ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್, ಇಂಡಿಯಾ ಒಕ್ಕೂಟ ಬೆಂಬಲದ ಚರ್ಚೆ: ಜಿ.ಪರಮೇಶ್ವರ ಹೇಳಿದ್ದೇನು?

ಬೆಂಗಳೂರು, ಆಗಸ್ಟ್ 21: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಾರ್ಥವಾಗಿಯೇ ಹೈಕಮಾಂಡ್ ದೆಹಲಿಗೆ ಆಹ್ವಾನಿಸಿದೆ. ಇನ್ನೂ ಎಚ್‌ಡಿ ಕುಮಾರಸ್ವಾಮಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದೇವೆ. ಕಾನೂನು ಹೋರಾಟ ಬಗ್ಗೆ ತೀರ್ಮಾನಿಸಲಾಗುವುದು. ಅಲ್ಲದೇ ಸರ್ಕಾರದ ಪರ ಇಂಡಿಯಾ ಒಕ್ಕೂಟದ ಬೆಂಬಲ ಕೇಳಲು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪ್ರಮುಖ ರಾಜಕೀಯ ಬೆಳವಣಿಗೆಗಳ ಬಗ್ಗೆ ಅಪ್ಡೇಟ್ ನೀಡಿದರು.

ಈ ಕುರಿತು ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳ ಬೆನ್ನಿಗೆ ಹೈಕಮಾಂಡ್ ನಿಲ್ಲಲಿದೆ. ಈಗಾಗಲೇ ಹೈಕಮಾಂಡ್ ನಾಯಕರು ಸಿಎಂ ಜೊತೆ ನಿಲ್ಲುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳನ್ನು ದೆಹಲಿಗೆ ಕರೆದಿದ್ದಾರೆ. ಸಿದ್ದರಾಮಯ್ಯನವರು ರಾಜ್ಯದಲ್ಲಿನ ಬೆಳವಣಿಗೆ ಕುರಿತು ಹೈಕಮಾಂಡ್‌ಗೆ ಮಾಹಿತಿ ನೀಡಲಿದ್ದಾರೆ ಎಂದರು.

Muda Case Delhi Congress Highcommond Already Stand With CM Siddarmaiah Says G Parameshwara

ಇಂಡಿಯಾ ಮೈತ್ರಿ ನಾಯಕರ ಜತೆ ದೆಹಲಿಯಲ್ಲಿ ಚರ್ಚೆ

ರಾಜ್ಯದಲ್ಲಿ ಸಿಎಂ ವಿರುದ್ಧ ತನಿಖೆಗೆ ಅನುಮತಿ ನೀಡಲಾಗಿದೆ. ಈ ಸಂಬಂಧ ಇಂಡಿಯಾ ಒಕ್ಕೂಟದ ಬೆಂಬಲ ಪಡೆಯುವ ವಿಚಾರ ಕುರಿತು ಸಚಿವರು ಪ್ರತಿಕ್ರಿಯಿಸಿ, ರಾಜ್ಯಪಾಲರ ಪ್ರಾಸಿಕ್ಯೂಷನ್ ಕ್ರಮ ಯಾವ ಹಂತಕ್ಕೂ ಹೋಗಬಹುದು.

ಬೇರೆ ಬೇರೆ ರಾಜ್ಯಗಳಲ್ಲೂ ರಾಜ್ಯಪಾಲರು ಹೀಗೇ ಪಕ್ಷವೊಂದರ ಪರವಾಗಿ ನಡೆದುಕೊಂಡಿದ್ದಾರೆ. ಈ ಸಂಬಂಧ ಇಂಡಿಯ ಒಕ್ಕೂಟದ ಬೆಂಬಲ ಪಡೆಯುವ ದೆಹಲಿಯಲ್ಲಿ ವರಿಷ್ಠರು ಚರ್ಚೆ ನಡೆಸಿ ತೀರ್ಮಾನಿಸಲಿದ್ದಾರೆ.

ರಾಜ್ಯದಲ್ಲಿನ ಬೆಳವಣಿಗೆಯನ್ನು ಇಂಡಿಯ ಕೂಟದ ಸದಸ್ಯರು ಯಾವ ರೀತಿ ಸ್ವೀಕರಿಸಿತ್ತಾರೋ ಗೊತ್ತಿಲ್ಲ. ಅವರು ಪರಿಗಣಿಸಬಹುದು ಅಥವಾ ಪರಿಗಣಿಸದಿರಬಹುದು. ಆದರೆ ರಾಜ್ಯದ ಸುಭದ್ರ ಸರ್ಕಾರವನ್ನು ಅಸ್ಥಿರ ಮಾಡಲು ಯತ್ನ ನಡೆಯುತ್ತಿದೆ. ಹೀಗಾಗಿ ತೆಲಂಗಾಣ ಹಾಗೂ ಹಿಮಾಚಲ ಸರ್ಕಾರದ ಬಗ್ಗೆ ಸತೀಶ್ ಜಾರಕಿಹೊಳಿ ಮಾತನಾಡಿದ್ದು, ಬಿಜೆಪಿಯೇತರ ಸರ್ಕಾರಗಳನ್ನು ತೆಗೆಯುವ ಕೆಲಸ ಆಗಬಹುದು ಎಂಬರ್ಥದಲ್ಲಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.

Muda Case Delhi Congress Highcommond Already Stand With CM Siddarmaiah Says G Parameshwara

ಎಚ್‌ಡಿಕೆ ವಿಚಾರದಲ್ಲಿ ರಾಜ್ಯಪಾಲರ ಕ್ರಮ ಪ್ರಶ್ನಿಸಿದ ಸಚಿವ

ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧವು ರಾಜ್ಯಪಾಲರು ಪ್ರಾಸ್ಯೂಕ್ಯೂಷನ್ ಅನುಮತಿ ನೀಡುವಂತೆ ಕೇಳಿದ್ದೇವೆ. ಲೋಕಾಯುಕ್ತ ಎಸ್ಐಟಿ ಅನುಮತಿ ಕೇಳಿದರೂ ರಾಜ್ಯಪಾಲರು ಕೊಟ್ಟಿಲ್ಲ, ಇದು ತಪ್ಪಲ್ಲವೇ? ಎಂದು ಪ್ರಶ್ನಿಸಿದರು.

ಅಸ್ತಿತ್ವದಲ್ಲಿ ಇಲ್ಲದ ಎಚ್‌ಡಿ ಕುಮಾರಸ್ವಾಮಿಗೆ ಸಂಬಂಧಿಸಿದ ಗಣಿಗಾರಿಕೆಗೆ ಅನುಮತಿ ಕೊಡಲಾಗಿದೆ. ಇದರ ತನಿಖೆ ಮಾಡಲು ಲೋಕಾಯುಕ್ತ ಪತ್ರ ಬರೆದಿದ್ದು, ಜಾರ್ಜ್ ಶೀಟ್ ಸಲ್ಲಿಕೆಗೆ ಅನುಮತಿ ನೀಡುವಂತೆ 2023 ರಲ್ಲಿಯೇ ಅನುಮತಿ ಕೇಳಿದ್ದೆವು. ಈ ಬಾರಿ ಮತ್ತೆ ಅನುಮತಿ ನೀಡುವಂತೆ ಎರಡನೇ ಭಾರಿ ಕೋರಿದ್ದೇವೆ.

Petrol price: ಆಗಸ್ಟ್ 21 ರಂದು ಭಾರತದ ವಿವಿಧ ನಗರಗಳಲ್ಲಿ ಪೆಟ್ರೋಲ್‌ ಡಿಸೇಲ್‌ ಬೆಲೆ ತಿಳಿಯಿರಿ

ಲೋಕಾಯುಕ್ತರೇ ಅನುಮತಿ ನೀಡದ ವಿರುದ್ಧ ನಿರ್ಧಾರ

ಎಚ್‌ಡಿ ಕುಮಾರಸ್ವಾಮಿ ಕೇಂದ್ರ ಸಚಿವರೇ ಆದರೂ ಸಹ ಅಕ್ರಮ ನಡೆದಿರುವುದು ಇಲ್ಲ. ಅವರು ಸಹ ರಾಜ್ಯದವರೇ. ಅಂದ ಮೇಲೆ ರಾಜ್ಯಪಾಲರು ತನಿಖಾಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಕೆಗೆ ಅನುಮತಿ ಕೊಡುವಂತೆ ಮನವಿ ಮಾಡಿದ್ದೇವೆ. ಕೊಡದಿದ್ದಲ್ಲಿ ಸರ್ಕಾರ ಕಾನೂನು ಹೋರಾಟ ನಡೆಸಲಿದೆ ಎಂದು ಅವರು ತಿಳಿಸಿದರು.

ತನಿಖಾ ಸಂಸ್ಥೆ ಕೇಳುವುದಕ್ಕೂ, ವೈಯಕ್ತಿಕವಾಗಿ ಅನುಮತಿ ಕೇಳುವುದಕ್ಕೂ ವ್ಯತ್ಯಾಸ ಇದೆ. ಲೋಕಾಯುಕ್ತ ಸಂಸ್ಥೆ ಪ್ರಾಸ್ಯೂಕ್ಯೂಷನ್ ಗೆ ಕೇಳಿದೆ. ಅನುಮತಿ ನೀಡದಿದ್ದರೆ ಅವರೇ ಕಾನೂನು ಹೋರಾಟ ಬಗ್ಗೆ ತೀರ್ಮಾನಿಸುತ್ತಾರೆ ಎಂದು ಹೇಳಿದರು.

ಇನ್ನೂ ರಾಜಭವನಕ್ಕೆ ನುಗ್ಗುವ ಬಗ್ಗೆ ಪಕ್ಷದ ಹಿರಿಯ ನಾಯಕ ಐವಾನ್ ಡಿಸೋಜಾ ಹೇಳಿದ್ದು, ಸರಿಯಲ್ಲ. ಅವರ ಹೇಳಿಕೆಯನ್ನು ನಾವು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಕೆಲವೊಮ್ಮೆ ಅವರು ತಮ್ಮ ವೈಯಕ್ತಿಕ ಹೇಳಿಕೆ ನೀಡುತ್ತಾರೆ. ಐವಾನ್ ವಿರುದ್ಧ ದೂರು ದಾಖಲಿಸುವ ವಿಚಾರ ಬಿಜೆಪಿಗೆ ಬಿಟ್ಟದ್ದು ಎಂದು ಅವರು ಸ್ಪಷ್ಟಪಡಿಸಿದರು.

ಬಿಜೆಪಿಗರ ಕೇಸುಗಳು ಎಂಬುದಿಲ್ಲ

ಬಿಜೆಪಿ ನಾಯಕರ ಕೇಸ್‌ಗಳ ಕುರಿತು ಮಾತನಾಡಿದ ಜಿ.ಪರಮೇಶ್ವರ ಅವರು, ಇಲ್ಲಿ ಬಿಜೆಪಿ ನಾಯಕರ ಕೇಸ್ ಎಂಬುದಿಲ್ಲ. ಯಾವುದೇ ಕೇಸ್ ನಡೆದಿದ್ದರೂ ತಾರ್ಕಿಕ ಅಂತ್ಯ ಕಾಣಬೇಕು. ಸೂಕ್ತ ಕ್ರಮ ಆಗಬೇಕು. ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಪ್ರಕರಣ, ಬೋವಿ ನಿಗಮದ ತನಿಖೆಯ ಬಳಿಕ ಇದೀಗ ಚಾರ್ಜ್ ಶೀಟ್ ಹಾಕುತ್ತಿದ್ದೇವೆ. ಕ್ರಮೇಣ ಒಂದೊಂದೆ ಕೇಸ್ ಗಳ ತನಿಖೆ ನಡೆಯುತ್ತಿದೆ. ಕೇಸುಗಳಲ್ಲಿ ಬಿಜೆಪಿಯವರು ಇದ್ದರು ಕ್ರಮವಾಗಲಿದೆ. ಇವೆಲ್ಲ ಈ ಮೊದಲೇ ತನಿಖೆ ನಡೆಯುತ್ತಿದ್ದ ಪ್ರಕರಣಗಳು ಎಂದು ಅವರು ಎಚ್ಚರಿಕೆ ಸಂದೇಶ ರವಾನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+