ಕೇಂದ್ರ ಕೊಡುವ 5 ಕೆಜಿ ಅಕ್ಕಿಯಲ್ಲೂ 2 ಕೆಜಿಗೆ ಕತ್ತರಿ ಹಾಕ್ತಿದ್ದೀರಲ್ಲ ಏಕೆ?: ವಿಜಯೇಂದ್ರ

ಬೆಂಗಳೂರು, ಅಕ್ಟೋಬರ್‌ 30: ಮೋದಿ ಜೀ ಅವರ ಸರ್ಕಾರ ಕೊಡ ಮಾಡುತ್ತಿರುವ ಉಚಿತ 5 ಕೆಜಿ ಅಕ್ಕಿ ಹಾಗೂ ನೀವೇ ಘೋಷಿಸಿದ ಅನ್ನ ಭಾಗ್ಯದ 10 ಕೆಜಿ ಸೇರಿಸಿ ಒಟ್ಟು 15 ಕೆಜಿ ಅಕ್ಕಿ ನೀಡಬೇಕಾಗಿತ್ತಲ್ಲವೇ? ನಮ್ಮ ಪ್ರಶ್ನೆಗೆ ಉತ್ತರಿಸಿ ಲೆಕ್ಕಕೊಡಿ ಎಂದು ಶಾಸಕ ಬಿ ವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸುವ ಸಿದ್ದರಾಮಯ್ಯ ನವರೇ, ಬಿಟ್ಟಿ ಭಾಗ್ಯಗಳನ್ನೂ ಸರಿಯಾಗಿ ಕೊಡಲಾಗದ, ಅಭಿವೃದ್ಧಿ ಕಡೆ ಒಂದೇ ಒಂದು ಹಜ್ಜೆಯನ್ನೂ ಇಡಲಾಗದ ನಿಮ್ಮದು ನುಡಿದಂತೆ ನಡೆಯುವ ಸರಕಾರ ಹೇಗಾಗುತ್ತದೆ? ಎಂದು ಪ್ರಶ್ನಿಸಿದ್ದಾರೆ. ಮೋದಿ ಜೀ ಅವರ ಸರ್ಕಾರ ಕೊಡಮಾಡುತ್ತಿರುವ ಉಚಿತ 5 ಕೆಜಿ ಅಕ್ಕಿ ಹಾಗೂ ನೀವೇ ಘೋಷಿಸಿದ ಅನ್ನ ಭಾಗ್ಯದ 10 ಕೆಜಿ ಸೇರಿಸಿ ಒಟ್ಟು 15 ಕೆಜಿ ಅಕ್ಕಿ ನೀಡಬೇಕಾಗಿತ್ತಲ್ಲವೇ? 10 ಕೆಜಿ ಬದಲು 5 ಕೆಜಿ ಅಕ್ಕಿಯನ್ನಾದರೂ ನೀಡುತ್ತಿದ್ದೀರಾ? ಅಕ್ಕಿ ಬದಲು ಹಣ ಎಂದಿರಿ! ಈಗ ಹಣವೂ ಇಲ್ಲ ಅಕ್ಕಿಯೂ ಇಲ್ಲ ಎಂಬಂತಾಗಿದೆ ಏಕೆ? ಎಂದು ಪ್ರಶ್ನಿಸಿದ್ದಾರೆ.

MLA BY Vijayendra Fierce Attack Against siddaramaiah

ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಏನು?

ಬೆಂಗಳೂರು ನಗರದ ಜನರಿಗೆ ಸುಗಮ ಸಂಚಾರ ಸೌಲಭ್ಯ ಕಲ್ಪಿಸುವ ಸಬ್ ಅರ್ಬನ್ ರೈಲು ಯೋಜನೆಯು ಕೇಂದ್ರ ಸರ್ಕಾರದ ಅನುದಾನವಿಲ್ಲದೆ ಇನ್ನೂ ಕನ್ನಡಿಗರ ಕನಸಾಗಿಯೇ ಉಳಿದಿದೆ.
ಪ್ರಧಾನಿ ನರೇಂದ್ರ ಮೋದಿ ಅವರೇ, ಯಾಕೆ ಕನ್ನಡಿಗರಿಗೆ ಭರವಸೆ ನೀಡಿ ಈ ರೀತಿ ಪದೇ ಪದೇ ವಂಚಿಸುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ ಆರೂವರೆ ಕೋಟಿ ಜನರ ಪ್ರಶ್ನೆ ಎಂದು ಹೇಳಿದ್ದಾರೆ.

ಶ್ರಮಜೀವಿ ಕನ್ನಡಿಗರು ಕೇಂದ್ರಕ್ಕೆ 1 ರೂಪಾಯಿ ತೆರಿಗೆ ಪಾವತಿಸಿದರೆ ಮರಳಿ ನಮ್ಮ ಕೈಸೇರುವುದು 15 ಪೈಸೆ ಮಾತ್ರ. ಪ್ರಧಾನಿ ನರೇಂದ್ರ ಮೋದಿ ಅವರೇ, ಬರ, ನೆರೆ ಬಂದರೂ ಸೂಕ್ತ ನೆರವು ಸಿಗಲಿಲ್ಲ, ಕೊರೊನಾ ಕಾಲದಲ್ಲೂ ನೀವು ಕನ್ನಡಿಗರ ಕೈ ಹಿಡಿಯಲಿಲ್ಲ, 25 ಬಿಜೆಪಿ ಸಂಸದರನ್ನು ಗೆಲ್ಲಿಸಿದ ಕರುನಾಡಿಗೆ ಈ ದ್ರೋಹ ನ್ಯಾಯವೇ? ಎಂದು ಪ್ರಶ್ನಿಸಿದ್ದಾರೆ.

MLA BY Vijayendra Fierce Attack Against siddaramaiah

ಬಹುಕಾಲದ ಬೇಡಿಕೆಯಾದ ಏಮ್ಸ್ ಸಂಸ್ಥೆ, ಸಬ್ ಅರ್ಬನ್ ರೈಲು ಈಗಲೂ ಕನ್ನಡಿಗರಿಗೆ ಕನಸಾಗಿಯೇ ಉಳಿದಿದೆ, ಕನ್ನಡಿಗರು ಶ್ರಮವಹಿಸಿ ಕಟ್ಟಿದ ಬ್ಯಾಂಕುಗಳು ವಿಲೀನದ ಹೆಸರಲ್ಲಿ ನಮ್ಮವರ ಪಾಲಿಗೆ ಇಲ್ಲವಾಗಿವೆ. ಕರುನಾಡಿಗೆ ಇದೆಂತಹ ಅನ್ಯಾಯ ಪ್ರಧಾನಿ ನರೇಂದ್ರ ಮೋದಿ ಅವರೇ ಎಂದು ಟ್ವೀಟ್‌ ಮಾಡಿದ್ದಾರೆ.

ದಶಕಗಳ ಕಾಲ ಕನ್ನಡಿಗರು ಬೆವರು ಹರಿಸಿ ಕಟ್ಟಿದ ವಿಜಯಾ ಬ್ಯಾಂಕ್‌, ಕಾರ್ಪೊರೇಷನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹಾಗೂ ಸಿಂಡಿಕೇಟ್ ಬ್ಯಾಂಕ್ ಗಳನ್ನು ವಿಲೀನದ ಹೆಸರಿನಲ್ಲಿ ಆಪೋಶನ ತೆಗೆದುಕೊಂಡಿದ್ದು ನೀವೇ ಅಲ್ಲವೇ ನರೇಂದ್ರ ಮೋದಿ ಅವರೇ? ಮೊದಲು ಈ ಬ್ಯಾಂಕುಗಳಲ್ಲಿ ವ್ಯವಹರಿಸುವಾಗ ನಮ್ಮವರು ಕಟ್ಟಿದ ಸಂಸ್ಥೆ ಎಂಬ ಹೆಮ್ಮೆ ಕನ್ನಡಿಗರಿಗಿತ್ತು, ಈಗ ಅವು ಕರುನಾಡೊಂದಿಗಿನ ಸಂಬಂಧ ಕಡಿದುಕೊಂಡು ಸಂಪೂರ್ಣ ಬದಲಾಗಿವೆ. ನಮ್ಮವರಿಗೆ ಮಾತ್ರ ಯಾಕೆ ಈ ಅನ್ಯಾಯ? ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+