Monsoon Rain: ಸಂಜೆ ವೇಳೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ತಂಪೆರೆದ ವರುಣ
ಕರ್ನಾಟಕ, ಆಗಸ್ಟ್, 10: ಇಷ್ಟು ದಿನ ಬಿಡುವು ನೀಡಿದ್ದ ಮಳೆರಾಯ ಮತ್ತೆ ಇಂದು ಚಿಕ್ಕಮಗಳೂರು, ಚಾಮರಾಜನಗರ ಸೇರಿದಂತೆ ಹಲವೆಡೆ ಅಬ್ಬರಿಸಿ ಬೊಬ್ಬೆರೆದಿದ್ದಾನೆ.
ಚಿಕ್ಕಮಗಳೂರಿನ ಮಲೆನಾಡಿನಲ್ಲಿ ಹಲವೆಡೆ ಇಂದು (ಆಗಸ್ಟ್ 10) ಧಾರಾಕಾರ ಮಳೆಯಾಗಿದೆ. ಕೊಪ್ಪ ತಾಲೂಕಿನ ಜಯಪುರ, ಬಾಳೆಹೊನ್ನೂರು, ಮೇಗುಂದ ಸೇರಿದಂತೆ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದ ವರುಣ ಇದೀಗ ದಿಢೀರನೇ ಅಬ್ಬರಿಸಿದ ಹಿನ್ನೆಲೆ ಇಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ.

ಇನ್ನು ಚಾಮರಾಜನಗರ ಜಿಲ್ಲೆಯ ಹಲವೆಡೆ ಒಂದು ಗಂಟೆಗಳ ಧಾರಾಕಾರ ಮಳೆ ಸುರಿದಿದೆ. ಬೆಳಗ್ಗೆಯಿಂದಲ್ಲೂ ಮೋಡ ಕವಿದ ವಾತಾವರಣ ಇದ್ದು, ಸಂಜೆಯ ವೇಳೆಗೆ ಏಕಾಏಕಿ ಜೋರು ಮಳೆಯಾಗಿದೆ.
ಹಲವು ದಿನಗಳಿಂದಲ್ಲೂ ಬಾರದೇ ಸತಾಯುಸುತ್ತಿದ್ದ ಮಳೆ ಇದೀಗ ದಿಢೀರನೇ ಎಂಟ್ರಿ ಕೊಟ್ಟಿದ್ದು, ಇದರಿಂದ ಜಿಲ್ಲೆಯ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಅಲ್ಲದೆ ಜಿಲ್ಲಾ ಕೇಂದ್ರದ ಹಲವು ಬಡಾವಣೆಯಲ್ಲಿ ಮಳೆ ನೀರು ನದಿಯಂತೆ ಹರಿದಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಅಲ್ಲದೆ ಮತ್ತೊಂದೆಡೆ ಶಾಲಾ ಮಕ್ಕಳು ಹಾಗೂ ಕೆಲಸದಿಂದ ಮನೆಗೆ ತೆರಳುವವರು ಭಾರೀ ಮಳೆಯಿಂದ ಪರದಾಡಿದ ಘಟನೆಯೂ ನಡೆದಿದೆ.












Click it and Unblock the Notifications