ಪ್ರಹ್ಲಾದ್ ಜೋಶಿ ಜೊತೆಗಿನ ರಹಸ್ಯ ಸಭೆ ಕುರಿತು ಸತ್ಯ ಬಿಚ್ಚಿಟ್ಟ ಜನಾರ್ದನ ರೆಡ್ಡಿ

ಹುಬ್ಬಳ್ಳಿ, ಫೆಬ್ರವರಿ 21: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಿಗಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಹೈಕಮಾಂಡ್‌ ಮುಂದೆ ತಮ್ಮ ಬೇಡಿಕೆ ಇಟ್ಟಿದ್ದಾರೆ. ಇತ್ತ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ ವೈ ವಿಜಯೇಂದ್ರ ಅವರು ನಾನೇ ರಾಜ್ಯಾಧ್ಯಕ್ಷನಾಗಿ ಮುಂದುವರೆಯುತ್ತೇನೆ ಎಂದು ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಜನಾರ್ದನ ರೆಡ್ಡಿ ಅವರು ಭೇಟಿ ಮಾಡಿ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ.

ಈ ಕುರಿತು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಮಾತನಾಡಿ, ಇದು ವೈಯಕ್ತಿಕ ಭೇಟಿ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ಮಾರ್ಚ್ ತಿಂಗಳಲ್ಲಿ ನನ್ನ ಮೊಮ್ಮಗನ‌ ನಾಮಕರಣ ಇದ್ದುಹೀಗಾಗಿ ಜೋಶಿ ಅವರಿಗೆ ಆಹ್ವಾನ ನೀಡಲು ಬಂದಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ , ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಆಗಿಲ್ಲ. ಏನೇ ಬೆಳವಣಿಗೆ ಇದ್ದರೂ ಹೈಕಮಾಂಡ್ ನೋಡಿಕೊಳ್ಳುತ್ತದೆ. ನಾನು ಹೈಕಮಾಂಡ್ ನಿರ್ಧಾರಕ್ಕೆ ಬಂದ ಎಂದು ಹೇಳಿದರು.

MLA Janardhan Reddy meets Prahlad Joshi

ಇನ್ನೂ ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾತಮಾಡಿ, ಮುಡಾ ಹಗರಣ ಹೋರಾಟದ ರಾಜ್ಯಾಧ್ಯಕ್ಷ ವಿಜಯೇಂದ್ರ, ಆರ್ ಅಶೋಕ್ ,ಛಲವಾದಿ ನಾರಾಯಣಸ್ವಾಮಿ ಚರ್ಚೆ ಮಾಡುತ್ತಾರೆ. ಅಗತ್ಯ ಇದ್ದರೆ, ನಾವು ಸಭೆ ಮಾಡಿ ಮುಂದಿನ ಹೋರಾಟ ರೂಪುರೇಷೆ ರೂಪಿಸುತ್ತವೆ. ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್ ಪಾರ್ಟಿ ಆಗಿದ್ದು, ಅಮೆರಿಕ ಅಧ್ಯಕ್ಷ ಟ್ರಂಪ್ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ಚೈನಾ ಅಂಬಾಸಿಡರ್ ರನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದರು.

ಕಾಂಗ್ರೆಸ್ ಪಾರ್ಟಿ ಭ್ರಷ್ಟಾಚಾರದ ಮೂಲಕ ಬೇರೆ ದೇಶದ ಜೊತೆಗೆ ಕೈ ಜೋಡಿಸಿ ದೇಶದ ಪ್ರಜಾಪ್ರಭುತ್ವ ಬುಡ ಅಲಾಡಿಸುತ್ತಿದ್ದು, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ನೈತಿಕ ಇಲ್ಲ. ಬಿಜೆಪಿ ಸೋಲಿಸು ಈ ರೀತಿಯಲ್ಲಿ ಷಡ್ಯಂತರವನ್ನು ಕಾಂಗ್ರೆಸ್ ಮಾಡಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನಾ ಮಾಡಲು ಹಕ್ಕಿಲ್ವಾ ಎಂದ ಅವರು, ಪ್ರಜಾಪ್ರಭುತ್ವ ಬಗ್ಗೆ ಕಾಂಗ್ರೆಸ್ ನಾಯಕರು ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಮಾನಸಿಕತೆ. ನಾವು ಹೋರಾಟ ಮಾಡೇ ಮಾಡುತ್ತದೆ ಎಂದರು.

ಇನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಜಯೇಂದ್ರ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಷ್ಟ್ರೀಯ ಅಧ್ಯಕ್ಷರು ಅದರ ಬಗ್ಗೆ ಮಾತನಾಡುತ್ತಾರೆ. ಜನಾರ್ದನ ರೆಡ್ಡಿ ಸಹ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎನ್ನುವುದು ನನಗೆ ಗೊತ್ತಿಲ್ಲ ಅವರನ್ನೆ ಕೇಳಿ. ರಾಜ್ಯಾಧ್ಯಕ್ಷರು ಆಯ್ಕೆ ಆದ ಕೋರ್ ಕಮಿಟಿ ಆಗುತ್ತದೆ ಎಂದರು. ಭ್ರಷ್ಟರು, ನೀಚರು, ಇವರೇ ಕಾಂಗ್ರೆಸ್ ನಲ್ಲಿದ್ದು ನಿತಿನ್ ಗಡ್ಕರಿ ಪ್ರಧಾನಿ ಆಗಬೇಕೆಂದ ಲಾಡ್ ಹೇಳಿಕೆ ಬಾಲಿಶ, ಚೈಲ್ಡಿಸ್ ಹೇಳಿಕೆ ಎಂದು ತಿಳಿಸಿದರು.

ಹರಿಯಾಣದಲ್ಲಿ ನಾವೇ ಗೆಲ್ಲತ್ತಿವಿ ಅಂತ ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಸೂಟು ಬೂಟ್ ತೆಗೆದುಕೊಂಡಿದ್ದರು, ಆಮೇಲೆ ಏನಾಯಿತು ಕಾಂಗ್ರೆಸ್ ಡಮ್ ಅಂತು. ನಕಲಿ ಗಾಂಧಿ ಕುಟುಂಬ ಯಾವತ್ತೂ ಲೀಡರ್ ಸ್ಥಾನ ಬಿಟ್ಟು ಕೊಡಲ್ಲ, ಹಾಳಾದ ಊರಿಗೆ ಉಳಿದವನ್ನೇ ಗೌಡ ಎನ್ನುವುದು ಕಾಂಗ್ರೆಸ್ ನಾಯಕರ ಮನಸ್ಥಿತಿ ಆಗಿದೆ. ಮೋದಿ‌ ವಿರುದ್ಧ ಮಾತನಾಡಿದ್ರೆ ಸಂತೋಷ ಲಾಡ್ ಮಂತ್ರಿ ಸ್ಥಾನ ಉಳಿಯುತ್ತೆ ಎಂದ್ರೆ ಉಳಿಸಿಕೊಳ್ಳಲಿ. ಇನ್ನು ಲಾಡ್ ರಾಹುಲ್ ಗಾಂಧಿ ತರ ಮಾತನಾಡೋದು ನಿಲ್ಲಿಸಿ‌, ನೀವು ಚುನಾವಣೆ ಬಳಿಕ ಜಿರೋ ಆಗುತ್ತಿದ್ದಿರಿ ಲಾಡ್ ಅವರೇ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+