ಉತ್ತರ ಕರ್ನಾಟಕ ಪತ್ಯೇಕ ರಾಜ್ಯ, ಇದು ಕತ್ತಿ ಬೇಡಿಕೆಯಲ್ಲ!

ವಿಜಯಪುರ, ಏ.8 : ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿ ಎಂಬ ಕೂಗು ಮತ್ತೆ ಕೇಳಿ ಬಂದಿದೆ. ಆದರೆ, ಈ ಬೇಡಿಕೆ ಮುಂದಿಟ್ಟಿರುವುದು ಬಿಜೆಪಿ ನಾಯಕ ಉಮೇಶ್ ಕತ್ತಿಯಲ್ಲ. ದೇವರಹಿಪ್ಪರಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎ.ಎಸ್.ಪಾಟೀಲ.

ವಿಜಯಪುರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಎ.ಎಸ್.ಪಾಟೀಲ ಅವರು, ಉತ್ತರ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿವೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸಿವೆ ಎಂದು ಆರೋಪಿಸಿದರು. [ಮತ್ತೆ ಕರ್ನಾಟಕ ಒಡೆಯುವ ಮಾತನಾಡಿದ ಕತ್ತಿ]

A.S. Patil

ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಸರ್ಕಾರ ಆಸಕ್ತಿ ತೋರುತ್ತಿಲ್ಲ ಎಂದು ದೂರಿದ ಶಾಸಕರು, ತಮ್ಮ ಪಕ್ಷದವರೇ ಆದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.[ಪ್ರತ್ಯೇಕ ರಾಜ್ಯದ 'ಕತ್ತಿ'ವರಸೆಗೆ ನಾಯಕರ ವಿರೋಧ]

ಸಾಹಿತಿಗಳೊಂದಿಗೆ ಚರ್ಚೆ : 'ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿ' ಎಂಬ ವಿಚಾರದ ಕುರಿತು ಸಾಹಿತಿಗಳು, ಚಿಂತಕರು ಮುಂತಾದವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಎ.ಎಸ್.ಪಾಟೀಲ ಅವರು ಹೇಳಿದರು. [ಎರಡನೇ ರಾಜಧಾನಿ ಸ್ಥಾಪನೆ ವಿಚಾರ ಅಪ್ರಸ್ತುತ]

ಸರ್ಕಾರದ ಟೀಕೆ : ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ತಮ್ಮ ಪಕ್ಷದ ಸರ್ಕಾರವನ್ನೇ ಟೀಕಿಸಿದ ಶಾಸಕ ಎ.ಎಸ್.ಪಾಟೀಲ ಅವರು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ನೀರಾವರಿಗಾಗಿ ವಾರ್ಷಿಕ ಶೇ 18 ರಷ್ಟು ಅನುದಾನ ಮೀಸಲಾಗಿಟ್ಟಿದ್ದರು. ಆದರೆ, ಸದ್ಯ ಸರ್ಕಾರ ಶೇ 16 ರಷ್ಟು ಅನುದಾನ ನೀಡುತ್ತಿದೆ ಎಂದು ಆರೋಪಿಸಿದರು.

ಕತ್ತಿ ಬೇಡಿಕೆ ಇಟ್ಟಿದ್ದರು : ಇಷ್ಟು ದಿನ ಮಾಜಿ ಸಚಿವ ಉಮೇಶ್ ಕತ್ತಿ ಕರ್ನಾಟಕವನ್ನು ಒಡೆಯುವ ಮಾತನಾಡುತ್ತಿದ್ದರು. ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಸರ್ಕಾರ ನಿರ್ಲಕ್ಷಿಸಿದೆ. ಆದ್ದರಿಂದ ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+