ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಕ್ಕೆ ಪ್ರಧಾನಿ ಮೋದಿ ಬರುವ ಮುನ್ನವೇ ಮುರುಘಾ ಸ್ವಾಮೀಜಿ ಅರೆಸ್ಟ್

|
Google Oneindia Kannada News

ಬೆಂಗಳೂರು, ಸೆ.1: ಪೋಕ್ಸೋದಡಿ ಪ್ರಕರಣ ದಾಖಲಾಗಿ ಏಳು ದಿನ ಕಳೆದರೂ ಮುರುಘಾ ಶರಣರ ಬಂಧನ ಆಗದಿರುವುದು ಸರ್ಕಾರದ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಗಿತ್ತು. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಸೆ.2ರಂದು ಕರ್ನಾಟಕ ಪ್ರವಾಸಕ್ಕೆ ಬರಲಿದ್ದು, ಸರ್ಕಾರ ಮುಜುಗರಿದಂದ ಪಾರಾಗಲು ಗುರುವಾರ ತಡರಾತ್ರಿ ಸ್ವಾಮೀಜಿಯನ್ನು ಬಂಧಿಸಿದೆ ಎಂದು ಹೇಳಲಾಗುತ್ತಿದೆ.

ಮಕ್ಕಳ ಮೇಲೆ ಸ್ವಾಮೀಜಿ ನಡೆಸಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಮೈಸೂರಿನ ಒಡನಾಡಿ ಸಂಸ್ಥೆಯ ಮೂಲಕ ನೊಂದ ಮಕ್ಕಳು ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಆ.26ರಂದು ದೂರು ದಾಖಲಿಸಿದ್ದರು. ಆರಂಭದಲ್ಲಿ ಇದು ಗಂಭೀರವಾಗಿ ಕಾಣಿಸದಿದ್ದರೂ ಸಹ ಒಂದೆರಡು ದಿನ ಕಳೆಯುತ್ತಿದ್ದಂತೆ ಸ್ವಾಮೀಜಿ ಬಂಧನಕ್ಕೆ ಒತ್ತಡ ತೀವ್ರವಾಗಿತ್ತು. ಆದರೆ, ಪ್ರಭಾವಿ ಮಠದ ಸ್ವಾಮೀಜಿಯನ್ನು ಬಂಧಿಸುವಲ್ಲಿ ಸರ್ಕಾರ ಹಿಂದೇಟು ಹಾಕಿತ್ತು. ಚುನಾವಣೆಗೆ ಕೆಲವು ತಿಂಗಳ ಬಾಕಿ ಇರುವ ಸಂದರ್ಭದಲ್ಲಿಯೇ ಪ್ರಭಾವಿ ಸಮುದಾಯದ ಸ್ವಾಮೀಜಿಯ ಬಂಧನ ಮಾಡಿದರೆ ಏನಾಗಬಹುದು ಎಂಬ ಲೆಕ್ಕಾಚಾರ ಕಾಣುತ್ತಿತ್ತು. ಇತ್ತ ವಿರೋಧ ಪಕ್ಷಗಳೂ ಸಹ ಸ್ವಾಮೀಜಿಯನ್ನು ಬಂಧಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕದೆ ಅವರೂ ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸಿದ್ದವು.

ಪೋಕ್ಸೋ ಪ್ರಕರಣದಲ್ಲಿ ಮುರುಘಾ ಮಠದ ಶಿವಮೂರ್ತಿ ಶ್ರೀಗಳ ಬಂಧನಪೋಕ್ಸೋ ಪ್ರಕರಣದಲ್ಲಿ ಮುರುಘಾ ಮಠದ ಶಿವಮೂರ್ತಿ ಶ್ರೀಗಳ ಬಂಧನ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸಹಿತ ಹಲವು ಬಿಜೆಪಿ ನಾಯಕರು ನೇರವಾಗಿ ಶ್ರೀಗಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು. ಯಾವುದೇ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾದಾಗ ಬಂಧಿಸಿ ವಿಚಾರಣೆ ನಡೆಸದೆ ಸರ್ಕಾರ ದ್ವಂದ್ವ ನಿಲುವು ತಾಳಿದೆ. ಎಲ್ಲರಿಗೂ ಒಂದೇ ಕಾನೂನು ಅನ್ವಯ ಆಗಬೇಕಾದ ಜಾಗದಲ್ಲಿ ಸರ್ಕಾರವೇ ಕೆಲವರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂಬ ದೂರುಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಕೇಳಿಬಂದಿದ್ದವು.

Murugha Swamiji was arrested before Prime Minister Modi came to the Karnataka

ಈ ಮಧ್ಯೆ ಕೆಲವು ಸಂಘಟನೆಗಳು ಕಳೆದೆರಡು ದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಸಿವೆ. ದೂರು ನೀಡಿದ ಮಕ್ಕಳು ಹಿಂದುಳಿದ ವರ್ಗಕ್ಕೆ ಸೇರಿದ್ದು, ಆ ಸಮುದಾಯಗಳು ಸ್ವಾಮೀಜಿ ಬಂಧನ ಆಗದಿರುವುದನ್ನು ತೀವ್ರವಾಗಿ ಖಂಡಿಸಿದ್ದವು.

Murugha Swamiji was arrested before Prime Minister Modi came to the Karnataka

ಮೋದಿ ಕರ್ನಾಟಕ ಪ್ರವಾಸ:

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಸೆ.2ರಂದು ಮಂಗಳೂರಿಗೆ ಬರಲಿದ್ದಾರೆ. ಅಲ್ಲಿ ಸರ್ಕಾರದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುವುದು ಸಹಜ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರಭಾವಿ ಮಠವೊಂದರ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿ 7 ದಿನ ಕಳೆದರೂ ರಾಜ್ಯದ ಬಿಜೆಪಿ ಸರ್ಕಾರ ಅವರ ಬಂಧನ ಮಾಡದಿರುವುದು ಇಂತಹ ಸಂದರ್ಭದಲ್ಲಿ ಮುಜುಗರ ಉಂಟುಮಾಡುವುದು ಸಹಜ. ಇಂತಹ ಗೊಂದಲಗಳಿಗೆ ಅವಕಾಶ ಒದಗಬಾರದು ಎಂಬ ಕಾರಣದಿಂದಲೇ ಸ್ವಾಮೀಜಿಯನ್ನು ತಡರಾತ್ರಿ ಬಂಧನಕ್ಕೆ ಒಳಪಡಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಭಕ್ತರಲ್ಲಿ ಪ್ರಶ್ನೆ:
ಕೋಟೆ ನಾಡು ಚಿತ್ರದುರ್ಗದ ಮುರುಘಾ ಮಠ ಶಿವಮೂರ್ತಿ ಮುರುಘಾ ಶರಣರ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ಹಿನ್ನಲೆಯಲ್ಲಿ ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಸೆ.1ರಂದು ವಿಚಾರಣೆ ನಡೆಸಿದ್ದ ಚಿತ್ರದುರ್ಗ ಜಿಲ್ಲಾ 1ನೇ ಹೆಚ್ಚುವರಿ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡು ಶರಣರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆ.2ಕ್ಕೆ ಮುಂದೂಡಿಕೆ ಮಾಡಿದೆ.

ಹೀಗೆ ಪ್ರಕರಣ ದಾಖಲಾಗಿ ಏಳು ದಿನ ಕಳೆದರೂ ಸುಮ್ಮನಿದ್ದ ಸರ್ಕಾರ ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆಗೆ ಒಂದು ದಿನ ಬಾಕಿ ಇರುವಾಗ ಗುರುವಾರ ತಡರಾತ್ರಿ ಅವರನ್ನು ಬಂಧಿಸಿದ್ದು ಏಕೆ ಎಂಬ ಪ್ರಶ್ನೆ ಅವರ ಭಕ್ತ ವಲಯದಲ್ಲಿ ಕಾಡುತ್ತಿದೆ. ಆದರೆ, ಇದು ಸರ್ಕಾರದ ಮುಜುಗರ ತಪ್ಪಿಸಿಕೊಳ್ಳಲು ಕೊನೆಯವರೆಗೂ ಕಾದು ನೋಡಿದ ಅನುಸರಿಸಿದ ತಂತ್ರ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ.

English summary
Muruga swamiji was not arrested even after 7 days after the Pocso case was registered, which led to public outcry against the government. Meanwhile, Prime Minister Narendra Modi is coming to Karnataka on September 2 and it is being said that Swamiji was arrested late on Thursday night to avoid embarrassing the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X