ಈ ದೇಶದ ಪ್ರಧಾನಿಯಾಗಲು ಮೋದಿ ನಾಲಾಯಕ್: ಸಿದ್ದರಾಮಯ್ಯ
ಬೆಳಗಾವಿ, ಫೆಬ್ರವರಿ 24: "ಈ ದೇಶದ ಪ್ರಧಾನಿಯಾಗಲು ಪ್ರಧಾನಿ ನರೇಂದ್ರ ಮೋದಿ ನಾಲಾಯಕ್" ಎಂದು ಗುಡುಗಿದ್ದಾರೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ.
ಬೆಳಗಾವಿಯ ಅಥಣಿಯಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು.
LIVE: Congress President Shri Rahul Gandhi's #JanaAashirwadaYatre from Athani, Belagavi https://t.co/ixJodXcwLa
— Karnataka Congress (@INCKarnataka) February 24, 2018
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ತಮ್ಮ ಎರಡನೇ ಪ್ರಚಾರ ಇನ್ನಿಂಗ್ ಆರಂಭಿಸಿದ್ದು, ಇಂದು ಬೆಳಗಾಯಿಯಲ್ಲಿ ರಾಹುಲ್ ಗಾಂಧಿ ಪ್ರಚಾರ ನಡೆಸಲಿದ್ದಾರೆ.
ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅಮಿತ್ ಶಾ ಇಂಥ ಜೈಲಿಗೆ ಹೋಗಿದ್ದ ನಾಯಕರನ್ನೇ ಮುಂದಿಟ್ಟುಕೊಂಡು ನಮ್ಮ ಸರ್ಕಾರವನ್ನು ಭ್ರಷ್ಟ ಸರ್ಕಾರ ಎನ್ನುವುದಕ್ಕೆ ನಿಮಗೆ ಯಾವ ಅಧಿಕಾರವಿದೆ? ನೀರವ್ ಮೋದಿ, ಲಲಿತ್ ಮೋದಿಯಂಥವರು ಕೋಟಿ ಕೋಟಿ ದುಡ್ಡು ಕೊಳ್ಳೆ ಹೊಡೆದು ದೇಶ ಬಿಟ್ಟು ಓಡಿ ಹೋಗುವುದಕ್ಕೆ ದಾರಿ ಮಾಡಿಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದರು.











Click it and Unblock the Notifications