ನನ್ನ ಮನೆ ಹಾಳಾಗಿದೆ; ನನ್ನ ಸೋಲಿಗೆ ಪಕ್ಷದ ಕೆಲ ಮುಖಂಡರೇ ಕಾರಣ: ವಿ. ಸೋಮಣ್ಣ
ಚಾಮರಾಜನಗರ, ಮೇ 18: ಚುನಾವಣಾಯಲ್ಲಿ ಎರಡು ಕ್ಷೇತ್ರದಲ್ಲಿ ಸೋಲು ಅನುಭವಿಸಿದ ಮಾಜಿ ಸಚಿವ ವಿ ಸೋಮಣ್ಣ ಬಿಜೆಪಿ ಪಕ್ಷದ ನಾಯಕರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಚಾಮರಾಜನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ತಮ್ಮ ಸೋಲಿಗೆ ಪಕ್ಷದ ಕೆಲ ಮುಖಂಡರೇ ಕಾರಣ. ನನಗೆ ಮಾಡಿದ ಪಾಪದ ಕೆಲಸ ಬೇರೆ ಯಾರಿಗೂ ಮಾಡುವುದು ಬೇಡ ಎಂದು ವಿ. ಸೋಮಣ್ಣ ಕಿಡಿಕಾರಿದರು.

ಪಕ್ಷದ ಕೆಲವರ ಪಾಪದ ಕೆಲಸದಿಂದ ನನಗೆ ಸೋಲಾಯಿತು. ಕೆಲವರು ಈ ಪಾಪದ ಕೆಲಸ ಮಾಡಿದ್ದಾರೆ, 7-8 ಮಂದಿಯಿಂದ ಈ ಸೋಲುಂಟಾಯಿತು, ನನ್ನ ಸಮಾಜದವರೇ ನನಗೆ ಕೈ ಕೊಟ್ಟರು, ಯಾರಾರಯರೋ ಬೋರ್ಡ್ ಅಧ್ಯಕ್ಷರು, ಮಠಗಳಿಗೆ ದುಡ್ಡು ಕೊಟ್ಟು ಜನರ ದಿಕ್ಕು ತಪ್ಪಿಸಿದರು ಎಂದು ಬಿಜೆಪಿ ಮುಖಂಡರ ವಿರುದ್ಧ ಗಂಬೀರ ಆರೋಪ ಮಾಡಿದರು.
ಇನ್ನೂ ನನ್ನ ಸೋಲಿಗೆ ಯಾರ ಕಾರಣ ಅಂತ ನನಗೆ ಗೊತ್ತಿದೆ. ಯಾರೂ ಈ ಮಾಮಾ ಕೆಲಸ ಮಾಡಿದ್ದು ಅಂತಾ ಗೊತ್ತು. ಒಂದು ಬುಕ್ ಬರೆಯೋವಷ್ಟುನಂಗೂ ಗೊತ್ತಿದೆ. ನಾನು ಏನೂ ತಿಳಿಯದೆ ಇರುವ ಮುಗ್ಧ ಅಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ವಿ ಸೋಮಣ್ಣ ಪರೋಕ್ಷವಾಗಿ ಕಿಡಿಕಾರಿದರು, ಇನ್ನೂ ಎಂಟತ್ತು ಜನರ ಪಾಪದ ಕೆಲಸದಿಂದ ನನ್ನ ಮನೆ ಹಾಳಾಗಿದೆ. ಮನೆ ಹಾಳು ಮಾಡುವ ಕೆಲಸ ಮಾಡಿದ್ದಾರೆ. ಜೊತೆಯಲ್ಲೇ ಇದ್ದೆ ಕತ್ತು ಕುಯ್ದಿದ್ದಾರೆ. ಸ್ವಂತ ತಮ್ಮನ್ನೇ ಮರ್ಡರ್ ಮಾಡಿದವನು. ಅಂತಹವರ ಜೊತೆ ಹೋಗುವ ನಮ್ಮವರು ಎಂತಹ ಮುಟ್ಟಾಳರು ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.
ನನ್ನ ಗೋವಿಂದರಾಜ ನಗರ ಕ್ಷೇತ್ರವೇ ಚಿನ್ನದಂತಿತ್ತು. ನಾನು ನನ್ನ ಕ್ಷೇತ್ರವನ್ನ ನಾನಾಗೆ ಬಿಟ್ಟು ಬರಲಿಲ್ಲ. ಹೈಕಮಾಂಡ್ ಆದೇಶದ ಮೇರೆಗೆ ನಾನು ಈ ಕ್ಷೇತ್ರಕ್ಕೆ ಬಂದೆ. ಜಿಲ್ಲೆಯನ್ನು ಅಭಿವೃದ್ಧಿ ಮಾಡುವ ಕನಸು ಹೊಂದಿದ್ದೆ. ಆದರೆ, ಒಬ್ಬನಿಗೋಸ್ಕರ ಇಡಿ ಜಿಲ್ಲೆ ಹಾಳು ಮಾಡಿದರು ಎಂದು ಎಂ ರುದ್ರೇಶ್ ವಿರುದ್ಧ ಸೋಮಣ್ಣ ಪರೋಕ್ಷ ವಾಗ್ದಾಳಿ ನಡೆಸಿದರು.
ಚಾಮರಾಜನಗರ ಕ್ಷೇತ್ರಕ್ಕೆ ಅವನು ಮೊದಲು ಬಂದಾಗಲೇ ನೀವು ಒಳಕ್ಕೆ ಬಿಡಬಾರದಿತ್ತು. ಮಠಗಳಿಗೆ ಅನುದಾನ ನೀಡಿ ಅದರಲ್ಲೇ ಕಮಿಷನ್ ಪಡೆದ. ನನ್ನ ವಿರುದ್ಧ ಜಾತಿ ಎತ್ತಿಕಟ್ಟಿದ, ನನ್ನ ಮಗ ಈ ಕ್ಷೇತ್ರಕ್ಕೆ ಬರುತ್ತಾನೆ ಎಂದು ಕಥೆ ಕಟ್ಟಿ ಜನರ ದಾರಿ ತಪ್ಪಿಸಿದ, ನನ್ನ ವಿರುದ್ಧ ಅಪಪ್ರಚಾರ ಮಾಡಿದ. ಅವನ ಮಾತು ಕೇಳಿಕೊಂಡು ನನ್ನ ವಿರುದ್ಧ ಕೆಲವರು ಕುತಂತ್ರ ಮಾಡಿದರು. ಅವನಿಗೆ ಯಾರು ಹೇಳಿ ಕೊಟ್ಟರು ಎಂದು ನನಗೆ ಗೊತ್ತು. ಈ ಬಗ್ಗೆ ಬೆಂಗಳೂರಿನಗೆ ದೂರು ಕೊಟ್ಟರು ಏನು ಪ್ರಯೋಜನವಾಗಲಿಲ್ಲ ಎಂದು ಬಿಜೆಪಿ ಹಿರಿಯ ನಾಯಕರ ವಿರುದ್ದ ಅಸಮಾಧಾನ ಹೊರ ಹಾಕಿದರು.
ಕಾಂಗ್ರೆಸ್‌ನಲ್ಲಿ ಇದ್ದಿದ್ದಾಗ ನನ್ನ ಬೆಲೆ ಏನೆಂದು ಗೊತ್ತಾ, ಈಗಲೂ ನಾನು ಕಾಂಗ್ರೆಸ್‌ನಲ್ಲಿದ್ದರೆ ಹೇಗಿರುತ್ತಿದ್ದೆ ಗೊತ್ತಾ ಎಂದ ಅವರು, ನಮ್ಮ ಸಮಾಜದವರು ಬೆಂಗಳೂರಿನಲ್ಲಿ ಕುಳಿತು ಆಟವಾಡಿಸುತ್ತಿದ್ದಾರೆ. ಇಲ್ಲಿಗೆ ಒಬ್ಬ ಬಂದು ಆಟವಾಡುತ್ತಿದ್ದಾನೆ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ದ ಮಾಜಿ ಸಚಿವ ಸೋಮಣ್ಣ ವಾಗ್ದಾಳಿ ನಡೆಸಿದರು.












Click it and Unblock the Notifications