• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ವಿಚಾರದಲ್ಲಿ ಗೃಹ ಸಚಿವರು ಸರಿಯಾಗಿ ನಡೆದುಕೊಂಡಿಲ್ಲ: ಶಾಸಕ ಎಂ.ಪಿ.ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ನವೆಂಬರ್ 23: ಇತ್ತೀಚೆಗೆ ಆನೆ ದಾಳಿಗೆ ಮಹಿಳೆ ಮೃತಪಟ್ಟ ಸ್ಥಳಕ್ಕೆ ತೆರಳಿದಾಗ ಜನರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದ ಮೂಡಿಗೆರೆ ಶಾಸಕ ಎಂ.ಪಿ‌.ಕುಮಾರಸ್ವಾಮಿ, ಗೃಹ ಸಚಿವರ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ನಗರದಲ್ಲಿ ಬುಧವಾರ ಮಾತನಾಡಿದ ಅವರು, ನಾನೊಬ್ಬ ದಲಿತ ಶಾಸಕ ಎಂಬ ಕಾರಣದಿಂದ ಮೊನ್ನೆ ನನ್ನ ಕ್ಷೇತ್ರದಲ್ಲಿ ನಡೆದ ಘಟನೆ ಸಂಬಂಧ ಸೌಜನ್ಯಕ್ಕೂ ಗೃಹ ಸಚಿವರು ಮಾತನಾಡಿಸಿಲ್ಲ. ವಿಷಾದ ಹೇಳುವುದು ಮಾಡಿಲ್ಲ ಎಂದು ಹೇಳಿದ್ದಾರೆ.

ಆನೆಯ ದಾಳಿಗೆ ಸಿಲುಕಿ ಮೃತಪಟ್ಟ ಮಹಿಳೆಯ ಕುಟುಂಬದವರನ್ನು ನೋಡಿ ಮಾತನಾಡಿಸಲು ಸಾಂತ್ವಾನ ಹೇಳಲು ತೆರಳಿದ್ದೆ. ಇದು ಸಣ್ಣ ಘಟನೆ ಅಲ್ಲ ಜನರು ನನಗೆ ದೊಣ್ಣೆಯಿಂದ ಹೊಡೆಯಲು ಬಂದಿದ್ದರು. ಕಲ್ಲು, ದೊಣ್ಣೆಗಳಿಂದ ಹೊಡೆಯಲು ಬಂದಿದ್ರು, ಇದೊಂದು ಸಣ್ಣ ಘಟನೆ ಹೇಗೆ ಆಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ನಾನು ದೂರು ಕೊಡಲಿಲ್ಲ. ನಾನು ಕುಮಾರಸ್ವಾಮಿ ಅಲ್ಲ. ನಾನೊಬ್ಬ ಶಾಸಕ, ಆದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇದುವರೆಗೂ ನನ್ನ ಮಾತನಾಡಿಸುವ ಕೆಲಸ ಮಾಡ್ತಿಲ್ಲ. ಸೌಜನ್ಯಕ್ಕೂ ಕರೆದು ಏನಾಯ್ತು ಅಂತ ಕೇಳಿಲ್ಲ. ಜನಪ್ರತಿನಿಧಿಗಳಿಗೆ ಹೀಗೆ ಆದರೆ ಜನರ ಪರಿಸ್ಥಿತಿ ಎಲ್ಲಿಗೆ ಹೋಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ೬೦೦ ಕ್ಕಿಂತ ಹೆಚ್ಚು ಜನರಿದ್ದರು, ಇಲ್ಲಿಯವರೆಗೂ ಸೌಜನ್ಯಕ್ಕೂ ಗೃಹ ಸಚಿವರು ಮಾತನಾಡಿಸಲಿಲ್ಲ, ನನಗೆ ಹೀಗಾದ್ರೆ ಜನಸಾಮಾನ್ಯರ ಪಾಡೇನು, ನಾವೇನು ಜನರಿಂದ ಹೊಡೆಸಿಕೊಳ್ಳೊಕೆ ಇರೋದಾ.? ಎಂದು ಪ್ರಶ್ನಿಸಿದ್ದಾರೆ.

ನಾನು ಆನೆ ಸಾಕಲು ಆಗುತ್ತಾ? ಅಥವಾ ಕಾನೂನು ಮಾಡೋನಾ, ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ ಗೃಹ ಸಚಿವರು ಸಂಪೂರ್ಣವಾಗಿ ನನ್ನ ನಿರ್ಲಕ್ಷ್ಯ ಮಾಡಿದ್ದಾರೆ. ಗೃಹ ಸಚಿವರ ನಡೆ ನನಗೆ ಸಾಕಷ್ಟು ನೋವುಂಟು ಮಾಡಿದೆ. ಇದುವರೆಗೂ ಒಂದ್ ಪೋನ್ ಮಾಡಿ ಏನಾಯ್ತು ಅಂತ ಕೇಳಿಲ್ಲ ಎಂದು ನೇರವಾಗಿ ಗೃಹ ಸಚಿವರ ಮೇಲೆ ಶಾಸಕ ಎಂಪಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳು ಹಾಗೂ ಮಾಜಿ‌ ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ‌ಆರೋಗ್ಯದ ಬಗ್ಗೆ ಪೋನ್ ಮಾಡಿ ವಿಚಾರಿಸಿದ್ದಾರೆ. ನಾವು ಹಲ್ಲೆಗೆ ಒಳಪಡುವರು ಅಂತ ಗೃಹ ಸಚಿವರು ಸುಮ್ಮನೆ ಆಗಿರಬಹುದು ಎಂದರು. ನನಗೆ ಬಹಳ ತೊಂದರೆ ಆಗಿದೆ, ಕೊಲೆ ಮಾಡಲು ಬಂದವರು, ಹುಚ್ಚು ನಾಯಿ ಅಟ್ಟಿಸಿಕೊಂಡು ಬಂದ ರೀತಿಯಲ್ಲಿ ಜನ ನನ್ನ ಅಟ್ಟಿಸಿಕೊಂಡು ಬಂದರು. ನಾನು ಅಂದು ಪ್ರಾಣ ಉಳಿಸಿಕೊಂಡಿದ್ದೇ ಹೆಚ್ಚು. ಬಟ್ಟೆ ಹೋದ್ರೆ ಹೋಯ್ತ, ಪ್ರಾಣ ಹೋದ್ರೆ ಏನು ಗತಿ ಎಂದು ಹೇಳಿದರು.

Mudigere Mla Mp Kumaraswamy Deeply Upset With Home Minister

ಗೃಹ ಸಚಿವರು ಇಲ್ಲಿಯವರೆಗೆ ಶಾಸಕ ಅಲ್ಲ ಸಹೋದ್ಯೋಗಿ ಅಂತಾನೂ ಪೋನ್ ಮಾಡಿಲ್ಲ. ಇವರು ಹೊಡೆಸಿಕೊಳ್ಳುವ ಜನ ಬೈಸಿಕೊಳ್ಳುವ ಜನ ಅಂತ ಅವರ ಮನಸ್ಸಿಗೆ ಬಂದಿರಬಹುದು ಎಂದು ಬೇಸರವಾಗಿಯೇ ಮಾತನಾಡಿದರು.

ಶಾಸಕ ಸ್ಥಾನದಲ್ಲಿ ಇದ್ದು, ಪ್ರತಿಯೊಂದು ರಕ್ಷಣೆ ಮಾಡುವಂತವರು ಈ ಘಟನೆಯಲ್ಲಿ ಸುಮ್ಮನೆ ಆಗಿದ್ದುಬೇಸರವಿದೆ. ನಮಗೆ ಅಧಿಕಾರಿಗಳನ್ನು ಹಾಕಿ ಕೊಡಿ ಅಂದಿದ್ದೆ, ಒಬ್ಬ ಗೃಹ ಸಚಿವರಾಗಿ ನನ್ನ ಮಾತನಾಡಿಸಿಲ್ಲ ಅಂದ್ರೆ ನಿಮಗೆ ಏನ್ ಅನಿಸಬಹುದು. ಸಿ.ಟಿ ರವಿ ಹಾಗೂ ಯಡಿಯೂರಪ್ಪ ಅವರು ತಾಳ್ಮೆಯಿಂದ ಇರುವಂತೆ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ನನ್ನ ವಿಚಾರದಲ್ಲಿ ಗೃಹ ಸಚಿವರು ಸರಿಯಾಗಿ ನಡೆದುಕೊಂಡಿಲ್ಲ

ನಾನು ಮಾತನಾಡಿದ ಮೇಲೆ ಅವರು ಮಾತನಾಡಬೇಕಾ? ನನ್ನ ವಿಚಾರದಲ್ಲಿ ಗೃಹ ಸಚಿವರು ಸರಿಯಾಗಿ ನಡೆದುಕೊಂಡಿಲ್ಲ. ಆನೆ ದಾಳಿ ನಡೆದೇ ನಡೆಯುತ್ತೆ, ಇನ್ನೂ ಆನೆ ದಾಳಿ ತಪ್ಪಲ್ಲ, ಕ್ಷೇತ್ರದಲ್ಲಿ ಏನಾದರೂ ಆದರೆ ಶಾಸಕರು ಸಾಂತ್ವನ ಹೇಳೋಕೆ ಹೋಗಬಾರದಾ ಎಂದು ಪ್ರಶ್ನಿಸಿದರು. ಗೃಹ ಸಚಿವರ ನಡವಳಿಕೆ ಸರಿಯಿಲ್ಲ. ರಾಜ್ಯದ ಹೊಣೆ ಹೊತ್ತಿರುವ ತಾವು ನನ್ನ ಪ್ರಾಣ ಹೊಂದರೆ ಯಾರು ಹೊಣೆಗಾರರು ಎಂದು ಶಾಸಕ ಎಂಪಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

English summary
i am not kumarswamy, i am an mla;mudigere mal said that the home minister has not spoken even out of courtesy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X