Rain Alert: ಮುಂದಿನ 48 ಗಂಟೆ ಕಾಲ ಭರ್ಜರಿ ಮಳೆ: ಕೊಡೆ ಹಿಡಿದು ಸಿದ್ಧರಾಗಿ!

ಮುಂಗಾರು ಮಳೆ ಅಬ್ಬರ ಬಲು ಜೋರಾಗಿದ್ದು, ಕರ್ನಾಟಕದ ಪ್ರತಿಯೊಂದು ಜಿಲ್ಲೆ ಮಳೆ ಆರ್ಭಟಕ್ಕೆ ತಂಪಾಗಿದೆ. ಅದ್ರಲ್ಲೂ ಕರ್ನಾಟಕದ ಕರಾವಳಿ ಜಿಲ್ಲೆಗಳು & ಮಲೆನಾಡು ಭಾಗ ಭಾರಿ ಭರ್ಜರಿ ಮುಂಗಾರು ಮಳೆಗೆ ತೊಯ್ದು ಹೋಗಿದೆ. ಹೀಗಿದ್ದಾಗ ಮತ್ತಷ್ಟು ಮಳೆ ಬಗ್ಗೆ ಅಲರ್ಟ್ ಸಿಕ್ಕಿದ್ದು, ಇದೇ ರೀತಿ ಇನ್ನೂ ಕೆಲವು ದಿನಗಳ ಕಾಲ ಮುಂಗಾರು ಮಳೆ ಕನ್ನಡ ನಾಡಿಗೆ ಅಪ್ಪಳಿಸುವುದು ಪಕ್ಕಾ ಆಗಿದೆ!

ಮುಂಗಾರು ಮಳೆ ಶುರುವಾಗಿ 1 ತಿಂಗಳು ಕಳೆದಿದ್ದು, ಕರ್ನಾಟಕದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಧ್ಯ ಮಧ್ಯದಲ್ಲಿ ಮುಂಗಾರು ಮಳೆ ಒಂದಷ್ಟು ಬ್ರೇಕ್ ಪಡೆದರೂ ಅದರ ಆರ್ಭಟಕ್ಕೆ ಸಮಸ್ಯೆ ಏನೂ ಆಗಿಲ್ಲ. ಅದರಲ್ಲೂ ಕಳೆದ 2 ವಾರಗಳಿಂದ ನಿರಂತರವಾಗಿ ಈ ಮಳೆ ಅಬ್ಬರಿಸುತ್ತಿದೆ. ಇದೀಗ ಮುಂದಿನ ಕೆಲವು ವಾರಗಳ ಕಾಲ ಪರಿಸ್ಥಿತಿ ಹೀಗೆ ಇರಲಿದ್ದು ಜನ ಅಲರ್ಟ್ ಆಗಿರಬೇಕು ಎಂದು ಮುನ್ಸೂಚನೆ ನೀಡಲಾಗಿದೆ. ಅದರಲ್ಲೂ ಮುಂದಿನ 48 ಗಂಟೆಗಳ ಕಾಲ ಮುಂಗಾರು ಮಳೆಯ ಮಾರುತಗಳು ಕರ್ನಾಟಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಲು ಸಜ್ಜಾಗಿವೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗೆ ಭಾರಿ ಮಳೆ ಬೀಳಲಿದೆ? ಬನ್ನಿ ತಿಳಿಯೋಣ.

Monsoon Rain Will Hit In These Places Of Karnataka State For Next 48 Hours

ಕರಾವಳಿ & ಮಲೆನಾಡು ಭಾಗದಲ್ಲಿ...

ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುತ್ತಿದೆ. ಹಾಗೇ ರಾಜಧಾನಿ ಬೆಂಗಳೂರು ಸೇರಿದಂತೆ ವಿಜಯಪುರ & ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್, ಬಾಗಲಕೋಟೆ & ಬೆಳಗಾವಿ & ಬಳ್ಳಾರಿ, ಕೊಪ್ಪಳ, ಧಾರವಾಡ, ಗದಗ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸಿದ್ದು, ಕರ್ನಾಟಕದ ಡ್ಯಾಂಗಳಿಗೂ ಭಾರಿ ನೀರು ಬರುತ್ತಿದ್ದು. ಇಂತಹ ಸಮಯದಲ್ಲೇ ಮತ್ತೊಂದು ಭರ್ಜರಿ ಸುದ್ದಿ ಸಿಕ್ಕಿದೆ, ಆ ಸುದ್ದಿ ಏನು ಅಂದ್ರೆ ಮುಂದಿನ 48 ಗಂಟೆ ಕಾಲ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆರಾಯ ಆರ್ಭಟಿಸುವುದು ಗ್ಯಾರಂಟಿ ಆಗಿದೆ.

ಶಾಲೆಗಳಿಗೆ ಕೂಡ ರಜೆ ಘೋಷಣೆ!

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಭಾರಿ ಮಳೆ ಬೀಳುತ್ತಿದೆ. ಹೀಗಾಗಿ ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ & ಬ್ರಹ್ಮಾವರ ತಾಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜುಲೈ 5ರ ಶುಕ್ರವಾರ ಅಂದ್ರೆ ಇಂದು ರಜೆಯ ಘೋಷಣೆ ಮಾಡಲಾಗಿದೆ. ಹಾಗೇ ಅಂಗನವಾಡಿ ಕೇಂದ್ರ ಸೇರಿ, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಘೋಷಣೆ ಮಾಡಲಾಗಿದೆ. ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+