ಸಚಿವ ಸಂಪುಟ ಪುನಾರಚನೆ: ಸಚಿವರ ಕೆಲಸದ ರಿಪೋರ್ಟ್ ಕಾಂಗ್ರೆಸ್ ಹೈಕಮಾಂಡ್‌ಗೆ
ರಾಜ್ಯದಲ್ಲಿ ಮೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸುತ್ತಿದ್ದಂತೆಯೇ ಇದೀಗ ರಾಜ್ಯ ಸಚಿವ ಸಂಪುಟ ಸಭೆಯ ಪುನರ್‌ರಚನೆ ಅಥವಾ ಬದಲಾವಣೆಯ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಅಲ್ಲದೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲಿನ ಐದು ವರ್ಷಗಳ ಕಾಲದ ಭ್ರಷ್ಟಾಚಾರದ ವಿಚಾರಣೆ ವಿಷಯವೂ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಯಾವ ಕಾರಣಕ್ಕೆ ಹೋಗಿದ್ದಾರೆ ಎಂದು ಹಾಗೂ ಯಾವ ಶಾಸಕರ ಕಾರ್ಯವೈಖರಿ ಹೇಗಿದೆ ಎನ್ನುವುದನ್ನು ಕಾಂಗ್ರೆಸ್ ಹೈಕಮಾಂಡ್ ಕೇಳಿದೆ ಎನ್ನುವ ಸುಳಿವನ್ನು ಕಾನೂನು ಸಚಿವ ಎಚ್ ಕೆ.ಪಾಟೀಲ್ ಅವರು ಬಿಟ್ಟುಕೊಟ್ಟಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ದೆಹಲಿ ಪ್ರವಾಸ ಹೋಗಿರುವ ಬಗ್ಗೆ ಎಚ್ ಕೆ.ಪಾಟೀಲ್ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯಾ ಅವರು ಸಚಿವ ಸಂಪುಟದ ಪುನರ್ ರಚನೆಗಾಗಿ ಸಿದ್ಧವಾಗಿಯೇ ಹಾಲಿ ಸಚಿವರುಗಳ ಕಾರ್ಯವೈಖರಿ (ಫರ್ಮಾಮೆನ್ಸ್ ರಿಪೋರ್ಟ್) ಬಗ್ಗೆ ಕೇಳಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದ ಸಚಿವರ ಕೆಲಸದ ರೀತಿಗೆ ಸಂಬಂಧಿಸಿದ ವರದಿಯನ್ನು ತೆಗೆದುಕೊಂಡು ದೆಹಲಿ ಪ್ರವಾಸ ಕೈಗೊಳ್ಳಲಾಗಿದೆ. ಹೈಕಮಾಂಡ್ ಈಗಾಗಲೇ ಸಚಿವರ ಕೆಲಸದ ಬಗ್ಗೆ ರಿಪೋರ್ಟ್ ಕೇಳಿದೆ. ಆದರೆ, ಯಾವ ಮಂತ್ರಿಗಳು ನಿಮ್ಮ ನಿಮ್ಮ ಇಲಾಖೆಯಲ್ಲಿ ಏನೇನು ಫರ್ಮಾಮೆನ್ಸ್ ಅಂತ ಮಾಹಿತಿ ಕೇಳಿದ್ದು ಇದು ಫರ್ಮಾಮೆನ್ಸ್ ಪರಿಶೀಲನೆ ಮಾಡೋದು. ನಮ್ಮ ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ನಡೆದುಕೊಂಡ ಬಂದ ಪದ್ಧತಿ ಆಗಿದೆ. ನಮ್ಮ ಪಕ್ಷ ಹೈಕಮಾಂಡ್ ಎಲ್ಲಾ ಮಂತ್ರಿಗಳ ಫರ್ಮಾಮೆನ್ಸ್ ಪರಿಶೀಲನೆ ಮಾಡುತ್ತಿರುತ್ತದೆ ಎಂದರು.
ಮುಖ್ಯ ಮಂತ್ರಿ ಬದಲಾವಣೆ ಮಾಧ್ಯಮಗಳ ಸೃಷ್ಟಿ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿ.ಎಂ ಬದಲಾವಣೆ ಚರ್ಚೆಯ ವಿಷಯವೇ ಅಲ್ಲ ಅನವಶ್ಯಕ ಚರ್ಚೆ. ಮುಖ್ಯಮಂತ್ರಿ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲಾ ಕಾಂಗ್ರೆಸ್ ನಾಯಕರೂ ಸ್ಪಷ್ಟನೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರು ಸಹ ಮಾತನಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ನ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಚರ್ಚೆ ಮಾಡಬೇಕಾದ ವಿಷಯವೇ ಅಲ್ಲ ಎಂದು ಹೇಳಿದರು.

ಬಿ.ಎಸ್ ಯಡಿಯೂರಪ್ಪ ವಿರುದ್ಧ ತನಿಖೆಗೆ ಸಿದ್ಧ
ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ತನಿಖೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಿದ್ಧವಿರುವುದಾಗಿ ಅವರು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲಿನ ಐದು ವರ್ಷಗಳ ಕಾಲದ ಭ್ರಷ್ಟಾಚಾರ ಕುರಿತು ತನಿಖೆಗೆ ಸರ್ಕಾರ ಬದ್ಧವಾಗಿದೆ. ಕೆಲವು ತಿಂಗಳು ಮೊದಲು ಸಾಮಾಜಿಕ ಕಾರ್ಯಕರ್ತ ಅಬ್ರಾಹಂ ರಾಜ್ಯಪಾಲರಿಗೆ ಯಡಿಯೂರಪ್ಪ ವಿರುದ್ಧ ತನಿಖೆಗೆ ಒತ್ತಾಯ ಮಾಡಿದ್ದರು. ಆಗ ರಾಜ್ಯಪಾಲರು ಅಬ್ರಹಾಂ ಮನವಿ ತಿರಸ್ಕಾರ ಮಾಡಿದ್ದರು. ಆದರೆ, ಇದು ಸರಿಯಾದ ಕ್ರಮವಲ್ಲ. ಮರು ತನಿಖೆಗೆ ಸರ್ಕಾರ ನಿರ್ಧಾರ ಮಾಡಿದೆ . ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲಿನ ಭ್ರಷ್ಟಾಚಾರ ತನಿಖೆ ಆಗಬೇಕು ರಾಜ್ಯಪಾಲರ ಅನುಮತಿ ಸಹ ಕೇಳಲಾಗಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications