• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನನ್ನ ಎದೆ ಬಗೆದರೂ ಯಡಿಯೂರಪ್ಪ ಇದ್ದಾರೆ, ಬಗೆದು ತೋರಿಸ್ಲಾ?

|

ಬೆಂಗಳೂರು, ಜೂನ್ 9: "ತಳ ಮಟ್ಟದಲ್ಲಿ ಪಕ್ಷಕ್ಕಾಗಿ ಶ್ರಮಿಸುತ್ತಿರುವ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಮಾಡುವುದು ಬಿಜೆಪಿ ಮಾತ್ರ" ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮಾತನಾಡುತ್ತಿದ್ದ ರೇಣುಕಾಚಾರ್ಯ, ಇಬ್ಬರು ನಾಯಕರನ್ನು ಪಕ್ಷ ಆಯ್ಕೆ ಮಾಡಿದೆ. ಹೈಕಮಾಂಡ್ ಮಾತಿಗೆ ನಾವೆಲ್ಲಾ ಬೆಲೆಕೊಡಬೇಕಿದೆ"ಎಂದು ಹೇಳಿದ್ದಾರೆ.

ರಾಜ್ಯಸಭೆಗೆ ಅಚ್ಚರಿಯ ಬಿಜೆಪಿ ಅಭ್ಯರ್ಥಿಗಳು: ಈ ರಹಸ್ಯ ಮೊದಲೇ ತಿಳಿದಿದ್ದು ಈ ಇಬ್ಬರಿಗೆ ಮಾತ್ರ

"ನನ್ನ ಎದೆ ಬಗೆದರೂ ಅದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಇರುತ್ತಾರೆ. ಬಗೆದು ತೋರಿಸ್ಲಾ"ಎಂದು ಮಾಧ್ಯಮದವರನ್ನು ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.

"ರಾಜ್ಯಸಭೆಗೆ ಬಿಜೆಪಿ ಟಿಕೆಟ್ ವಿಚಾರದಲ್ಲಿ ಮಾಧ್ಯಮದವರು ಅವಶ್ಯಕತೆಗಿಂತ ಹೆಚ್ಚಾಗಿ ತೋರಿಸುತ್ತಿದ್ದಾರೆ. ನೀವು ಏನು ಬೇಕಾದರೂ ಸುದ್ದಿ ಮಾಡಿ"ಎಂದು ಮಾಧ್ಯಮವರಿಗೆ ರೇಣುಕಾಚಾರ್ಯ ಹೇಳಿದ್ದಾರೆ.

"ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಮತವಲ್ಲ. ಡಿಕೆಶಿ, ಸಿದ್ದರಾಮಯ್ಯ ಭ್ರಮನಿರಸನರಾಗಿದ್ದಾರೆ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಅವರ ಮಗ ಸರ್ಕಾರಿ ಕಾಮಗಾರಿ ಶಂಕು ಸ್ಥಾಪನೆ ಮಾಡಿದ್ದರು. ವಿಜಯೇಂದ್ರ ಆ ರೀತಿ ಮಾಡುತ್ತಿಲ್ಲ"ಎಂದು ರೇಣುಕಾಚಾರ್ಯ ಎರಡು ದಿನದ ಹಿಂದೆ ಹೇಳಿದ್ದರು.

ಇದು 2ನೇ ಬಾರಿ: ರಾಜ್ಯ ಘಟಕದ ಶಿಫಾರಸಿಗೆ ಬೆಲೆಯೇ ಕೊಡದ ಬಿಜೆಪಿ ಹೈಕಮಾಂಡ್

ಕೊನೇ ಮಾತು: ಎದೆ ಬಗೆಯುವ ಮಾತನ್ನು ಈ ಹಿಂದೆ ಹೊಸಕೋಟೆಯ ಮಾಜಿ ಶಾಸಕ ಎಂ.ಟಿ.ಬಿ ನಾಗರಾಜ್ ಕೂಡಾ ಹೇಳಿದ್ದರು. ಆ ಮೇಲೆ, ಕಾಂಗ್ರೆಸ್ ಅನ್ನು ತೊರೆದುರು, ಎದೆ ಬಗೆದರೆ ಸಿದ್ದರಾಮಯ್ಯ ಇರುತ್ತಾರೆ ಎಂದಿದ್ದ ಎಂಟಿಬಿ, ಆಮೇಲೆ ಅವರನ್ನೇ ಜರಿಯಲು ಆರಂಭಿಸಿದರು.

English summary
CM Political Secretary MP Renukacharya Statement On Rajya Sabha Candidate And Yediyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X