ರಾಜಸ್ಥಾನದಲ್ಲಿ ಹುತಾತ್ಮರಾದ ಮೂಡುಬಿದರೆ ಯೋಧ

Posted By:
Subscribe to Oneindia Kannada

ಮೂಡುಬಿದಿರೆ,ಜನವರಿ,05: ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಶನಿವಾರ ರಾಜಸ್ಥಾನದಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿರುವ ಯೋಧ ಗಿರೀಶ್ ಈಶ್ವರ ಪೂಜಾರಿ (35) ಅವರ ಪಾರ್ಥಿವ ಶರೀರವನ್ನು ಮಂಗಳವಾರ ಹುಟ್ಟೂರಿಗೆ ತರುವ ಸಾಧ್ಯತೆಯಿದೆ.

ಗಿರೀಶ್ ಮೂಡುಬಿದಿರೆ ತಾಲೂಕು ಮಿಜಾರು ಉರ್ಕನಂದಾಡಿಯ ದಿ. ಈಶ್ವರ ಪೂಜಾರಿ ಅವರ ಪುತ್ರ. ಕಳೆದ 17 ವರ್ಷಗಳಿಂದ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಿರೀಶ್‌ 20 ದಿನಗಳ ಹಿಂದೆಯಷ್ಟೇ ಹುಟ್ಟೂರಿಗೆ ಆಗಮಿಸಿ, ಪತ್ನಿ ರೂಪಾ ಮತ್ತು ಪುತ್ರ ಗಗನ್(4) ‌ನನ್ನು ತಮ್ಮೊಂದಿಗೆ ರಾಜಸ್ಥಾನಕ್ಕೆ ಕರೆದೊಯ್ದಿದ್ದರು.

ಮೃತರ ಪಾರ್ಥಿವ ಶರೀರವನ್ನು ರಾಜಸ್ಥಾನದಿಂದ ಮಂಗಳೂರಿಗೆ ವಿಶೇಷ ವಿಮಾನದ ಮೂಲಕ ಸರ್ಕಾರಿ ಗೌರವದೊಂದಿಗೆ ಹುಟ್ಟೂರಿಗೆ ಇಂದು ತರುವ ಬಗ್ಗೆ ಮಾಹಿತಿ ಲಭಿಸಿದೆ.[ಎಂಥಾ ಘೋರ ವಿಧಿ ಲಿಖಿತ,ನಿರಂಜನ್ ಸಾವಿನ ಆಘಾತ]

soldier

ಆಕಸ್ಮಿಕ ಬೆಂಕಿ, ಸುಟ್ಟುಹೋದ ಜಮೀನು

ಉಡುಪಿ,ಜನವರಿ.೦4: ಆಕಸ್ಮಿಕವಾಗಿ ಬೆಂಕಿ ಉರಿದ ಹಿನ್ನಲೆ ಖಾಸಗೀ ಜಾಮೀನು ಸುಟ್ಟು ಹೋದ ಘಟನೆ ಉಡುಪಿಯ ಬೆಳ್ಮಣ್ ಸಮೀಪದ ಜಂತ್ರದಲ್ಲಿ ನಡೆದಿದೆ. ಜಮೀನಿಗೆ ಬೆಂಕಿ ತಗುಲಿದ ಕಾರಣ ಏನು ಎಂದು ತಿಳಿದು ಬಂದಿಲ್ಲ.

ಬೆಂಕಿ ಹೊತ್ತಿ ಉರಿಯುವುದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದೆ. ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Moodabidri soldier Girish Ehwar Poojary(35) expired in Rajastan. He was work as a soldier from 7 years in Rajastan. His dead body come to city on Tuesday, January, 5th.
Please Wait while comments are loading...