'ಆರ್.ಅಶೋಕ್ ಸೇರಿ ಆ 30 ಮಾಜಿ ಸಚಿವರಿಗೆ ಮುನಿರತ್ನ 'HIV' ಇಂಜೆಕ್ಷನ್ ಕೊಡಿಸಿದ್ದಾನೆ': ಸ್ಪೋಟಕ ಮಾಹಿತಿ ಬಹಿರಂಗ
ಮೈಸೂರು, ಮಾರ್ಚ್ 26: 2023ರ ವಿಧಾನಸಭಾ ಚುಣಾವಣೆಯಲ್ಲಿ ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿದ್ದ ರಾಜರಾಜೇಶ್ವರಿ ನಗರವನ್ನ ಗೆಲ್ಲುವ ನಿಟ್ಟಿನಲ್ಲಿ HIV ಇಂಜೆಕ್ಷನ್ ಕೊಡಿಸಿದ್ದಾರೆ ಎನ್ನುವ ಬಗ್ಗೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯಾಗಿತ್ತು. ರಾಜಕೀಯ ಎದುರಾಳಿಯಾಗಿದ್ದ ಡಿ ಕೆ ಸುರೇಶ್ ಹಾಗೂ ಕುಸುಮಾ ಹನುಮಂತರಾಯಪ್ಪ ಅವರ ವಿರುದ್ಧ ಹೊಸ ಷಡ್ಯಂತ್ರವನ್ನ ರೂಪಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಮುನಿರತ್ನರಿಂದ ಅವರ ರಾಜಕೀಯ ವಿರೋಧಿಗಳಿಗೆ HIV ಹನಿಟ್ರ್ಯಾಪ್ ನಡೆಸಲು ಪ್ಲಾನ್ ಸಿದ್ದವಾಗಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಇದೀಗ ಮುನಿರತ್ನ ಅವರು ಬರೋಬ್ಬರಿ 30 ಮಾಜಿ ಸಚಿವರಿಗೆ HIV ಇಂಜೆಕ್ಷನ್ ಕೊಡಿಸಿದ್ದಾರೆ ಎನ್ನುವ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಈ ಕುರಿತು ಮೈಸೂರಿನಲ್ಲಿ ಕಾಂಗ್ರೆಸ್ ವಕ್ತಾರರಾದ ಎಂ ಲಕ್ಷ್ಮಣ್ ಅವರು ಮಾತನಾಡಿ, ಬಿಜೆಪಿ ಶಾಸಕ ಮುನಿರತ್ನ 30 ಮಾಜಿ ಸಚಿವರಿಗೆ ಎಚ್ಐವಿ ಇಂಜೆಕ್ಷನ್ ಕೊಡಿಸಿದ್ದಾನೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.ವಿಪಕ್ಷ ನಾಯಕ ಆರ್. ಅಶೋಕಗೆ ಮುನಿರತ್ನ ನೂರಕ್ಕೆ ನೂರರಷ್ಟು ಎಚ್ಐವಿ ಇಂಜೆಕ್ಷನ್ ನೀಡಿದ್ದಾನೆ. ಎಚ್ಐವಿ ಇಂಜೆಕ್ಷನ್ ನೀಡಿರುವುದರಿಂದ ಆರ್.ಅಶೋಕ್ ಬಣ್ಣ ಬದಲಾಗಿದೆ. ಆರ್ ಅಶೋಕ್ ತುಟಿ ಮೊದಲಿನಂತೆ ಇಲ್ಲ. ಕೈ ಬಣ್ಣ ಸಹ ಬದಲಾಗಿದೆ. ವಿಪಕ್ಷ ನಾಯಕ ಆರ್ ಅಶೋಕ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

ಅಲ್ಲದೇ ಬಿಜೆಪಿ ಶಾಸಕ ಮುನಿರತ್ನ ಬಳಿ ಸುಮಾರು 200 ಜನರ ಸಿಡಿ ಇದೆ 30 ಮಾಜಿ ಸಚಿವರಿಗೆ ಮುನಿರತ್ನ ಎಚ್ ಐ ವಿ ಇಂಜೆಕ್ಷನ್ ಕೊಡಿಸಿದ್ದಾನೆ. ಮುನಿರತ್ನನನ್ನು ಒದ್ದು ಬಾಯಿ ಬಿಡಿಸಿದರೆ ಎಲ್ಲಾ ಹೊರಗಡೆ ಬರುತ್ತದೆ. ಬಿಜೆಪಿ ನಾಯಕರ ಸುಮಾರು 200 ಸಿಡಿಗಳು ಇರಬಹುದು. ಆ ಸಿಡಿಯ ಮಹಾನಾಯಕ ಶಾಸಕ ಮುನಿರತ್ನ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಮುನಿರತ್ನ ಅನೇಕರಿಗೆ ಹೆಚ್‌ಐವಿ ಇಂಜೆಕ್ಷನ್ ಕೊಟ್ಟಿದ್ದಾನೆ. ಬಾಂಬೇ ಬಾಯ್ಸ್ ಸಿಡಿಯೂ ಇರಬಹುದು. ಆ ಪೈಕಿ ಮೈಸೂರಿನ ವಿಧಾನ ಪರಿಷತ್ ಸದಸ್ಯರು ಒಬ್ಬರ ಸಿಡಿಯೂ ಇರಬಹುದು ಅಂತಾ ಅನಿಸುತ್ತದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಸಿಎಂ ಕುರ್ಚಿ ಉಳಿಸಿಕೊಳ್ಳಲು ಹನಿಟ್ರ್ಯಾಪ್ ವಿಚಾರವನ್ನು ಬಯಲಿಗೆ ತರಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದರ ಸೂತ್ರಧಾರಿ ಎಂದು ಆರ್ ಅಶೋಕ್ ಅವರು ಹೇಳಿದ್ದಾರೆ ಎಂದರು.
ಇನ್ನೂ ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಸಂಘರ್ಷದ ಭಾಗವಾಗಿ ಹನಿಟ್ರ್ಯಾಪ್ ಬಯಲಿಗೆ ಬಂದಿದೆ ಎಂದು ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರು ಆರೋಪಿಸಿದ್ದಾರೆ. ವಿಧಾನಸಭೆ ಕಲಾಪದ ಸಂದರ್ಭದಲ್ಲಿ ಸಚಿವ ರಾಜಣ್ಣ ಹನಿಟ್ರ್ಯಾಪ್ ಪ್ರಕರಣ ಪ್ರಸ್ತಾಪಿಸಲು ಪ್ರತಿಪಕ್ಷದವರನ್ನು ಗೋಗರೆದರು. ಪ್ರಕರಣದ ಗಂಭೀರತೆ ಅರಿತು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಈ ವಿಷಯವನ್ನು ನಾವು ಸದನದಲ್ಲಿ ಪ್ರತಿಪಾದಿಸಿದೆವು. ಅದಕ್ಕೂ ಮುನ್ನ ರಾಜಣ್ಣ, ಸಿಎಂ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರೊಂದಿಗೆ ಈ ವಿಚಾರ ಚರ್ಚಿಸಿಯೇ ಸದನಕ್ಕೆ ಬಂದಿದ್ದರು. ವಿಷಯ ಪ್ರಸ್ತಾಪಿಸಲು ಅವಕಾಶಕ್ಕಾಗಿ ಸಚಿವರೇ ಸ್ಪೀಕರ್‌ಗೆ ಸಂದೇಶವನ್ನೂ ಕೊಟ್ಟಿದ್ದರು ಎಂದು ತಿಳಿಸಿದ್ದಾರೆ.












Click it and Unblock the Notifications