Assembly Elections 2023; 100% ಅಮಿತ್ ಶಾ ಬೆಂಗಳೂರಿನಲ್ಲಿ ಮನೆ ಮಾಡುತ್ತಾರೆ: ಆರ್ ಅಶೋಕ್
ನಮ್ಮ ಕಾರ್ಯಕ್ರಮ ಜನರಿಗೆ ರೀಚ್ ಆಗೋ ಕಾರ್ಯಕ್ರಮ ಇರುತ್ತದೆ. ಬುರುಡೆ ಬಿಡುವುದು ಇರುವುದಿಲ್ಲ ಎಂದು ಆರ್ ಅಶೋಕ್ ಹೇಳಿದ್ದಾರೆ.
ಬಾಗಲಕೋಟೆ,ಫೆಬ್ರವರಿ25: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಸಾಲು ಸಾಲು ಗ್ಯಾರಂಟಿ ಘೋಷಣೆಯನ್ನ ಮಾಡುತ್ತಿದ್ದು, ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ದ ಕಿಡಿಕಾರುತ್ತಿದ್ದಾರೆ. ನಿನ್ನೆ(ಶುಕ್ರವಾರ) ಕಾಂಗ್ರೆಸ್ 3 ನೇ ಗ್ಯಾರಂಟಿ ಘೋಷಣೆ ಮಾಡಿದ ಕುರಿತು ಕಂದಾಯ ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಬಾಗಲಕೋಟೆಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಡಂಬಲ್ ಇಂಜಿನ್ ಸರ್ಕಾರ ಬರಬೇಕು ಎಂದು ಅಮಿತ್ ಶಾ ಹಾಗೂ ಧರ್ಮೇಂದ್ರ ಪ್ರದಾನ್ ಅವರು ರಾಜ್ಯಕ್ಕೆ ಬರ್ತಿದ್ದಾರೆ, ಹಾಗೇ ಬೆಂಗಳೂರಿನಲ್ಲಿ ಮನೆಯನ್ನ ಮಾಡುತ್ತಾರೆ. ನಮ್ಮ ನಾಯಕರು ಗೆಲ್ಲಿಸುವ ಸಲುವಾಗಿ ಬರುತ್ತಾರೆ ಹೊರೆತು ಭಾಷಣ ಮಾಡಿ ಹೋಗಲು ಅಲ್ಲ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.

ನಮ್ಮ ಕಾರ್ಯಕ್ರಮ ಜನರಿಗೆ ರೀಚ್ ಆಗೋ ಕಾರ್ಯಕ್ರಮ ಇರುತ್ತದೆ. ಬುರುಡೆ ಬಿಡುವುದು ಇರುವುದಿಲ್ಲ, ನಾವು ಬಂದು ಬುರುಡೆ ಬಿಟ್ಟು ಏನೋ ಮಾಡಿಬಿಡುತ್ತೇವೆ. ಎಲ್ಲ ಕೊಟ್ಟು ಬಿಡ್ತೀನಿ ನಮ್ಮನ್ನು ಗೆಲಿಸಿ, ಎಷ್ಟು ದುಡ್ಡು ಬೇಕೋ ಎಲ್ಲಾ ಕೊಡ್ತೀನಿ ಅಂತ ಹೇಳಿ ಹೋಗೋ ಕಾರ್ಯಕ್ರಮ ಅಲ್ಲ. ಈಗಾಗಲೇ ಸ್ಥಳದಲ್ಲೇ 18 ಸಾವಿರ ಫಲಾನುಭವಿಗಳಿಗೆ ಸಮಸ್ಯೆಯನ್ನು ಬಗೆ ಹರಿಸಿ, ಪರಿಹಾರ ಸಹ ನೀಡುತ್ತೇವೆ ಹೂರತು ನಾಳೆ ಬಾ ಎನ್ನುವುದಿಲ್ಲ. ಸ್ಥಳದಲ್ಲೇ ಕೊಡುವ ವ್ಯವಸ್ಥೆ ಮಾಡುದ್ದೇವೆ. ನಮ್ದು ಕೊಡೋದು ನಾಳೆ ಬಾ ಅನ್ನೋ ಸ್ಕೀಮ್ ಯಾವುದು ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ಗೆ ಟಾಂಗ್ ನೀಡಿದರು.
ನಾನು ಯಾರ ಹೆಸರು ಹೇಳಲ್ಲ, ಅವರು ಬಂದು ಏನೇನ್ ಹೇಳುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಪರೋಕ್ಷವಾಗಿ ಟಾಂಗ್ ನೀಡಿ,ಇದು ಸರ್ಕಾರಿ ಕಾರ್ಯಕ್ರಮ ಹೀಗಾಗಿ ಇಲ್ಲಿ ರಾಜಕೀಯ ಮಾತನಾಡಲ್ಲ. 50 ವರ್ಷ ದೇಶ ಆಳಿದಾರೆ ರಾಜ್ಯದಲ್ಲೂ 50 ವರ್ಷ ಆಳಿದ್ದಾರೆ. ನಿಮ್ಮ ಕೈಯಲ್ಲಿ ಅಧಿಕಾರ, ಹಣ, ಅಂತಸ್ತು, ಎಲ್ಲ ಇದ್ದಾಗ ಯಾಕೆ ಕೊಡಲಿಲ್ಲ. ಈಗ ಇನ್ನೊಮ್ಮೆ ಅಧಿಕಾರ ಕೊಡಿ ಅಂತ ಕೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಜನ ಪ್ರಜ್ಞಾವಂತರಿದ್ದಾರೆ. ನಮ್ಮದು ರಾಜಕೀಯ ಸಂಬಂಧ ಅಲ್ಲ.ನಮ್ಮದು ಸರ್ಕಾರಿ ಕಾರ್ಯಕ್ರಮ ಜನರಿಗೆ ರೀಚ್ ಆಗೋ ಕಾರ್ಯಕ್ರಮ ವಾಗಿದೆ. ನಾವು ಏನ್ ಹೇಳತ್ತಿವೋ ಅದನ್ನ ಮಾಡುತ್ತೇವೆ. ಕೆಲವರು ನಾಳೆ ಬಾ ಅಂತ ಬೋರ್ಡ್ ಹಾಕೋತಾರೆ. ನಾಳೆ ಬಾ ಅನೋರಿಗೆ ಜನರು ಕೂಡ ನಾಳೆ ಅಂತ ಹೇಳ್ತಾರೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.
ಎನ್‌ಪಿಎಸ್ ನೌಕರರ ಆತ್ಮಹತ್ಯೆ ವಿಚಾರವಾಗಿ ಮಾತನಾಡಿದ ಅವರು, ನನ್ನ ಇಲಾಖೆಗೆ ಬರಲ್ಲ, ಆದರೂ ಸಹ ಶಿಕ್ಷಣ ಇಲಾಖೆ ಮಂತ್ರಿ ಜೊತೆ ಮಾತಾಡುತ್ತೇನೆ. ಎಲ್ಲರಿಗೂ ನ್ಯಾಯ ಕೊಡಬೇಕು.
ನ್ಯಾಯ ಕೊಡೋದ್ರಲ್ಲಿ ತಪ್ಪಾದರೇ, ನಿಜಕ್ಕೂ ಅಧಿಕಾರಿಗಳಿಗೆ ನಾವು ಎಚ್ಚರಿಕೆ ಕೊಡಬೇಕು. ಆ ದೃಷ್ಠಿಯಿಂದ ಇಲಾಖೆಯ ಮುಖ್ಯಸ್ಥರ ಜೊತೆ ನಾನ ಮಾತನಾಡುತ್ತೇನೆ. ಅವರಿಗೆ ನ್ಯಾಯ ಸಿಗುವ ರೀತಿಯಲ್ಲಿ ನಾನು ಮಾಡತ್ತೀನಿ ಎಂದರು.












Click it and Unblock the Notifications