ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಾದ್ಯಂತ ಅಬ್ಬರಿಸಿದ ಮಳೆರಾಯ, ಭರ್ತಿಯಾದ ಜಲಾಶಯ

By Madhusoodhan
|
Google Oneindia Kannada News

ಬೆಂಗಳೂರು, ಜುಲೈ, 04: ರಾಜ್ಯಾದ್ಯಂತ ಮುಂಗಾರು ಆರ್ಭಟ ಮುಂದುವರಿಸಿದೆ. ಮಲೆನಾಡು, ಕರಾವಳಿಯಲ್ಲಿ ವರುಣ ಆರ್ಭಟಿಸುತ್ತಿದ್ದು ಉತ್ತರ ಕರ್ನಾಟಕ ಭಾಗ ಹೆಚ್ಚಿನ ಮಳೆ ನಿರೀಕ್ಷೆಯಲ್ಲಿದೆ.

ಶಿವಮೊಗ್ಗ ಜಿಲ್ಲೆ ಆಗುಂಬೆ(14 ಸೆಂಮೀ), ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ (13 ಸೆಂ ಮೀ) ಧರ್ಮಸ್ಥಳ( 12 ಸೆಂಮೀ) ಮಳೆ ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಗೆರುಸೊಪ್ಪಾ(11), ದಕ್ಷಿಣ ಕನ್ನಡ ಜಿಲ್ಲೆ ಮಾಣಿ(11), ಬಂಟ್ವಾಳ, ಪೂತ್ತೂರು, ಉಡುಪಿ, ಕಾರ್ಕಳ, ಹುಂಚದಕಟ್ಟೆ, ಕೊಟ್ಟಿಗೆಹಾರ, ಕೊಲ್ಲೂರು, ಹೊಸನಗರ, ಸಿದ್ದಾಪುರ, ಶಿರಾಲಿ, ಕದ್ರಾ, ಭಾಗಮಂಡಲ, ತಾಳಗುಪ್ಪಾ, ಲಿಂಗನಮಕ್ಕಿ ಸೇರಿದಂತೆ ಹಲವೆಡೆ ಮಳೆ ದಾಖಲಾಗಿದೆ.[ಭಾರೀ ಮಳೆಗೆ ಮುಳುಗಡೆಯಾದ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ]

ಮುಂದಿನ 24 ಗಂಟೆ ಅವಧಿಯಲ್ಲಿ ಕರಾವಳಿ ಮತ್ತು ಒಳನಾಡಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಮಲೆನಾಡಿನ ಘಟ್ಟ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದರೆ, ಬಯಲುಸೀಮೆಯಲ್ಲಿ ಸಾಧಾರಣ ಮಳೆಯಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಿದ್ದು, ಶರಾವತಿ ನದಿ ಕಣಿವೆ, ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರ ತಾಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿದೆ.[ಕೊಡಗಿನಲ್ಲಿ ಕುಂಭದ್ರೋಣ ಮಳೆ, ಭಾಗಮಂಡಲ ಜಲಾವೃತ]

ಪರಿಣಾಮ ಶರಾವತಿ ಹಾಗೂ ತು೦ಗಾ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ಲಿ೦ಗನಮಕ್ಕಿ ವ್ಯಾಪ್ತಿಯಲ್ಲಿ 57.60 ಮಿಮೀ ಮಳೆಯಾಗಿದ್ದು ಜಲಾಶಯಕ್ಕೆ 24,568 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಶೃ೦ಗೇರಿ, ಕಳಸ ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿರುವುದರಿ೦ದ ಭದ್ರಾ ಜಲಾಶಯಕ್ಕೆ 8,636 ಕ್ಯೂಸೆಕ್ ನೀರು ಬರುತ್ತಿದೆ.[ಮೈದುಂಬಿದ ಜೋಗ ನೋಡಿಕೊಂಡು ಬನ್ನಿ]

ಬೆಂಗಳೂರಲ್ಲಿ ಕಡಿಮೆಯಾದ ಮಳೆ
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಮಳೆ ಮಾಯವಾಗಿದೆ. ಮೋಡ ಕವಿದ ವಾತಾವರಣ ಮುಂದುವರಿದಿದ್ದರೂ ಮಳೆ ಸುರಿಸಿಲ್ಲ. ಮುಂದಿನ 24 ಗಂಟೆ ಅವಧಿಯಲ್ಲಿ ಮಹಾನಗರ ತುಂತುರು ಮಳೆ ಪಡೆಯುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಹೇಳಿದೆ.

ಜಲಾಶಯಗಳ ಮಟ್ಟ

ಜಲಾಶಯ ಇಂದಿನ ಮಟ್ಟ(ಅಡಿ)
ಗರಿಷ್ಠ ಮಟ್ಟ(ಅಡಿ)
ಒಳಹರಿವು(ಕ್ಯೂಸೆಕ್) ಹೊರಹರಿವು
ಕಬಿನಿ
2,262.4 2,284
5,000(ಕ್ಯೂಸೆಕ್) 2,500
ಲಿಂಗನಮಕ್ಕಿ 1,767.4 1,819 24,568 ---
ಭದ್ರಾ 127 186
8,636 103
ತುಂಗಭದ್ರಾ 1,586.29 1,663 23,467 160
ಕೆಆರ್ ಎಸ್
85 124.80 12, 544 2659
ಹಾರಂಗಿ 2,842.35 2,859 2,206 ---
ಹೇಮಾವತಿ 2,878.75 2,922 3,485 --
English summary
Weather Report: Rainfall occurred at most places over Coastal Karnataka & North Interior Karnataka and at many places over South Interior Karnataka. Shivamogga district Agumbe received 14 cm, Dakshina Kannada District Belthangadi received 13 cm rainfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X