ಮುಂಗಾರು ಮಳೆ ಅಬ್ಬರ: ಜಲಾಶಯಗಳ ಇಂದಿನ ಮಟ್ಟ

Written By:
Subscribe to Oneindia Kannada

ಬೆಂಗಳೂರು, ಜುಲೈ, 06: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಅದರೊಂದಿಗೆ ಜಲಾಶಯಗಳ ಮಟ್ಟದಲ್ಲಿ ಸುಧಾರಣೆ ಕಂಡಿದೆ.

ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಉತ್ತರಕನ್ನಡ ಜಿಲ್ಲೆ ಶಿರಸಿ, ಸಿದ್ದಾಪುರ, ಹೊನ್ನಾವರ ಮತ್ತು ಭಟ್ಕಳದಲ್ಲಿ ಭಾರೀ ಮಳೆಯಾಗುತ್ತಿದೆ.[ತುಂಬಿ ಹರಿಯುವ ತುಂಗಾನದಿಯಲ್ಲಿ ಶಿವಮೊಗ್ಗ ಎಸ್ಪಿ ಸಾಹಸ]

rain

ಶಿವಮೊಗ್ಗ ತಾಲೂಕು ಗಾಜನೂರು ತುಂಗಾ ಜಲಾಶಯ ಭರ್ತಿಯಾದ್ದರಿಂದ 15 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರನ್ನುಹೊರಗೆ ಬಿಡಲಾಗಿದೆ. ಇನ್ನು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ, ಕೊಪ್ಪ. ಕೊಟ್ಟಿಗೆಹಾರದಲ್ಲೂ ಮಳೆಯಾಗುತ್ತಿದೆ.[ಮೈದುಂಬಿದ ಜೋಗ ನೋಡಿಕೊಂಡು ಬನ್ನಿ]

ಉಡುಪಿ ಮತ್ತು ಹೊನ್ನಾವರದಲ್ಲಿ ಮಂಗಳವಾರ 6 ಸೆಂಮೀ ಮಳೆಯಾಗಿದೆ. ಮಂಗಳೂರು, ಕೊಲ್ಲೂರು, ಮಂಕಿ, ಆಗುಂಬೆ, ಹೊಸನಗರದಲ್ಲಿ 5 ಸೆಂ ಮೀ ಮಳೇ ದಾಖಲಾಗಿದೆ. ಪಣಂಬೂರು, ಕುಂದಾಪುರ, ಹುಲಿಕಲ್, ಬಂಟ್ವಾಳ, ಬೆಳ್ತಂಗಡಿ, ಯಲ್ಲಾಪುರದಲ್ಲೂ ಮಳೆಯಾಗುತ್ತಿದೆ.[ಮೈದುಂಬಿ ಧುಮ್ಮಿಕ್ಕುತಿಹ ಅಬ್ಬಿ ಫಾಲ್ಸ್‌ನತ್ತ ಪ್ರವಾಸಿಗರ ದೌಡು]

ರಾಜ್ಯದಾದ್ಯಂತ ಸುರಿಯುತ್ತಿರುವ ಮಳೆ ಪರಿಣಾಮ ಜಲಾಶಯಗಳ ಒಳ ಹರಿವಿನ ಪ್ರಮಾಣ ಹೆಚ್ಚಿದೆ. ಇದು ಮುಂದಿನ ಕೃಷಿ ಚಟುವಟಿಕೆ ಮೇಲೆ ಉತ್ತಮ ಪರಿಣಾಮ ಬೀರಲಿದೆ. ಯಾವ ಜಲಾಶಯದಲ್ಲಿ ಎಷ್ಟು ನೀರು ಶೇಖರಣೆಯಾಗಿದೆ ನೋಡಿಕೊಂಡು ಬನ್ನಿ..

ಜಲಾಶಯಗಳ ಮಟ್ಟ

ಜಲಾಶಯ ಇಂದಿನ ಮಟ್ಟ(ಅಡಿ)
ಗರಿಷ್ಠ ಮಟ್ಟ(ಅಡಿ)
ಒಳಹರಿವು(ಕ್ಯೂಸೆಕ್) ಹೊರಹರಿವು
ಕಬಿನಿ
2,263 2,284
5,000(ಕ್ಯೂಸೆಕ್) 2,000
ಲಿಂಗನಮಕ್ಕಿ 1,771 1,819 24,568 ---
ಭದ್ರಾ 129 186
14,989 107
ತುಂಗಭದ್ರಾ 1,596 1,663 31,548 160
ಕೆಆರ್ ಎಸ್
88 124.80 8662 2643
ಹಾರಂಗಿ 2,848 2,859 6860 ---
ಹೇಮಾವತಿ 2,884 2,922 1864 75

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Weather Report: Rainfall occurred at most places over Coastal Karnataka & North Interior Karnataka and at many places over South Interior Karnataka.Uttara Kannada district Honnavar, Udupi received 6 cm rainfall.
Please Wait while comments are loading...