ಹಿಂದೆ ಬರುತ್ತಿದ್ದಾರೆ. ಆದರೆ, ನಾನು ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ' ಎಂದರು.

'ಆದಾಯ ತೆರಿಗೆ ಇಲಾಖೆಯಿಂದ ನನ್ನ ಕುಟುಂಬದ ಫೋನ್ ಕದ್ದಾಲಿಕೆ'

D.K.Shiva Kumar

'ಕೆಲವು ಸಂಸ್ಥೆಗಳಿಗೆ ಫೊನ್ ಕದ್ದಾಲಿಕೆ ಮಾಡುವ ಅಧಿಕಾರ ಇರುತ್ತದೆ. ಇಂಥವರೇ ಮಾಡುತ್ತಿದ್ದಾರೆ ಎಂದು ಹೇಳುವುದು ಹೇಗೆ?. ನಾನು ಅಧಿಕಾರಕ್ಕೆ ಬಂದ ದಿನದಿಂದ ಇಂತಹ ಪ್ರಯತ್ನಗಳು ನಡೆಯುತ್ತಿವೆ' ಎಂದು ಡಿ.ಕೆ.ಶಿವಕುಮಾರ್ ಆರೋಪ ಮಾಡಿದರು.

ಸಿಎಂ, ಸಚಿವರ ಫೋನ್ ಕದ್ದಾಲಿಕೆ ನಿಲ್ಲಿಸುವಂತೆ ಕೇಂದ್ರಕ್ಕೆ ಪತ್ರ

'ನಾನು ಕನಕಪುರದ ಬಂಡೆಯಿಂದ ಬಂದವನು. ತಲೆ ಗಟ್ಟಿ ಇದೆ ಎಂದ ಬಂಡೆಗೆ ಚಚ್ಚಿಕೊಂಡರೆ ಪೆಟ್ಟಾಗುವುದು ತಲೆಗೆ' ಎಂದು ಶಿವಕುಮಾರ್ ಹೇಳಿದರು.

ಇಂದೂ ವಿಚಾರಣೆ : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪತ್ನಿ, ಪುತ್ರಿ, ತಾಯಿಯ ಜೊತೆ ಸೋಮವಾರ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇಂದು ಮಧ್ಯಾಹ್ನ ಸಹ ಅವರು ವಿಚಾರಣೆ ಎದುರಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Energy minister D.K.Shiva Kumar on November 7, 2017 said that his phone had been tapped and he was followed wherever I go.
Please Wait while comments are loading...