Karnataka Dam Water Level: ಜೋರು ಮಳೆ, ವಿವಿಧ ಜಲಾಶಯಗಳ ಒಳಹರಿವು ಭಾರೀ ಹೆಚ್ಚಳ! ಇಂದಿನ ಮಟ್ಟ..

ಬೆಂಗಳೂರು, ಜುಲೈ 09: ಮುಂಗಾರು ಮಳೆ ಅಬ್ಬರ ಮತ್ತೆ ಜೋರಾಗಿದೆ. ಕರ್ನಾಟಕದ ಪಶ್ಚಿಮ ಘಟ್ಟ, ಕರಾವಳಿ ಹಾಗೂ ಒಳನಾಡಿನ ಕೆಲವೆಡೆ ಸಾಧಾರಣದಿಂದ ಭಾರೀ ಮಳೆ ಆಗುತ್ತಿದೆ. ಹೀಗೆ ನಿರಂತರ ಮಳೆಯಿಂದಾಗಿ ರಾಜ್ಯದ ವಿವಿಧ ಅಣೆಕಟ್ಟುಗಳಿಗೆ ಜೀವಕಳೆ ಬಂದಿದೆ. ಅವಧಿಗೂ ಮುನ್ನವೇ ಅಂದರೆ ಮಳೆಗಾದಲ ಮೊದಲ ತಿಂಗಳಲ್ಲೇ ದಕ್ಷಿಣ ಒಳನಾಡಿನ ಕೆಲವು ಜಲಾಶಯಗಳು ಭರ್ತಿ ಆಗಿವೆ. ಮಳೆ ಮುಂದುವರಿದಿದ್ದು, ಡ್ಯಾಂಗಳ ಒಳ ಹಾಗೂ ಹೊರ ಹರಿವಿನ ಪ್ರಮಾನ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದೆ.

ಹೌದು, ಕೊಡಗು, ತಲಕಾಲೇರಿ, ಬಾಗಮಂಡಲ, ಶಿವಮೊಗ್ಗ, ಹಾಸನ, ಕಬಿನಿ ಅರಣ್ಯ ಪ್ರದೇಶ, ಕೇರಳದ ಕೆಲವು ಭಾಗಗಳಲ್ಲಿ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಮಳೆ ಮುಂದುವರಿದಿದೆ. ಜಲಾನಯನ ಪ್ರದೇಶಗಳಲ್ಲಿ ಮಳೆ ಅಬ್ಬರದಿಂದ ನದಿಗಳು ತುಂಬಿದ್ದು, ಅಣೆಕಟ್ಟುಗಳು ಭರ್ತಿ ಆಗಿವೆ. ಕೃಷ್ಣ ರಾಜಸಾಗರ, ಕಬಿನಿ, ಹಾರಂಗಿ, ಹೇಮಾವತಿ, ಭದ್ರಾ, ಮೆಟ್ಟೂರು, ಆಲಮಟ್ಟಿ ಸೇರಿದಂತೆ ಪ್ರಮುಖ ಡ್ಯಾಂಗಳಲ್ಲಿ ನಿತ್ಯ ಸಾವಿರಾರು ಕ್ಯೂಸೆಕ್ ನೀರು ಹೊರ ಬೀಡಲಾಗುತ್ತಿದೆ. ಕೆಲವೆಡೆ ಮಳೆ ಕಡಿಮೆ ಆದರೂ ಒಳಹರಿವು ಮಾತ್ರ ಕಡಿಮೆ ಆಗಿಲ್ಲ.

Monsoon Boost Karnataka Major Dams Fill Up Early with Heavy Rain Know Inflow -Outflow today

ಪ್ರಮುಖ ಡ್ಯಾಂಗಳ ಇಂದಿನ ಅಪ್ಡೇಟ್, ಪಟ್ಟಿ

ಕಬಿನಿ ಜಲಾಶಯದ ವಿವರ

* ಡ್ಯಾಂ ಒಟ್ಟು ನೀರು ಸಂಗ್ರಹ ಸಾಮರ್ಥ್ಯ: 19.52 ಟಿಎಂಸಿ

* ಇಂದಿನ ನೀರಿನ ಸಂಗ್ರಹ: 17.96 ಟಿಎಂಸಿ

* ಇಂದಿನ ಒಳಹರಿವು : 14,487 ಕ್ಯೂಸೆಕ್

* ಇಂದಿನ ಹೊರಹರಿವು: 12,000 ಕ್ಯೂಸೆಕ್

ಕೃಷ್ಣರಾಜ ಸಾಗರ ಅಣೆಕಟ್ಟಿನ ಮಾಹಿತಿ

* ಡ್ಯಾಂ ಒಟ್ಟು ನೀರು ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ

* ಇಂದಿನ ನೀರಿನ ಸಂಗ್ರಹ: 45.979 ಟಿಎಂಸಿ

* ಇಂದಿನ ಒಳಹರಿವು : 29,534 ಕ್ಯೂಸೆಕ್

* ಇಂದಿನ ಹೊರಹರಿವು: 37.600

ಹಾರಂಗಿ ಡ್ಯಾಂ ಇಂದಿನ ಮಟ್ಟ

* ಡ್ಯಾಂ ಒಟ್ಟು ನೀರು ಸಂಗ್ರಹ ಸಾಮರ್ಥ್ಯ: 8.5 TMC ಟಿಎಂಸಿ

* ಇಂದಿನ ನೀರಿನ ಸಂಗ್ರಹ: 6.499 ಟಿಎಂಸಿ

* ಇಂದಿನ ಒಳಹರಿವು : 4880 ಕ್ಯೂಸೆಕ್

* ಇಂದಿನ ಹೊರಹರಿವು: 4083 ಕ್ಯೂಸೆಕ್

ಹೇಮಾವತಿ ಜಲಾಶಯದ ನೀರಿನ ವಿವರ

* ಡ್ಯಾಂ ಒಟ್ಟು ನೀರು ಸಂಗ್ರಹ ಸಾಮರ್ಥ್ಯ: 37.10 ಟಿಎಂಸಿ

* ಇಂದಿನ ನೀರಿನ ಸಂಗ್ರಹ: 35.003

* ಇಂದಿನ ಒಳಹರಿವು : 15,046 ಕ್ಯೂಸೆಕ್

* ಇಂದಿನ ಹೊರಹರಿವು: 14,550 ಕ್ಯೂಸೆಕ್

ಹವಾಮಾನ ಮುನ್ಸೂಚನೆ ಏನಿದೆ?

ಕರ್ನಾಟಕದಾದ್ಯಂತ ಮುಂದಿನ ಮೂರು ದಿನ ಭಾರೀ ಮಳೆ ಬರಲಿದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳು, ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಮುಂಗಾರು ಆರ್ಭಟ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನು ನೋಡಿದರೆ ರಾಜ್ಯದ ಇತರ ಅಣೆಕಟ್ಟುಗಳು ಜುಲೈ ಅಂತ್ಯದ ಹೊತ್ತಿಗೆ ಭರ್ತಿ ಆಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+