ಎಚ್.ಎನ್.ವ್ಯಾಲಿ ಯೋಜನೆ ಚಿಕ್ಕಬಳ್ಳಾಪುರ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Posted By:
Subscribe to Oneindia Kannada

ಚಿಕ್ಕಬಳ್ಳಾಪುರ, ಡಿಸೆಂಬರ್ 20: ಎಚ್.ಎನ್.ವ್ಯಾಲಿ ಯೋಜನೆ ವಿರೋಧಿಸಿ ಕರೆ ನೀಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆಟೋ, ಬಸ್ ಗಳ ಸಂಚಾರದಲ್ಲಿ ಹೆಚ್ಚಿನ ವ್ಯತ್ಯಯ ಆಗಿಲ್ಲ, ಅಂಗಡಿಮುಂಗಟ್ಟುಗಳು ಬಹುತೇಕ ತೆರೆದಿವೆ, ಕೆಲವು ಖಾಸಗಿ ಶಾಲೆಗಳು ಎಂದಿನಂತೆ ಕೆಲಸ ಮಾಡುತ್ತಿವೆ.

ಚಿಕ್ಕಬಳ್ಳಾಪುರ ಬಂದ್: ಲಘು ಲಾಠಿ ಪ್ರಹಾರ, ಉದ್ವಿಘ್ನ ಪರಿಸ್ಥಿತಿ

ಪ್ರತಿಭಟನಾಕಾರರು ಚಿಕ್ಕಬಳ್ಳಾಪುರ ವೃತ್ತ, ಬಸ್ ನಿಲ್ದಾಣಗಳಲ್ಲಿ ಮೆರವಣಿಗೆ ಮಾಡಿ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಸಾರ್ವಜನಿಕರಿಗೆ ಯೋಜನೆ ಬಗ್ಗೆ ತಿಳಿಹೇಳಿ ಬಂದ್ ಗೆ ಬೆಂಬಲ ನೀಡದಂತೆ ತಡೆಯಲು ಕಾಂಗ್ರೆಸ್ ಕಾರ್ಯಕರ್ತರಿಗೆ ಶಾಸಕರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಎಚ್.ಎನ್.ವ್ಯಾಲಿಯ ಯೋಜನೆ ಬಗ್ಗೆ ಪರ-ವಿರೋಧ ಚರ್ಚೆಗಳು ಚಿಲ್ಲೆಯಾದ್ಯಂತ ಹುಟ್ಟಿದ್ದು, ಬಿಜೆಪಿ ಮತ್ತು ಜೆಡಿಎಸ್ ಈ ಯೋಜನೆಯನ್ನು ವಿರೋಧಿಸುತ್ತಿದೆ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಯೋಜನೆಯ ಪರವಾಗಿದ್ದಾರೆ.

ನಿಲ್ಲದ ಪ್ರತಿಭಟನೆ

ನಿಲ್ಲದ ಪ್ರತಿಭಟನೆ

ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಬಂದ್ ನಿರಾಶಾದಾಯಕವಾಗಿದ್ದರೂ ಶಿಡ್ಲಘಟ್ಟದಲ್ಲಿ ಕಾವೇರಿದ ಪ್ರತಿಭಟನೆ ನಡೆಯುತ್ತಿದೆ. ಎಚ್.ಎನ್.ವ್ಯಾಲಿ ಯೋಜನೆ ವಿರೋಧಿಸಿ ಪ್ರತಿಭಟನಾಕಾರರು ಕೊಳಚೆ ನೀರು ತುಂಬಿದ ಬಾಟಲಿಗಳನ್ನು ರಸ್ತೆ ಮಧ್ಯೆ ಇಟ್ಟು ಪ್ರತಿಭಟನೆ ಮಾಡಿದ್ದಾರೆ.
ಇಲ್ಲಿನ ಬಸ್ ನಿಲ್ದಾಣದ ಬಳಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಜೆಡಿಎಸ್, ಬಿಜೆಪಿ ಪ್ರಾಯೋಜಿತ ಬಂದ್

ಜೆಡಿಎಸ್, ಬಿಜೆಪಿ ಪ್ರಾಯೋಜಿತ ಬಂದ್

ಎಚ್.ಎನ್.ವ್ಯಾಲಿ ವಿರೋಧಿಸಿ ನಡೆಯುತ್ತಿರುವ ಬಂದ್ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಪ್ರಾಯೋಜಿತ ಬಂದ್ ಅಷ್ಟೆ ಇದಕ್ಕೆ ಸಾರ್ವಜನಿಕರು ಬೆಂಬಲ ಕೊಡಬಾರದು ಎಂದು ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹೇಳಿದ್ದಾರೆ. ಎಚ್.ಎನ್.ವ್ಯಾಲಿ ಯೋಜನೆ ಉತ್ತಮ ಯೋಜನೆಯಾಗಿದ್ದು, ಇದರಿಂದ ಜಿಲ್ಲೆಯ ಬಹುತೇಕ ಕೆರೆಗಳು ತುಂಬಲಿದ್ದು, ಅಂತರ್ಜಲಮಟ್ಟ ಹೆಚ್ಚುವ ಜೊತೆಗೆ ಬರ ನಿವಾರಣೆ ಆಗಲಿದೆ ಎಂದಿದ್ದಾರೆ.

900 ಕೋಟಿ ವೆಚ್ಚದ ಯೋಜನೆ

900 ಕೋಟಿ ವೆಚ್ಚದ ಯೋಜನೆ

ಹೆಬ್ಬಾಳ-ನಾಗವಾರ (ಎಚ್.ಎನ್ ವ್ಯಾಲಿ) ಕೆರೆಗಳ ಕೊಳಚೆ ನೀರನ್ನು ಎರಡು ಹಂತದಲ್ಲಿ ಶುದ್ಧೀಕರಿಸಿ ಪೈಪ್ ಲೈನ್ ಮೂಲಕ ಚಿಕ್ಕಬಳ್ಳಾಪುರದ 64 ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ. 900 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಟಾನವಾಗಲಿದೆ.

ಶುದ್ಧತೆ ಬಗ್ಗೆ ಅನುಮಾನ

ಶುದ್ಧತೆ ಬಗ್ಗೆ ಅನುಮಾನ

ಮೂರು ಹಂತಗಳಲ್ಲಿ ಶುದ್ಧೀಕರಣಕ್ಕೆ ಒಳಗಾಗದ ನೀರಿನಿಂದ ಅಪಾಯವಿದೆ ಎಂದು "ಭಾರತೀಯ ವಿಜ್ಞಾನ ಸಂಸ್ಥೆ' ವರದಿ ನೀಡಿರುವ ಕಾರಣ ನಾಗರೀಕರು ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಅಂತರ್ಜಲ ಇಂಗಿ ಕಲುಷಿತವಾದ ನೀರು ಕುಡಿದು, ಕೃಷಿಗೂ ಬಳಸುತ್ತಿರುವ ಚಿಕ್ಕಬಳ್ಳಾಪುರ ಜನತೆ ಹೊಸ ಯೋಜನೆಯಲ್ಲಿ ದೊರಕಲಿರುವ ನೀರಿನ ಶುದ್ಧತೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಎತ್ತಿನ ಹೊಳೆಯಂತೆ ಇದೂ ಹಳ್ಳ ಹಿಡಿಯಲಿದೆ

ಎತ್ತಿನ ಹೊಳೆಯಂತೆ ಇದೂ ಹಳ್ಳ ಹಿಡಿಯಲಿದೆ

ಕಳೆದ ಚುನಾವಣೆ ಸಂದರ್ಭದಲ್ಲಿ ಇದೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಸದ ವೀರಪ್ಪ ಮೋಯ್ಲಿ ಅವರು ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಿ 5 ವರ್ಷಗಳೊಳಗೆ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಮಲೆನಾಡು ಮಾಡುವುದಾಗಿ ಹೇಳಿದ್ದರು, ಆದರೆ ಚುನಾವಣೆಯಲ್ಲಿ ಗೆದ್ದ ನಂತರ ಆ ಬಗ್ಗೆ ಮಾತೇ ಇಲ್ಲ. ಈಗ ಮತ್ತೆ ಚುನಾವಣೆ ಹತ್ತಿರ ಬಂದಿರುವ ಕಾರಣ ಕಾಂಗ್ರೆಸ್ ಶಾಸಕರಿಗೆ ಚಿಕ್ಕಬಳ್ಳಾಪುರದ ನೀರಿನ ಸಮಸ್ಯೆ ಕಾಣಿಸಿದೆ ಹಾಗಾಗಿ ಅವರು ಎಚ್.ಎನ್.ವ್ಯಾಲಿ ಯೋಜನೆ ಎಂಬ ಬಲೂನು ಹಾರಿಬಿಡುತ್ತಿದ್ದಾರೆ ಎಂಬುದು ವಿರೋಧ ಪಕ್ಷಗಳ ಮುಖಂಡರ ದೂರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chickaballapura bandh gets mixed response. Jds and BJP called for bandh in oppose of H.N.Vally programe. govt planing to bring Hebbala-Nagavara lake's purified water to C.B.pura lakes for agriculture purpose. Jds, BJP saying that this progaram will bring contaminated water to district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ