ಕರ್ನಾಟಕದಲ್ಲಿ ಮುಂಗಾರು ಹೇಗಿದೆ?: ಹೆಚ್ಚು ಮಳೆಯಾದ ಪ್ರದೇಶಗಳು

ಬೆಂಗಳೂರು, ಜೂನ್ 25: ಮುಂಗಾರು ಸ್ವಲ್ಪ ಚುರುಕು ಪಡೆದಿದೆ. ಕಳೆದ ಒಂದು ವಾರದಿಂದ ಕೇವಲ ಮೋಡವಷ್ಟೇ ತುಂಬಿಕೊಂಡಿದ್ದ ಬೆಂಗಳೂರಿನಲ್ಲಿ ಬುಧವಾರ ಮಳೆಯಾಗಿತ್ತು.

Recommended Video

      Covid update : almost 17000 cases in the last 24 hours in India | Oneindia Kannada

      ಬೆಂಗಳೂರಿನ ಹೊರವಲಯ ನೆಲಮಂಗಲದಲ್ಲಿ ಗಾಳಿ ಸಹಿತ ಮಳೆಯಾಗಿದೆ.ಮಂಗಳವಾರ ಕೇವಲ 2 ಗಂಟೆಯಲ್ಲಿ ಸುಮಾರು ಏಳು ಇಂಚಿನಷ್ಟು ಮಳೆ ಸುರಿದಿದ್ದ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಇಂದು ಕೂಡ ಸಾಧಾರಣ ಮಳೆಯಾಗಿದೆ.

      ಜಿಲ್ಲೆಯ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಮೂಡಿಗೆರೆ, ಎನ್.ಆರ್.ಪುರ, ಬಾಳೆಹೊನ್ನೂರು ಭಾಗದಲ್ಲಿ ಅಲ್ಲಲ್ಲೇ ತುಂತುರು ಮಳೆಯಾಗಿದೆ. ಮಲೆನಾಡಿನ ಘಟ್ಟ ಪ್ರದೇಶಗಳಲ್ಲೂ ಅಲ್ಲಲ್ಲೇ ಮಳೆಯಾಗುತ್ತಿದ್ದು,ನಾಡಿನ ಜೀವನದಿಗಳಾದ ತುಂಗಾ-ಭದ್ರಾ ಹೇಮಾವತಿ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಕೂಡ ಏರಿಕೆಯಾಗಿದೆ.

      Karnataka Monsoon, Heavy Rainfall Areas Listed Here

      ಅಂಕೋಲಾ, ಕಾರವಾರ, ಕೋಟಾ, ಕೊಟ್ಟಿಗೆಹಾರ, ಕುಂದಾಪುರ, ಕೊಲ್ಲೂರು, ಕಾರ್ಕಳ, ಕಿರವತ್ತಿ, ನೆಲಮಂಗಲ, ಎಚ್‌ಡಿ ಕೋಟೆ, ಉಡುಪಿ, ಚಿಂತಾಮಣಿ, ಶಿಡ್ಲಘಟ್ಟ, ಬೆಳ್ಳೂರು, ಹೊನ್ನಾವರ, ಕುಮಟಾ, ಕೋಲಾರದಲ್ಲಿ ಮಳೆಯಾಗಿದೆ.

      ನೈಋತ್ಯ ಮುಂಗಾರು ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೂ ಸಾಧಾರಣ ಮಳೆಯಾಗಲಿದೆ.
      ದಕ್ಷಿಣ, ಕನ್ನಡ, ಉಡುಪಿಯಲ್ಲಿ ಜೂನ್ 25 ರಿಂದ ಜೂನ್ 29ರವರೆಗೂ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಜೂನ್ 28-29ರಂದು ಹೆಚ್ಚು ಮಳೆಯಾಗಲಿದೆ.

      ಬಳ್ಳಾರಿ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರ ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಜೂನ್ 25-29ರ ಸಮಯದಲ್ಲಿ ಮಳೆಯಾಗಲಿದೆ.

      ಬೆಂಗಳೂರಿನಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+