• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಧಾನಿ ಮೋದಿ ಪಡೆದ ಕೊರೊನಾ ಲಸಿಕೆಗೆ ಕರ್ನಾಟಕದಲ್ಲಿ ಭಾರಿ ಬೇಡಿಕೆ

|

ಬೆಂಗಳೂರು, ಏಪ್ರಿಲ್ 8: ಪ್ರಧಾನಿ ನರೇಂದ್ರ ಮೋದಿ ಅವರು ಪಡೆದಿರುವ ಕೊರೊನಾ ಲಸಿಕೆಗೆ ಕರ್ನಾಟಕದಲ್ಲಿ ಭಾರಿ ಬೇಡಿಕೆ ಬಂದಿದೆ.

   ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ 2ನೇ ಡೋಸ್‌ ಲಸಿಕೆ ಪಡೆದುಕೊಂಡ ಪ್ರಧಾನಿ ಮೋದಿ | Oneindia Kannada

   ಮೋದಿ ಪಡೆದ ಕೊರೊನಾ ಲಸಿಕೆಯೇ ನಮಗೆ ಬೇಕು ಎಂದು ಜನರು ಹಠ ಹಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದಿದ್ದಾರೆ. ಕರ್ನಾಟಕದಲ್ಲಿ ಈವರೆಗೆ 5.8 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ.

   ಏಮ್ಸ್‌ನಲ್ಲಿ 2ನೇ ಡೋಸ್ ಕೊರೊನಾ ಲಸಿಕೆ ಪಡೆದ ಪ್ರಧಾನಿ ಮೋದಿ

   ಆದರೆ ಆಶ್ಚರ್ಯಕರ ವಿಷಯವೇನೆಂದರೆ ಕೊರೊನಾ ಲಸಿಕೆ ವಿತರಣೆ ಆರಂಭದಲ್ಲಿ ಯಾರೂ ಕೂಡ ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿರಲಿಲ್ಲ. ಆದರೆ ಈಗ ಪ್ರಧಾನಿ ಮೋದಿ ಇದೇ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದಿರುವುದರಿಂದ ಎಲ್ಲರೂ ತಮಗೆ ಅದೇ ಲಸಿಕೆ ಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ.

   ಕೋವಿಶೀಲ್ಡ್ ಪರಿಣಾಮಕಾರಿತ್ವದ ಬಗ್ಗೆ ವೈದ್ಯಕೀಯ ವರದಿಗಳ ಕಾರಣದಿಂದಾಗಿ ಕೋವ್ಯಾಕ್ಸಿನ್ ಲಸಿಕೆ ಬಗ್ಗೆ ಜನರ ಆಸಕ್ತಿ ಹೆಚ್ಚಾಗಿರಬಹುದು. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಈವರೆಗೆ ರಾಜ್ಯದಲ್ಲಿ 5.8 ಲಕ್ಷ ಕೊರೊನಾ ಲಸಿಕೆ ನೀಡಲಾಗಿದೆ.

   ಬುಧವಾರ ಬೆಳಗ್ಗೆವರೆಗೆ ನೀಡಲಾಗಿರುವ 44.9 ಲಕ್ಷ ಕೋವಿಶೀಲ್ಡ್ ಡೋಸ್‌ಗಳಿಗೆ ಹೋಲಿಸಿದರೆ ಇದು ತುಂಬಾ ಕಡಿಮೆಯಾಗಿದೆ. ಏಪ್ರಿಲ್ 1 ರಿಂದ ಕೋವ್ಯಾಕ್ಸಿನ್‌ಗೆ ಬೇಡಿಕೆ ಹೆಚ್ಚಾಗಿದೆ.

   ಮಾರ್ಚ್ 13ರಿಂದ ಕೋವ್ಯಾಕ್ಸಿನ್ ಲಸಿಕೆ ವಿತರಣೆ ಆರಂಭವಾಗಿತ್ತು

   ಮಾರ್ಚ್ 13ರಿಂದ ಕೋವ್ಯಾಕ್ಸಿನ್ ಲಸಿಕೆ ವಿತರಣೆ ಆರಂಭವಾಗಿತ್ತು

   ಮಾರ್ಚ್ 13 ರಂದು ಕೋವ್ಯಾಕ್ಸಿನ್ ಲಸಿಕೆ ವಿತರಣೆ ಆರಂಭವಾಗಿತ್ತು. ಅದರ ವಿತರಣಾ ಸಂಖ್ಯೆ ಈಗ ಕೋವಿಶೀಲ್ಡ್‌ಗೆ ಸಮವಾಗಿದೆ. ಜನವರಿ 16 ರಿಂದ ಕೊರೊನಾ ಲಸಿಕೆ ವಿತರಣೆ ಆರಂಭವಾದಾಗಿನಿಂದ ಈವರೆಗೆ 13,107 ಡೋಸ್ ಲಸಿಕೆ ವಿತರಿಸಿರುವ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಸಾರ್ವಜನಿಕರಲ್ಲಿ ಹೆಚ್ಚು ಆಸಕ್ತಿ ಕಂಡುಬಂದಿದೆ.

   ಕೆಸಿ ಜನರಲ್ ಆಸ್ಪತ್ರೆಗೆ ಕೊರೊನಾ ಲಸಿಕೆ ವಿತರಣೆ ಕುರಿತು ಮಾಹಿತಿ

   ಕೆಸಿ ಜನರಲ್ ಆಸ್ಪತ್ರೆಗೆ ಕೊರೊನಾ ಲಸಿಕೆ ವಿತರಣೆ ಕುರಿತು ಮಾಹಿತಿ

   ಬೆಂಗಳೂರು ನಗರದಲ್ಲಿ ಜನವರಿ 16 ರಂದು ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾದಾಗಿನಿಂದ ಈವರೆಗೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಒಟ್ಟು 10,350 ಡೋಸ್ ಲಸಿಕೆ ನೀಡಲಾಗಿದೆ, ಅವುಗಳಲ್ಲಿ 5070 ಡೋಸ್ ಕೋವಿಶೀಲ್ಡ್ ಲಸಿಕೆಯಾದರೆ 5280 ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ.

   ಶೇ.65ರಷ್ಟು ಮಂದಿಯಿಂದ ಕೋವ್ಯಾಕ್ಸಿನ್‌ಗೆ ಬೇಡಿಕೆ

   ಶೇ.65ರಷ್ಟು ಮಂದಿಯಿಂದ ಕೋವ್ಯಾಕ್ಸಿನ್‌ಗೆ ಬೇಡಿಕೆ

   ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಬರುವ ಸುಮಾರು ಶೇ.65ರಷ್ಟು ಮಂದಿ ಈಗ ಕೋವ್ಯಾಕ್ಸಿನ್ ಲಸಿಕೆಗೆ ಬೇಡಿಕೆ ಇಡುತ್ತಿದ್ದಾರೆ.

   ಕೋವಿಶೀಲ್ಡ್‌ಗಿಂತ ಕೋವ್ಯಾಕ್ಸಿನ್ ಲಸಿಕೆ ಹೆಚ್ಚು ಪರಿಣಾಮಕಾರಿ

   ಕೋವಿಶೀಲ್ಡ್‌ಗಿಂತ ಕೋವ್ಯಾಕ್ಸಿನ್ ಲಸಿಕೆ ಹೆಚ್ಚು ಪರಿಣಾಮಕಾರಿ

   ಕೋವಿಶೀಲ್ಡ್‌ಗಿಂತ ಕೋವ್ಯಾಕ್ಸಿನ್ ಲಸಿಕೆಯು ಹೆಚ್ಚಿನ ಪರಿಣಾಮಕಾರಿತ್ವವನ್ನು ಹೊಂದಿದೆ ಜನರು ನಂಬಿದ್ದಾರೆ, ಸೆಲೆಬ್ರಿಟಿಗಳು ಮತ್ತು ನಾಯಕರು ಸಹ ಕೋವ್ಯಾಕ್ಸಿನ್ ಲಸಿಕೆ ತೆಗೆದುಕೊಂಡಿದ್ದಾರೆ. ಹಾಗಾಗಿಯೇ ಕೋವ್ಯಾಕ್ಸಿನ್ ಲಸಿಕೆಗೆ ಹೆಚ್ಚು ಬೇಡಿಕೆ ಬಂದಿದೆ.

   English summary
   With the opening of vaccinations for everyone aged above 45 years, health officials in the state noticed a new trend: Covaxin, the junior vaccine which was once regarded with suspicion, has now become the public’s vaccine of choice.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X