ಕಾಂಗ್ರೆಸ್‌ನ 3 ಅಭ್ಯರ್ಥಿ ಗೆಲ್ಲಿಸಲು ಪಕ್ಷೇತರರ ಬೆಂಬಲ ಬೇಕು!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜೂನ್ 07 : ರಾಜ್ಯಸಭೆ ಚುನಾವಣೆ ಭಾರೀ ಕುತೂಹಲ ಕೆರೆಳಿಸುತ್ತಿದೆ. ಪಕ್ಷೇತರ ಶಾಸಕರು ಕಾಂಗ್ರೆಸ್‌ ಶಾಸಕರ ನೇತೃತ್ವದಲ್ಲಿ ಮುಂಬೈನ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಲು ಕಾಂಗ್ರೆಸ್ ಹಲವು ತಂತ್ರಗಳನ್ನು ಬಳಕೆ ಮಾಡುತ್ತಿದೆ.

ಜೂನ್ 11ರಂದು ಕರ್ನಾಟಕ ವಿಧಾನಸಭೆಯಿಂದ 4 ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ಕರ್ನಾಟಕ ಕಾಂಗ್ರೆಸ್ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸುವ ಶಕ್ತಿ ಹೊಂದಿದೆ. ಆದರೆ, ಮೂರನೇ ಅಭ್ಯರ್ಥಿಯಾಗಿ ಕೆ.ಸಿ.ರಾಮಮೂರ್ತಿ ಅವರನ್ನು ಕಣಕ್ಕಿಳಿಸಿರುವ ಪಕ್ಷಕ್ಕೆ ಪಕ್ಷೇತರ ಶಾಸಕರ ಬೆಂಬಲ ಅಗತ್ಯ. [ರಾಜ್ಯಸಭೆ ಚುನಾವಣೆ ನಂಬರ್ ಗೇಮ್]

congress

ಆದ್ದರಿಂದ ಕಾಂಗ್ರೆಸ್ ನಾಯಕರು ಪಕ್ಷೇತರ ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ. ಮೊದಲು ಕರ್ನಾಟಕದಲ್ಲಿಯೇ ಅವರನ್ನು ಇರಲು ಬಿಟ್ಟು, ಅವರ ಮೇಲೆ ಕಣ್ಣಿಡಲು ತೀರ್ಮಾನಿಸಲಾಗಿತ್ತು. ಆದರೆ, ಬೇರೆ ಪಕ್ಷದವರು ಅವರನ್ನು ಸಂಪರ್ಕಿಸಬಹುದು ಎಂದು ಎಲ್ಲರನ್ನೂ ಮುಂಬೈಗೆ ಕರೆದುಕೊಂಡು ಹೋಗಲಾಗಿದೆ. [ಕರ್ನಾಟಕದಲ್ಲಿ ರೆಸಾರ್ಟ್ ರಾಜಕೀಯ ರಿಟರ್ನ್ಸ್, ಕಾಂಗ್ರೆಸ್ ಡೈರೆಕ್ಷನ್]

ಕೆಲವು ಪಕ್ಷೇತರ ಶಾಸಕರು ಮತ್ತು ಮೂವರು ಕಾಂಗ್ರೆಸ್ ಶಾಸಕರು ಮಂಬೈನ ಜೂಹೂ ಪ್ರದೇಶದಲ್ಲಿರುವ ಜೆಡ್ಲ್ಯೂ ಮ್ಯಾರಿಯೇಟ್ ಹೋಟೆಲ್‌ನಲ್ಲಿದ್ದಾರೆ. ಜೂನ್ 9ರಂದು ಶಾಸಕರು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಜೂನ್ 10ರಂದು ವಿಧಾನಪರಿಷತ್ ಮತ್ತು ಜೂನ್ 11ರಂದು ರಾಜ್ಯಸಭೆ ಚುನಾವಣೆ ನಡೆಯಲಿದೆ. [ರಾಜ್ಯಸಭೆ ಚುನಾವಣೆ ಹೇಗೆ ನಡೆಯುತ್ತದೆ?]

5 ಮತಗಳನ್ನು ಸೆಳೆಯಲು ಯತ್ನ : ಶಾಸಕರನ್ನು ರೆಸಾರ್ಟ್‌ಗೆ ಕಳಿಸಿದರೆ ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎಂದು ಮೊದಲು ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆಯಿತು. ಶಾಸಕರು ಕರ್ನಾಟಕದಲ್ಲಿ ಇದ್ದರೆ ಪಕ್ಷದ ಅಭ್ಯರ್ಥಿ ಬಿ.ಎಂ.ಫಾರೂಕ್ ಅವರನ್ನು ಗೆಲ್ಲಿಸಲು 5 ಮತಗಳ ಕೊರತೆ ಇರುವ ಜೆಡಿಎಸ್ ಪಕ್ಷೇತರರನ್ನು ಸೆಳೆಯಬಹುದು ಎಂಬ ಚರ್ಚೆಯ ಹಿನ್ನಲೆಯಲ್ಲಿ ಮುಂಬೈಗೆ ಕಳುಹಿಸಲು ನಿರ್ಧರಿಸಲಾಯಿತು. [ವೋಟಿಗಾಗಿ ನೋಟು: ಯಾರು, ಏನು ಹೇಳಿದರು?]

ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ 123 ಶಾಸಕರ ಬಲ ಹೊಂದಿದೆ. ಒಬ್ಬರು ಅಭ್ಯರ್ಥಿ ಗೆಲುವು ಸಾಧಿಸಲು 45 ಮತಗಳ ಅಗತ್ಯವಿದೆ. ಆಸ್ಕರ್ ಫರ್ನಾಂಡೀಸ್ ಮತ್ತು ಜೈರಾಮ್ ರಮೇಶ್ ಅವರಿಗೆ 45 ಮತಗಳು ಹಂಚಿಕೆಯಾದರೆ 90 ಮತಗಳಾಗುತ್ತವೆ. ಉಳಿದ 33 ಮತಗಳು ಮೂರನೇ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರಿಗೆ ಹಂಚಿಕೆಯಾಗುತ್ತದೆ. ಆಗ 12 ಮತಗಳ ಕೊರತೆ ಎದುರಾಗುತ್ತದೆ. ಇದರಿಂದಾಗಿ ಪಕ್ಷೇತರ ಸದಸ್ಯರ ಬೆಂಬಲ ಅನಿವಾರ್ಯವಾಗಿದೆ.

'ನನಗೆ ಗೊತ್ತಿಲ್ಲ ಅಂದ್ರು ಸಿಎಂ' : ಪಕ್ಷೇತರ ಶಾಸಕರು ಕಾಂಗ್ರೆಸ್ ನಾಯಕರ ಜೊತೆ ಮುಂಬೈಗೆ ಹೋಗಿದ್ದಾರೆ ಎಂಬ ಸುದ್ದಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಳ್ಳಿ ಹಾಕಿದ್ದಾರೆ. 'ಪಕ್ಷೇತರ ಶಾಸಕರು ಮುಂಬೈಗೆ ತೆರಳಿರುವ ಬಗ್ಗೆ ನನಗೇನು ಗೊತ್ತಿಲ್ಲ' ಎಂದು ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The original plan was to keep all the independent MLAs in Karnataka under surveillance. However the plan was later changed and the politicians of Karnataka resorted to what they know best- send the MLAs to a resort. Parked in the J W Marriott hotel in Juhu, Mumbai.
Please Wait while comments are loading...