• search

ಸರ್ಕಾರಿ ಕಾರು ಬಳಕೆ ನಿಲ್ಲಿಸಿದ ರಮೇಶ್ ಜಾರಕಿಹೊಳಿ!

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ರಮೇಶ್ ಜಾರಕಿಹೊಳಿ ಸರ್ಕಾರಾನ್ ಕಾರು ಬಳಕೆ ಮಾಡೋದು ನಿಲ್ಲಿಸಿದ್ಯಾಕೆ? | Oneindia Kannada

    ಬೆಂಗಳೂರು, ಸೆಪ್ಟೆಂಬರ್ 16 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರಿ ಕಾರು ಬಳಸದೇ ಖಾಸಗಿ ಕಾರಿನಲ್ಲಿ ಸಂಚಾರ ನಡೆಸುವುದು ಎಲ್ಲಿರಿಗೂ ತಿಳಿದಿದೆ. ಈಗ ಸಚಿವ ರಮೇಶ್ ಜಾರಕಿಹೊಳಿ ಸರ್ಕಾರಿ ಕಾರು ಬಳಕೆ ನಿಲ್ಲಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

    ಹೌದು, ಸೆಪ್ಟೆಂಬರ್ 7ರಂದು ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಬಣಕ್ಕೆ ಜಯಸಿಕ್ಕಿದ್ದು, ಜಾರಕಿಹೊಳಿ ಸಹೋದರರಿಗೆ ಹಿನ್ನಡೆ ಆಯಿತು. ಅಂದಿನಿಂದ ರಮೇಶ್ ಜಾರಕಿಹೊಳಿ ಸರ್ಕಾರಿ ಕಾರು ಬಳಕೆ ನಿಲ್ಲಿಸಿದ್ದಾರೆ.

    ಜಾರಕಿಹೊಳಿ ಸಹೋದರರು ಬಿಜೆಪಿ ಸೇರಿದರೆ ಆಗುವ 5 ಲಾಭಗಳು!

    ರಮೇಶ್ ಜಾರಕಿಹೊಳಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಪೌರಾಡಳಿತ ಸಚಿವರು. ಸರ್ಕಾರಿಂದ ಅವರಿಗೆ ಇನ್ನೋವಾ ಕಾರು ನೀಡಲಾಗಿದೆ. ಆದರೆ, ರಮೇಶ್ ಜಾರಕಿಹೊಳಿ ಅವರು ಸೆ.7ರಿಂದ ಸರ್ಕಾರಿ ಕಾರನ್ನು ಬಳಕೆ ಮಾಡುತ್ತಿಲ್ಲ.

    Minister Ramesh Jarkiholi not using govt vehicle

    ತಮ್ಮ ಖಾಸಗಿ ರೇಂಜ್ ರೋವರ್ ಕಾರಿನಲ್ಲಿ ರಮೇಶ್ ಜಾರಕಿಹೊಳಿ ಸಂಚಾರ ನಡೆಸುತ್ತಿದ್ದಾರೆ. ಶನಿವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಬರಮಾಡಿಕೊಳ್ಳಲು ಅವರು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಖಾಸಗಿ ಕಾರಿನಲ್ಲಿ ಬಂದಿದ್ದರು.

    ಉದ್ಯಮ, ರಾಜಕೀಯ : ಜಾರಕಿಹೊಳಿ ಸಹೋದರರ ಪ್ರಭಾವವಿದು!

    ಶುಕ್ರವಾರ ಬೆಳಗಾವಿಯ ಸರ್ಕಿಟ್‌ ಹೌಸ್‌ಗೆ ಅವರು ರೇಂಜ್ ರೋವರ್ ಕಾರಿನಲ್ಲಿ ಬಂದಿದ್ದರು. ಬುಧವಾರ ಮತ್ತು ಗುರುವಾರ ಬೆಂಗಳೂರಿನಲ್ಲಿಯೂ ಸರ್ಕಾರಿ ಕಾರು ಬಿಟ್ಟು, ಆಡಿ ಮತ್ತು ಇತರ ಕಾರುಗಳಲ್ಲಿ ಸಂಚಾರ ನಡೆಸಿದ್ದರು.

    ಸರ್ಕಾರಿ ಕಾರು ಬೇಡವೆಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

    ಸಚಿವ ರಮೇಶ್ ಜಾರಕಿಹೊಳಿ ಅವರು ಇದ್ದಕ್ಕಿದ್ದಂತೆ ಸರ್ಕಾರಿ ಕಾರಿ ಬಳಕೆ ನಿಲ್ಲಿಸಿದ ಬಗ್ಗೆ ಬೆಳಗಾವಿಯಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಅದರಲ್ಲೂ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಬಳಿಕ ಏಕೆ ಕಾರು ಬಳಸುತ್ತಿಲ್ಲ? ಎಂಬುದಕ್ಕೆ ಅವರೇ ಉತ್ತರ ನೀಡಬೇಕು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    After Belagavi PLD bank polls Minister for Municipality and Local Bodies Ramesh Jarkiholi not using government vehicle. Minister using his private Range Rover car.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more