ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ತಾಂತ್ರಿಕ ದೋಷ ಸಚಿವರೆ ಇದೆಂಥಾ ಸಮರ್ಥನೆ ಎಂದ ಜೆಡಿಎಸ್, ಕಾರಣವೇನು ?
karnataka government schemes: ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿ ಹಣ ಜಮೆ ವಿಚಾರದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಿರುವ ವಿಚಾರವು ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಗ್ಯಾರಂಟಿ ಯೋಜನೆಗಳು ಪ್ರಮುಖ ಪಾತ್ರ ವಹಿಸಿದ್ದವು ಎನ್ನುವುದು ಹಳೆಯ ವಿಚಾರ. ಆದರೆ, ಗ್ಯಾರಂಟಿ ಯೋಜನೆಗಳು ಸಕ್ಸಸ್ ಆಗಿವೆ. ಈಚೆಗೆ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವುದೇ ಇದಕ್ಕೆ ಸಾಕ್ಷಿ. ಆದರೆ, ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಮಾಡುವ ವಿಚಾರವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿರುವ ಹೇಳಿಕೆಯು ಭಾರೀ ಚರ್ಚೆಗೆ ಕಾರಣವಾಗಿದೆ.
ಈ ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಹಾಗೂ ಟ್ರೋಲ್ ಆಗುತ್ತಿದ್ದು. ಇದೇ ವಿಷಯವಾಗಿ ಇದೀಗ ಜೆಡಿಎಸ್ ಪಕ್ಷ ಸಹ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ವ್ಯಂಗ್ಯವಾಡಿದೆ. ತಾಂತ್ರಿಕ ದೋಷ ಸಚಿವರೆ ಇದೆಂಥಾ ಸಮರ್ಥನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಪ್ರಶ್ನೆ ಮಾಡಿದೆ.

ಚುನಾವಣೆ ಗೆಲ್ಲಲೇಬೇಕೆನ್ನುವ ಕಾರಣಕ್ಕೆ ಹಾಗೂ ವಾಮಮಾರ್ಗದಲ್ಲಿ ಉಪಚುನಾವಣೆ ನಡೆದಿದ್ದ ವೇಳೆ 3 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಗೃಹಲಕ್ಷ್ಮಿ ಹಣ ಹಾಕಿದ್ದೀರಿ. ಆದರೆ, ಇನ್ನುಳಿದ ಜಿಲ್ಲೆಗಳಲ್ಲಿ ಯಾಕೆ 3-4 ತಿಂಗಳಿಂದ ದುಡ್ಡು ಹಾಕಿಲ್ಲ ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ. ಮುಂದುವರಿದು
ಇದನ್ನು ಪ್ರಶ್ನಿಸಿದರೇ ನಿಮಗೇಕೆ ಈ ಪರಿ ಸಿಟ್ಟು ಬರುತ್ತಿದೆ. ದಿವಾಳಿಯಾಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲವೇ. ಯಾವುದೇ ಕ್ಷೇತ್ರಕ್ಕೂ ಅನುದಾನ ಸಿಗುತಿಲ್ಲ.
ಅಭಿವೃದ್ಧಿ ಶೂನ್ಯ ಸರ್ಕಾರವು ಗ್ಯಾರಂಟಿಗಾಗಿ ಕರ್ನಾಟಕ ರಾಜ್ಯವನ್ನು ದಿವಾಳಿ ಮಾಡುತ್ತಿದೆ. ಅದಕ್ಕೆ ನಿಮ್ಮ ಹತಾಶೆಯ ಮಾತುಗಳೇ ಸಾಕ್ಷಿ ಎಂದು ಹೇಳಿದೆ.
ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು ?
ಗೃಹಲಕ್ಷ್ಮಿ ಯೋಜನೆಯ ಹಣವು ಪ್ರತಿ ತಿಂಗಳು ಸಮರ್ಪಕವಾಗಿ ಬರದೆ ಇರುವುದಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಪ್ರಶ್ನೆ ಮಾಡಿದ್ದಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಉಡಾಫೆಯ ಉತ್ತರ ಕೊಟ್ಟಿದ್ದರು. ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆ ಆಗುವುದಕ್ಕೆ ಒಂದು ತಿಂಗಳಲ್ಲಿ ಒಂದೇ ಒಂದು ದಿನ ತಡವಾದರೂ ನನಗೆ 500ಕ್ಕೂ ಹೆಚ್ಚು ಕರೆಗಳು ಬರ್ತವೆ.
ಈ ರೀತಿ ಕರೆ ಮಾಡುವವರಿಗೆ ಉತ್ತರ ಕೊಡುವುದು ಹಾಗೂ ಅವರಿಗೆ ಧೈರ್ಯ ತುಂಬುವುದಕ್ಕೇ ನನಗೆ ಸಾಕಾಗುತ್ತದೆ. ನನ್ನ ಟೈಮ್ ಎಲ್ಲಾ ಇದರಲ್ಲೇ
ಕಳೆದು ಹೋಗುತ್ತೆ. ಇನ್ನು ಸ್ವಲ್ಪ ತಡವಾದರೂ, ಮುಂದಿನ ತಿಂಗಳು ಗೃಹಲಕ್ಷ್ಮಿ ಹಣ ಬರಲ್ಲ ಅಂತ ವಿರೋಧ ಪಕ್ಷದ ನಾಯಕರು ಹೇಳುತ್ತಾರೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ನಾವು ವಚನಭ್ರಷ್ಟರಲ್ಲ, ನಮ್ಮ ವಚನ ಉಳಿಸಿಕೊಂಡಿದ್ದೇವೆ ಎಂದು ಹೇಳುತ್ತಿದ್ದೇವೆ ಎಂದಿದ್ದರು. ಇಷ್ಟೇ ಹೇಳಿದ್ದರೆ ಅದು ವಿವಾದಕ್ಕೆ ಕಾರಣವಾಗುತ್ತಿರಲಿಲ್ಲ.
ಪತ್ರಕರ್ತರು ಪ್ರತಿ ತಿಂಗಳು ಸರಿಯಾಗಿ ಯಾಕೆ ಬರ್ತಿಲ್ಲ ಮೇಡಂ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಿಮಗೆಲ್ಲ ಪ್ರತಿ ತಿಂಗಳೂ ಸಂಬಳ ಸರಿಯಾಗಿ ಬರುತ್ತಾ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರಿ ಸಂಸ್ಥೆಗಳಲ್ಲಿ ಒಂದು ತಿಂಗಳು ಸಂಬಳ ಕೊಡ್ತಾರೆ ಕೆಲವೊಮ್ಮೆ ಮೂರು ತಿಂಗಳಿಗೊಮ್ಮೆ ಕೊಡ್ತಾರೆ. ಇಲ್ಲದಿದ್ದರೆ ಇನ್ನೂ ಕೆಲವೊಮ್ಮೆ ಎರಡ್ಮೂರು ತಿಂಗಳಿಗೊಮ್ಮೆ ಕೊಡೊದು ಇದೆ. ಸರ್ಕಾರದಲ್ಲಿ ಖಂಡಿತವಾಗಿಯೂ ಈ ರೀತಿ ಎಲ್ಲಾ ಆಗುತ್ತೆ. ಕೆಲವೊಮ್ಮೆ ಎರಡೆರಡು ತಿಂಗಳು ತಡವಾಗುತ್ತೆ. ಇದೆಲ್ಲೆ ವಿಷಯ ನಿಮಗೂ ಗೊತ್ತಿದೆ ಯಾಕೆ, ನನ್ನಿಂದ ಸುಮ್ಮನೆ ಹೇಳಿಸ್ತೀರಿ ಎಂದಿದ್ದರು. ಇದಕ್ಕೆ ಪತ್ರಕರ್ತರು ನಮಗೆಲ್ಲ ಪ್ರತಿ ತಿಂಗಳು ಸರಿಯಾಗಿ ಸಂಬಳ ಬರುತ್ತದೆ ಎಂದು ಉತ್ತರಿಸಿದ್ದರು.












Click it and Unblock the Notifications