ಚಿತ್ರಗಳು : ಕೊಡಗಿನಲ್ಲಿ ತೀವ್ರತೆಗೊಂಡ ಆರಿದ್ರ ಮಳೆಯ ಆರ್ಭಟ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕೊಡಗು, ಜೂನ್ 30 : ಕೊಡಗಿನಲ್ಲಿ ಆರಿದ್ರ ಮಳೆಯ ಆರ್ಭಟ ಮುಂದುವರೆದಿದ್ದು, ಕಾವೇರಿ ನದಿ ಸೇರಿದಂತೆ ಜಿಲ್ಲೆಯಾದ್ಯಂತ ನದಿಗಳು ಪ್ರವಾಹದ ಮಟ್ಟದಲ್ಲಿ ಹರಿಯುತ್ತಿವೆ. ಇದರಿಂದಾಗಿ ಜಿಲ್ಲೆಯ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಮುಳುಗಡೆಗೊಂಡಿದ್ದರಿಂದ ಭಾಗಮಂಡಲ-ಮಡಿಕೇರಿ- ನಾಪೋಕ್ಲು ರಸ್ತೆ ಸಂಚಾರ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಡಗಿನ ವಿವಿಧೆಡೆಗಳಲ್ಲಿ ರಸ್ತೆಗಳು, ಮನೆಗಳು, ರಕ್ಷಣಾ ಗೋಡೆಗಳು, ಮರಗಿಡಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದರಿಂದ ಭಾರೀ ಹಾನಿ ಉಂಟಾಗಿದೆ. [ಮಳೆಗಾಲದ ಅತಿಥಿಯಾಗಿ ಬಂದ ಹೆಬ್ಬಾವು!]

kodagu

ಮಲ್ಲಿಕಾರ್ಜುನ ನಗರದ ಡಾ. ಅಂಬೇಡ್ಕರ್ ಬಡಾವಣೆಯಲ್ಲಿರುವ ದಿವಾಕರ್ ಎಂಬವರ ಮನೆಯ ಹಿಂಭಾಗದ ಅಡುಗೆ ಕೋಣೆ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಚಾಮುಂಡೇಶ್ವರಿ ನಗರದ ನಿವಾಸಿ ನಾಗಮ್ಮ ಎಂಬವರ ಹಳೆಯ ಮನೆ ಕುಸಿದುಬಿದ್ದಿದೆ. [ಕೊಡಗಿನಲ್ಲಿ ಕುಂಭದ್ರೋಣ ಮಳೆ, ಭಾಗಮಂಡಲ ಜಲಾವೃತ]

ಇದೇ ನಗರದಲ್ಲಿ ಸಮುದಾಯ ಭವನದ ಬಳಿ ತಡೆಗೋಡೆ ಕುಸಿದಿದೆ. ಓಂಕಾರೇಶ್ವರ ದೇವಾಲಯದ ರೆಡ್ ಫರ್ನ್ ಹೋಟೆಲ್ ಬಳಿ ತಡೆಗೋಡೆ ಹಾಗೂ ರಾಜಸೀಟಿನ ಕೆಳಗಿನ ರಸ್ತೆಯಲ್ಲಿ ರಾಜ್ ದರ್ಶನ ಹೋಟೇಲ್ ಮಾಲೀಕರ ಮನೆಯ ತಡೆಗೋಡೆ ಕುಸಿದುದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.

-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Heavy rain reported at Kodagu district. holiday declared for schools and colleges due to rain.
Please Wait while comments are loading...