ರಾಜ್ಯಕ್ಕೆ ಮಾನ್ಸೂನ್ ಪ್ರವೇಶ ಕೊಂಚ ವಿಳಂಬ

ಬೆಂಗಳೂರು, ಮೇ. 11: ಮಾನ್ಸೂನ್ ಈ ಬಾರಿ ಕೊಂಚ ತಡವಾಗಿ ರಾಜ್ಯವನ್ನು ಪ್ರವೇಶ ಮಾಡಲಿವೆ. ಅಂಡಮಾನ್ ನಿಕೋಬಾರ್ ದ್ವೀಪದ ನೈಋತ್ಯ ದಿಕ್ಕಿನಿಂದ ಮೇ 10 ರಿಂದಲೇ ಆರಂಭವಾಗಬೇಕಿದ್ದ ಮುಂಗಾರು ಮಾರುತಗಳು ಬಲಿಷ್ಠವಾಗಿಲ್ಲ.

ವಾಡಿಕೆಯಂತೆ ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಮಾರುತಗಳು ಪ್ರವೇಶಿಸಬೇಕಿತ್ತು. ಆದರೆ ಇನ್ನು ಎರಡು ಮೂರು ದಿನಗಳವರೆಗೂ ನೈರುತ್ಯ ದಿಕ್ಕಿನಲ್ಲಿ ಮುಂಗಾರು ಮಾರುತ ಬೀಸುವ ಲಕ್ಷಣ ಕಂಡುಬಂದಿಲ್ಲ. ಹೀಗಾಗಿ ಮಾನ್ಸೂನ್ ಪ್ರವೇಶದಲ್ಲೂ ವಿಳಂಬವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.[ದೇಶದ ಮಾನ್ಸೂನ್ ಮೇಲೆ 'ಎಲ್ ನಿನೋ' ಕರಾಳ ಛಾಯೆ]

rain

ಆದರೆ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಈ ಬಾರಿ ಶೇ.10ರಿಂದ 15 ರಷ್ಟು ಮಳೆ ಹೆಚ್ಚಾಗಲಿದೆ. ಹೀಗಾಗಿ ಮುಂಗಾರು ಪ್ರವೇಶ ತಡವಾದರೂ ರೈತರು ಆತಂಕಕ್ಕೆ ಸಿಲುಕಬೇಕಾಗಿಲ್ಲ. ಮುಂದಿನ ವಾರದಲ್ಲಿ ಮಹತ್ತರ ಬದಲಾವಣೆ ಆಗಬಹುದು ಎಂದು ತಿಳಿಸಿದೆ.

ಬೇಸಿಗೆಯಲ್ಲಿ ಸಮಯದಲ್ಲಿ ಸುರಿದಿರುವ ಅಕಾಲಿಕ ಮಳೆ ರೈತರಿಗೆ ನಷ್ಟ ತಂದಿದೆ. ಈ ಬಾರಿ ಮುಂಗಾರು ಕ್ಷೀಣವಾಗಿದ್ದು ರೈತರು ಮತ್ತೆ ಆತಂಕಕ್ಕೆ ಸಿಲುಕಿಕೊಳ್ಳಲಿದ್ದಾರೆ. ಎಲ್ ನಿನೋ ಸಹ ಭಾರತದ ಮಳೆ ವಾತಾವರಣದ ಮೇಲೆ ಪ್ರಭಾವ ಬೀರಲಿದ್ದು ರೂತರ ಹಿತ ಕಾಪಾಡಲು ಕೇಂದ್ರ ಸರ್ಕಾರ ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.

ಬೇಸಿಗೆಯಲ್ಲಿ ರಾಜ್ಯ ಸೇರಿದಂತೆ ದೇಶದ ಹಲವೆಡೆ ಅಕಾಲಿಕ ಮಳ ಬಿದ್ದಿದೆ. ಅಲ್ಲದೇ ರೈತರ ಮಾವು, ಭತ್ತ, ಜೋಳ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆ ನಷ್ಟಕ್ಕೆ ಕಾರಣವಾಗಿದೆ. ಈಗ ಮುಂಗಾರು ಸಹ ವಿಫಲಗೊಂಡರೆ ಆಹಾರ ವಸ್ತುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+