• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೂರು ಪಾಲಿಕೆ ಫಲಿತಾಂಶ; ಡಿಕೆಶಿಗೆ ಬಿಜೆಪಿ ಪ್ರಶ್ನೆಗಳು!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 06; ಬೆಳಗಾವಿ, ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಬೆಳಗಾವಿಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಐತಿಹಾಸಿಕ ಸಾಧನೆ ಮಾಡಿದೆ.

ಕರ್ನಾಟಕ ಬಿಜೆಪಿ ಸರಣಿ ಟ್ವೀಟ್‌ಗಳ ಮೂಲಕ ಮೂರು ಮಹಾನಗರ ಪಾಲಿಕೆ ಫಲಿತಾಂಶದ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ಪ್ರಶ್ನೆ ಮಾಡಿದೆ. "ಮಾನ್ಯ ಡಿ. ಕೆ. ಶಿವಕುಮಾರ್ ಅವರೇ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಅನ್ವಯ ಕ್ರಮಕ್ಕೆ ಶಿಫಾರಸು ಮಾಡುತ್ತೀರಾ?" ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಗೆದ್ದವರ ಪಟ್ಟಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಗೆದ್ದವರ ಪಟ್ಟಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲಿಕೆ ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿದ್ದು, "ಹುಬ್ಬಳ್ಳಿ - ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿದ ಎಲ್ಲ ಪ್ರಬುದ್ಧ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಚುನಾವಣೆಯಲ್ಲಿ ಜಯಶಾಲಿ ಆಗಿರುವ ಬಿಜೆಪಿ ಅಭ್ಯರ್ಥಿಗಳಿಗೆ ಶುಭಾಶಯ ಕೋರುತ್ತೇನೆ" ಎಂದು ಹೇಳಿದ್ದಾರೆ.

 ಮೈಸೂರು ಪಾಲಿಕೆ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು, ಜೆಡಿಎಸ್ ಮುಖಭಂಗ ಮೈಸೂರು ಪಾಲಿಕೆ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು, ಜೆಡಿಎಸ್ ಮುಖಭಂಗ

ಮೂರು ಮಹಾನಗರ ಪಾಲಿಕೆಗಳ ಫಲಿತಾಂಶದ ಬಗ್ಗೆ ರಾಜ್ಯ ರಾಜಕೀಯದಲ್ಲಿ ಚರ್ಚೆ ನಡೆಯುತ್ತಿದೆ. ಹಲವಾರು ನಾಯಕರು ಫಲಿತಾಂಶವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ಫಲಿತಾಂಶದಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ಕರ್ನಾಟಕ ಬಿಜೆಪಿ ಮಾಡಿರುವ ಸರಣಿ ಟ್ವೀಟ್‌ಗಳ ವಿವರಗಳು ಇಲ್ಲಿವೆ..

ಬೆಳಗಾವಿ ಮಹಾನಗರ ಪಾಲಿಕೆ: 17 ವರ್ಷಗಳ ಬಳಿಕ ಅಧಿಕಾರಕ್ಕೇರಿದ ಬಿಜೆಪಿ ಬೆಳಗಾವಿ ಮಹಾನಗರ ಪಾಲಿಕೆ: 17 ವರ್ಷಗಳ ಬಳಿಕ ಅಧಿಕಾರಕ್ಕೇರಿದ ಬಿಜೆಪಿ

ಡಿಕೆಶಿ ಅವರನ್ನು ಏಕಾಂಗಿಯಾಗಿಸಿದಿರಿ

'ಮಾನ್ಯ ಸಿದ್ದರಾಮಯ್ಯ ಅವರೇ ಚುನಾವಣೆಯ ಸಂದರ್ಭದಲ್ಲಿ ಸೋಲಿನ ಮುನ್ಸೂಚನೆ ಪಡೆದು ಡಿ. ಕೆ. ಶಿವಕುಮಾರ್‌ ಅವರನ್ನು ಏಕಾಂಗಿಯಾಗಿಸಿ ಪಿಳ್ಳೆ ನೆಪ ಹೇಳಿ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದೀರಿ. ಸೋಲಿನ ಭಯದಿಂದ ಪಲಾಯನವಾದ ಅನುಸರಿಸಿದ ನೀವು ಇಂದು ಜನರ ತೀರ್ಪನ್ನು ಜನತಾ ನ್ಯಾಯಾಲಯದ ಆದೇಶವನ್ನು ಪ್ರಶ್ನೆ ಮಾಡುತ್ತೀರಾ?' ಎಂದು ಬಿಜೆಪಿ ಪ್ರಶ್ನಿಸಿದೆ.

ಇಂದಿನ ಫಲಿತಾಂಶವೇ ಸಾಕ್ಷಿ

'ಡಿಕೆಶಿ ಜೊತೆ ಹೆಗಲುಕೊಟ್ಟು ಹೆಜ್ಜೆ ಹಾಕುವುದಕ್ಕೆ ಸಿದ್ದರಾಮಯ್ಯ ಬಣ ಸಿದ್ದವಿಲ್ಲ ಎಂಬುದಕ್ಕೆ ಇಂದಿನ ಫಲಿತಾಂಶವೇ ಸಾಕ್ಷಿ. ನಾನಿಲ್ಲದೆ ಹೇಗೆ ಗೆಲ್ಲುತ್ತೀರಿ ಎಂಬ ಸಂದೇಶ ನೀಡಲು ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದರು. ಕಾಂಗ್ರೆಸ್‌ ಸೋತಿದೆ. ಸಿದ್ದರಾಮಯ್ಯ ಎದುರು ಸೋಲೊಪ್ಪಿಕೊಳ್ಳುತ್ತೀರಾ ಡಿ. ಕೆ. ಶಿವಕುಮಾರ್?' ಎಂದು ಬಿಜೆಪಿ ಡಿ. ಕೆ. ಶಿವಕುಮಾರ್ ಪ್ರಶ್ನಿಸಿದೆ.

ಮೀಸೆ ಮಣ್ಣಾಗಿಲ್ಲ ಎಂಬ ಗಾದೆ

'ಈ ಹಿಂದೆ ಬಿಜೆಪಿ ಚುನಾವಣೆಯಲ್ಲಿ ಗೆದ್ದಾಗ ಸಿದ್ದರಾಮಯ್ಯ ಅವರಿಗೆ ಮತಯಂತ್ರದ ಮೇಲೆ ಅನುಮಾನ ವ್ಯಕ್ತಪಡಿಸುವ ಚಟವಿತ್ತು. ಈಗ ಹಣಬಲದಿಂದ ಬಿಜೆಪಿ ಗೆದ್ದಿದೆ ಎನ್ನುತ್ತಿದ್ದಾರೆ. ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬ ಗಾದೆ ಸಿದ್ದರಾಮಯ್ಯ ಅವರಿಗಾಗಿಯೇ ಸೃಷ್ಟಿಸಿದಂತಿದೆ' ಎಂದು ಬಿಜೆಪಿ ಟೀಕೆ ಮಾಡಿದೆ.

ಕ್ರಮಕ್ಕೆ ಶಿಫಾರಸು ಮಾಡುತ್ತೀರಾ?

ಕ್ರಮಕ್ಕೆ ಶಿಫಾರಸು ಮಾಡುತ್ತೀರಾ?

'ಮಾನ್ಯ ಡಿ. ಕೆ. ಶಿವಕುಮಾರ್ ಅವರೇ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಅನ್ವಯ ಕ್ರಮಕ್ಕೆ ಶಿಫಾರಸು ಮಾಡುತ್ತೀರಾ?. ನಗರ ಸ್ಥಳೀಯ ಸಂಸ್ಥೆಗಳ ಪ್ರಚಾರ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಪ್ರಕೃತಿ ಚಿಕಿತ್ಸೆಗೆ ತೆರಳುವ ಮೂಲಕ ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದಿದ್ದರು. ಇದು ಯಾರ ಸೋಲು, ಡಿಕೆಶಿ?' ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

  ಜಗತ್ತಿನ ಎಲ್ಲಾ ನಾಯಕರನ್ನು ಹಿಂದಿಕ್ಕಿ ಫಸ್ಟ್ ರ್ಯಾಂಕ್ ಪಡೆದ ಪ್ರಧಾನಿ Modi | Oneindia Kannada

  ಕನಕಪುರ ವಿಧಾನಸಭಾ ಕ್ಷೇತ್ರದ ಗಡಿ ದಾಟುವುದಿಲ್ಲ

  'ಮಾನ್ಯ ಡಿ. ಕೆ. ಶಿವಕುಮಾರ್ ಅವರೇ, ನೀವು ಎಷ್ಟೇ ಹೂಂಕರಿಸಿದರೂ ಅದು ಕನಕಪುರ ವಿಧಾನಸಭಾ ಕ್ಷೇತ್ರದ ಗಡಿ ದಾಟುವುದಿಲ್ಲ ಎಂಬುದಕ್ಕೆ ಸ್ಥಳೀಯ ಸಂಸ್ಥೆಗಳ ಫಲಿತಾಂಶವೇ ಸಾಕ್ಷಿ. ಧನಮದದಿಂದ ಜನಮನ ಗೆಲ್ಲುವುದು ಅಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಿ' ಎಂದು ಬಿಜೆಪಿ ಟ್ವೀಟ್‌ ಮೂಲಕ ತಿಳಿಸಿದೆ.

  English summary
  Hubballi-Dharwad, Kalaburagi and Belagavi city municipal corporation election results. Karnataka BJP questions to KPCC president D. K. Shivakumar.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X