• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಂಸಲೇಖ ವಿವಾದಾತ್ಮಕ ಹೇಳಿಕೆ: ಹನುಮಂತನಗರ ಠಾಣೆಗೆ ನೀಡಿದ ದೂರಿನಲ್ಲಿ ತಾಂತ್ರಿಕ ದೋ‍ಷ

|
Google Oneindia Kannada News

ಬೆಂಗಳೂರು, ನ. 17: ಪೇಜಾವರದ ಶ್ರೀ ಕೀರ್ತಿ ಶೇಷ ವಿಶ್ವೇಶ ತೀರ್ಥ ಶ್ರೀಪಾದ ಅವರ ವಿರುದ್ಧ ಸಂಗೀತ ನಿರ್ದೇಶಕ ಹಂಸಲೇಖ ನೀಡಿದ್ದ ಹೇಳಿಕೆಯ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಸುದ್ದಿ ಓದಿರುತ್ತೀರಿ. ಈ ವಿವಾದಾತ್ಮಕ ಹೇಳಿಕೆ ಸಂಬಂಧ ಹಂಸಲೇಖ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಗೆ ನೀಡಿದ್ದ ದೂರಿನ ತನಿಖೆಗೆ ತಾಂತ್ರಿಕ ದೋಷ ಎದುರಾಗಿದೆ. ಹಂಸಲೇಖ ಅವರು ಹೇಳಿಕೆ ನೀಡಿರುವ ಘಟನಾ ಸ್ಥಳವೇ ಬೇರೆ, ದೂರಿನಲ್ಲಿ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಹಂಸಲೇಖ ಅವರ ವಿಚಾರಣೆ ನಡೆಸಲಾಗದ ಸ್ಥಿತಿ ಎದುರಾಗಿದೆ.

ಮೈಸೂರಿನ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅಸ್ಪೃಶ್ಯತೆ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆ ನೀಡಿದ್ದರು. ಅದು ಭಾರೀ ವಿವಾದಕ್ಕೆ ನಾಂದಿ ಹಾಡಿತ್ತು. ಪೇಜಾವರ ಕೀರ್ತಿ ಶೇಷ ವಿಶ್ವೇಶ ತೀರ್ಥ ಶ್ರೀಪಾದರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಲಾಗಿದೆ ಎಂದ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲ ತಾಣದಲ್ಲಿ ಹಂಸಲೇಖ ಅವರ ಪರ ವಿರೋಧದ ಚರ್ಚೆಗಳು ಹುಟ್ಟಿಕೊಂಡಿದ್ದವು. ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಹಂಸಲೇಖ ಕ್ಷಮೆ ಕೇಳಿದ್ದರು. ಇದರ ನಡುವೆ ಹಂಸಲೇಖ ಅವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ನೀಡಲಾಗಿದೆ.

ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಶ್ರೀನಗರದ ನಿವಾಸಿ ಕೃಷ್ಣರಾಜ ಎಂಬುವರು ಹನುಮಂತನಗರ ಪೊಲೀಸ್ ಠಾಣೆಗೆ ಮಂಗಳವಾರ ದೂರು ನೀಡಿ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದರು. ಮೈಸೂರಿನ ಸಾರ್ವಜನಿಕ ಸಮಾರಂಭದಲ್ಲಿ ಕನ್ನಡ ಚಿತ್ರ ರಂಗದ ಸಂಗೀತ ನಿರ್ದೇಶಕ ಹಂಸಲೇಖ ಅಲಿಯಾಸ್ ಗಂಗರಾಜ ಎಂಬ ವ್ಯಕ್ತಿ ತನ್ನ ಭಾಷಣದಲ್ಲಿ ತಮ್ಮ ಸಮುದಾಯದ ಗುರುಗಳಾದ ಶ್ರೀ ಕೀರ್ತಿಶೇಷ ವಿಶ್ವೇಶ ತೀರ್ಥ ಶ್ರೀಪಾದರು ಸಾಮಾಜಿಕ ಸಾಮರಸ್ಯಕ್ಕಾಗಿ ಕೈಗೊಂಡಿರುವ ಕಾರ್ಯದ ಬಗ್ಗೆ ಬಹಳ ಲೇವಡಿ ಮಾಡಿದ್ದಾರೆ. ಇದರಿಂದ ನನ್ನ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಿದೆ. ನಮ್ಮ ಆರಾಧ್ಯ ದೇವ ಬಿಳಿಗಿರಿ ರಂಗಸ್ವಾಮಿ ದೇವರ ಬಗ್ಗೆ ಜನಪದೀಯವಾಗಿ ಬಂದಿರುವ ಕಥೆಯನ್ನು ತುಚ್ಛವಾಗಿ ಪರಿಗಣಿಸಿದ್ದಾರೆ. ಇದರಿಂದ ನನ್ನ ಧಾರ್ಮಿಕ ನಂಬಿಕೆಗೆ ಭಂಗ ತಂದಿರುವುದಲ್ಲದೇ ಆಸ್ತಿಕ ಸಮುದಾಯದ ಭಾವನೆಗಳನ್ನು ಕೆರಳಿಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ದೂರಿನ ಸಂಬಂಧ ಎನ್‌ಸಿಆರ್ ದಾಖಲಿಸಿಕೊಂಡಿರುವ ಪೊಲೀಸರು, ದೂರು ಅರ್ಜಿ ಪರಿಶೀಲನೆ ನಡೆಸಿದ್ದಾರೆ. ಹಂಸಲೇಖ ಅವರ ಹೇಳಿಕೆಯ ಬಗ್ಗೆ ನೀಡಿರುವ ದೂರಿನಲ್ಲಿ ಸ್ಪಷ್ಟತೆ ಇಲ್ಲ. ಇನ್ನು ಘಟನೆ ನಡೆದಿರುವುದು ಮೈಸೂರಿನಲ್ಲಿ ತಾಂತ್ರಿಕವಾಗಿ ನೋಡುವುದಾರೆ ಘಟನೆ ನಡೆದ ಸ್ಥಳದಲ್ಲಿ ದೂರು ನೀಡಬೇಕು. ಯಾವುದೇ ಠಾಣೆಗೆ ದೂರು ನೀಡಿದರೂ, ಅದನ್ನು ಸಂಬಂಧ ಪಟ್ಟ ಠಾಣೆಗೆ ವರ್ಗಾಯಿಸಲಾಗುತ್ತದೆ. ಹಂಸಲೇಖ ಅವರು ಹನುಮಂತನಗರ ಠಾಣೆ ವ್ಯಾಪ್ತಿಯಲ್ಲಿ ನೀಡಿರುವ ಹೇಳಿಕೆ ಅದಲ್ಲ. ಇನ್ನೂ ದೂರಿನಲ್ಲಿಯೇ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ದೂರಿನ ವಿಚಾರಣೆ ಸಂಬಂಧ ಮೇಲಾಧಿಕಾರಿಗಳ ಸಲಹೆ ಪಡೆಯಲು ಮುಂದಾಗಿದ್ದಾರೆ.

   ಬಿಜೆಪಿ ಗೆ ವಾರ್ನಿಂಗ್ ಕೊಟ್ಟ ಡಿಕೆ ಶಿವಕುಮಾರ್ | Oneindia Kannada

   ''ವಿವಾದಾತ್ಮಕ ಹೇಳಿಕೆ ಬಗ್ಗೆ ಕೊಟ್ಟಿರುವ ದೂರನ್ನು ಎನ್‌ಸಿಆರ್ (non cognizable report) ಮಾಡಿಕೊಂಡಿದ್ದೇವೆ. ದೂರಿನಲ್ಲಿ ಅಸ್ಪಷ್ಟತೆ ಇದೆ. ಘಟನೆ ಕುರಿತು ಯಾವುದೇ ಸಾಕ್ಷಾಧಾರಗಳನ್ನು ಸಹ ನೀಡಿಲ್ಲ. ಬಹು ಮುಖ್ಯವಾಗಿ ನಮ್ಮ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿಲ್ಲ. ಎನ್‌ಸಿಆರ್ ವಿಚಾರಣೆಗೆ ಇನ್ನೂ 45 ದಿನ ಕಾಲಾವಕಾಶ ಇರುವುದರಿಂದ ಮೇಲಾಧಿಕಾರಿಗಳ ಅಭಿಪ್ರಾಯದ ಮೇರೆಗೆ ಮಂದಿನ ನಿರ್ಧಾರ ಕೈಗೊಳ್ಳಲಾಗುವುದು. ವಿವಾದಾತ್ಮಕ ವಿಚಾರದಲ್ಲ ಕೆಲವರು ಪ್ರಚಾರದ ಉದ್ದೇಶದಿಂದಲೂ ದೂರು ನೀಡುತ್ತಾರೆ. ಎಲ್ಲವನ್ನು ಪ್ರಾಥಮಿಕವಾಗಿ ಪರಿಶೀಲಿಸಿ ನ್ಯಾಯ ಸಮ್ಮತ ವಿಚಾರಣೆ ನಡೆಸಲಾಗುತ್ತದೆ,'' ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

   English summary
   Music director Hamsalekha controversial statement: Hanumanthanagar police found technical error in complaint
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X