ಜನವರಿ 27ರ ನಂತರ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಅಂತಾ... Siddaramaiah Muda
ಕರ್ನಾಟಕದಲ್ಲಿ 2023ರ ವಿಧಾನಸಭೆ ಚುನಾವಣೆ ಗೆದ್ದ ನಂತರ ಕಾಂಗ್ರೆಸ್ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದಿದೆ. ಆದರೆ ಹೀಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಮರುಕ್ಷಣವೇ ಮುಖ್ಯಮಂತ್ರಿ ಯಾರು? ಅನ್ನೋ ಫೈಟಿಂಗ್ ಕೂಡ ಶುರುವಾಗಿತ್ತು. ಸಿದ್ದರಾಮಯ್ಯ & ಡಿ.ಕೆ. ಶಿವಕುಮಾರ್ ಅವರ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ತಿಕ್ಕಾಟ ಜೋರಾಗಿತ್ತು. ಈ ವಿಚಾರ ದೆಹಲಿ ಕೂಡ ತಲುಪಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಧಾನ ಕೂಡ ನಡೆದು ಹೋಗಿದೆ.
ಇಷ್ಟೆಲ್ಲದರ ನಡುವೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ಪದೇ ಪದೇ ಪ್ರಯತ್ನಗಳು ನಡೆಯುತ್ತಲೇ ಇವೆ. ಇದನ್ನು ಸಮಾಧಾನ ಮಾಡಲು ನೇರವಾಗಿ ದೆಹಲಿಯ ಘಟಾನುಘಟಿ ನಾಯಕರು ಕರ್ನಾಟಕಕ್ಕೆ ಬಂದಿದ್ದಾರೆ. ಇಂತಹ ಸಮಯದಲ್ಲೇ, ಸಿದ್ದರಾಮಯ್ಯ ಅವರಿಗೆ ಮತ್ತೊಂದು ಆಘಾತ ಕೂಡ ಇದೀಗ ಎದುರಾಗಿದೆ. ಜನವರಿ 27 ರ ನಂತರ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಅಂತಾ...

'ಮುಡಾ' ಕೇಸ್ ಮುಂದಿಟ್ಟುಕೊಂಡು ಸಿಎಂ...
ಕಾಂಗ್ರೆಸ್ ಪಕ್ಷ ಸಂಕಷ್ಟದ ಸುಳಿಗೆ ಸಿಲುಕಿ & ಇನ್ನೇನು ಸಂಪೂರ್ಣವಾಗಿ ಸೋತು ಹೋಯ್ತು ಅನ್ನುವಾಗಲೇ 2023 ರಲ್ಲಿ ಕನ್ನಡ ನಾಡಲ್ಲಿ ಅಧಿಕಾರ ಗಿಟ್ಟಿಸುವಲ್ಲಿ ಯಶಸ್ವಿ ಆಗಿತ್ತು. ಈ ಮೂಲಕ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತ ಪಡೆದು ಅಧಿಕಾರ ಕೂಡ ಹಿಡಿದಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಕಾಂಗ್ರೆಸ್ ನಾಯಕರಿಗೆ ಶಾಕ್ ಮೇಲೆ ಶಾಕ್ ಸಿಗುತ್ತಿದೆ.
ಅಂದಹಾಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿ ಬಂದಿದ್ದ ಮುಡಾ ಹಗರಣ ದೊಡ್ಡ ಮಟ್ಟಿಗೆ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ 'ಮುಡಾ' ಕೇಸ್ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವ ಪ್ರಯತ್ನಗಳು ಕೂಡ ನಡೆದು ಹೋಗಿವೆ. ಇಷ್ಟೆಲ್ಲದರ ನಡುವೆ ಇದೀಗ ಸ್ಫೋಟಕ ಸುದ್ದಿಯೊಂದು ಹಬ್ಬಿದ್ದು, ಈ ಸುದ್ದಿ ಸಿಎಂ ಸಿದ್ದರಾಮಯ್ಯ & ಅವರ ಬೆಂಬಲಿಗರ ಎದೆಬಡಿತ ಹೆಚ್ಚು ಮಾಡಿದೆ!
ಜನವರಿ 27ಕ್ಕೆ ವಿಚಾರಣೆ ಮುಂದೂಡಿಕೆ
ಅಷ್ಟಕ್ಕೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿ ಬಂದಿದ್ದ ಮುಡಾ ಹಗರಣದ ತನಿಖೆಯ ಸಿಬಿಐಗೆ ವಹಿಸಬೇಕು ಎಂಬ ಕಾನೂನು ಹೋರಾಟಕ್ಕೆ ಇಂದು ಮಹತ್ವದ ತಿರುವು ಸಿಕ್ಕಿದೆ. ಹೈಕೋರ್ಟ್‌ಗೆ ಈ ಕುರಿತಾಗಿ ಅರ್ಜಿ ಸಲ್ಲಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಆರೋಪದ ತನಿಖೆ ಸಿಬಿಐಗೆ ವಹಿಸುವ ಕುರಿತು ಅಂತಿಮ ಹಂತದ ವಿಚಾರಣೆಯನ್ನು ಜನವರಿ 27ಕ್ಕೆ ಮುಂದೂಡಿದೆ ಧಾರವಾಡ ಹೈಕೋರ್ಟ್ ಪೀಠ.
ಸ್ನೇಹಮಯಿ ಕೃಷ್ಣ, ತನಿಖೆಯನ್ನ ಸಿಬಿಐಗೆ ವಹಿಸುವಂತೆ ನ್ಯಾಯಾಲಯದ ಎದುರು ಮನವಿ ಮಾಡಿದ್ದರು. ಇಂದು ಧಾರವಾಡ ಹೈಕೋರ್ಟ್‌ನಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ವಾದ & ಪ್ರತಿವಾದ ಆಲಿಸಿದ ನ್ಯಾಯಪೀಠವು ತಕರಾರು ಅರ್ಜಿ ಸಲ್ಲಿಸಲು ಇದೀಗ ಆದೇಶವನ್ನು ನೀಡಿದೆ. ಅಂತಿಮವಾಗಿ ಈ ಅರ್ಜಿ ವಿಚಾರಣೆ ಜನವರಿ 27ಕ್ಕೆ ಮುಂದೂಡಲಾಗಿದೆ. ಮತ್ತೊಂದು ಕಡೆ ಇದೆ ಆದೇಶ ಕುರಿತು ಇದೀಗ ವಿರೋಧ ಪಕ್ಷಗಳ ನಾಯಕರು ಪ್ರತಿಕ್ರಿಯೆ ನೀಡುತ್ತಾ, ಜನವರಿ 27ರ ನಂತರ ಕರ್ನಾಟಕದಲ್ಲಿ ಸಿಎಂ ಸ್ಥಾನ ಬದಲಾವಣೆ ಖಚಿತ ಅಂತಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.












Click it and Unblock the Notifications