Uttarakhand Trekking Tragedy: ಉತ್ತರಾಖಂಡದಲ್ಲಿ ಕನ್ನಡಿಗರ ನರಕಯಾತನೆ; ಇನ್ನೂ 4 ಮೃತದೇಹಗಳು ಪತ್ತೆ

ಬೆಂಗಳೂರು, ಜೂನ್. 06: ಉತ್ತರಾಖಂಡ್ ಟ್ರೆಕ್ಕಿಂಗ್ ದುರಂತದಲ್ಲಿ ರಾಜ್ಯದ ಒಟ್ಟು ಒಂಬತ್ತು ಮಂದಿ ಪ್ರಾಣ ಕಳೆದುಕೊಂಡಿದ್ದು ಸಾವಿನ ಸಂಖ್ಯೆ ಹೆಚ್ಚಾಗಿದೆ. ರಾಜ್ಯ ಸರ್ಕಾರ ರಕ್ಷಣಾ ಕಾರ್ಯಾಚರಣೆ ತಂಡದೊಂದಿಗೆ ಸಂಪರ್ಕದಲ್ಲಿದ್ದು, ಮೃತರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಥಳದಲ್ಲೆ ಇದ್ದು, ಅಪ್‌ಡೇಟ್ ಹಂಚಿಕೊಂಡಿದ್ದಾರೆ.

ಉತ್ತರಾಖಂಡ ಚಾರಣಿಗರ ಅಪ್ಡೇಟ್; ಇನ್ನೂ 4 ಮೃತದೇಹಗಳು ಪತ್ತೆ

ಈ ಕೆಳಗಿನ ಚಾರಣಿಗರನ್ನು ನಿನ್ನೆ (ಬುಧವಾರ) ರಕ್ಷಿಸಿ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿದೆ.

1. ಸೌಮ್ಯಾ ಕೆನಾಲೆ

2. ಸ್ಮೃತಿ ಡೋಲಾಸ್

3. ಶೀನಾ ಲಕ್ಷ್ಮಿ

4. ಎಸ್. ಶಿವ ಜ್ಯೋತಿ

5. ಅನಿಲ್ ಜಮತಿಗೆ ಅರುಣಾಚಲ ಭಟ್

6. ಭರತ್ ಬೊಮ್ಮನ ಗೌಡರ್

7. ಮಧು ಕಿರಣ್ ರೆಡ್ಡಿ

8. ಜೈಪ್ರಕಾಶ್ ಬಿ.ಎಸ್.

Minister Krishna Byre Gowda Shares update on Uttarakhand trekking tragedy

ಇಂದು (ಗುರುವಾರ) ಬೆಳಗ್ಗೆ 5 ಚಾರಣಿಗರನ್ನು ರಕ್ಷಿಸಲಾಗಿದ್ದು, ಬೆಳಗ್ಗೆ 11 ಗಂಟೆಗೆ ವಿಮಾನದ ಮೂಲಕ ರಕ್ಷಿಸಲ್ಪಟ್ಟವರನ್ನು ಉತ್ತರಕಾಶಿಯಿಂದ ಡೆಹ್ರಾಡೂನ್‌ಗೆ ಕಳುಹಿಸಲು ಸಿದ್ದತೆ ನಡೆಸಲಾಗಿದೆ.

1. ಎಸ್ ಸುಧಾಕರ್

2. ವಿನಯ್ ಎಂ.ಕೆ

3. ವಿವೇಕ್ ಶ್ರೀಧರ್

4. ನವೀನ್ ಎ

5. ರಿತಿಕಾ ಜಿಂದಾಲ್

5 ಚಾರಣಿಗರ ಮೃತದೇಹಗಳನ್ನು ಬುಧವಾರಉತ್ತರಕಾಶಿಗೆ ವಿಮಾನದಲ್ಲಿ ರವಾನಿಸಲಾಗಿದೆ.

1. ಸಿಂಧು ವಕೆಲಂ

2. ಆಶಾ ಸುಧಾಕರ್

3. ಸುಜಾತಾ ಮುಂಗುರವಾಡಿ

4. ವಿನಾಯಕ್‌ ಮುಂಗುರವಾಡಿ

5. ಚಿತ್ರಾ ಪ್ರಣೀತ್

Minister Krishna Byre Gowda Shares update on Uttarakhand trekking tragedy

ಇಂದು ಮುಂಜಾನೆ ಕಾರ್ಯಾಚರಣೆಯಲ್ಲಿ ಇನ್ನೂ 4 ಶವಗಳನ್ನು ಪತ್ತೆ ಮಾಡಲಾಗಿದ್ದು, ಉತ್ತರಕಾಶಿಗೆ ವಿಮಾನದಲ್ಲಿ ರವಾನಿಸಲಾಗಿದೆ.

1. ಪದ್ಮನಾಭ ಕೆ.ಪಿ

2. ವೆಂಕಟೇಶ್ ಪ್ರಸಾದ್ ಕೆ

3. ಅನಿತಾ ರಂಗಪ್ಪ

4. ಪದ್ಮಿನಿ ಹೆಗ್ಡೆ

ಉತ್ತರಕಾಶಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಬೆಳಗ್ಗೆ 11 ಗಂಟೆಗೆ ಎಲ್ಲಾ 9 ಮೃತದೇಹಗಳನ್ನು ವಿಮಾನದ ಮೂಲಕ ಡೆಹ್ರಾಡೂನ್‌ಗೆ ತರಲಾಗುವುದು. ಡೆಹ್ರಾಡೂನ್‌ನಲ್ಲಿ ಎಂಬಾಮಿಂಗ್ ಮಾಡಲಾಗುತ್ತದೆ. ಎಲ್ಲಾ 9 ಶವಗಳನ್ನು ಬೆಂಗಳೂರಿಗೆ ಸಾಗಿಸಲು ನಾವು ಈಗಾಗಲೇ ಚಾರ್ಟರ್ ಫ್ಲೈಟ್ ವ್ಯವಸ್ಥೆ ಮಾಡಿದ್ದೇವೆ.

ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ ಮತ್ತು ವಿಪತ್ತು ನಿರ್ವಹಣೆಯ ಕಾರ್ಯದರ್ಶಿ ರಂಜಿತ್ ಸಿನ್ಹಾ ಅವರನ್ನು ನಾನು ಇಂದು ಭೇಟಿಯಾಗಿ ಈ ವಿಪತ್ತಿನ ಸಮಯದಲ್ಲಿ ಅವರ ತ್ವರಿತ ಪ್ರತಿಕ್ರಿಯೆಗಾಗಿ ಅವರಿಗೆ ಧನ್ಯವಾದ ಅರ್ಪಿಸಿದ್ದೇನೆ. ಶವಗಳನ್ನು ಬೆಂಗಳೂರಿಗೆ ಸಾಗಿಸಲು ವಿಮಾನದ ವ್ಯವಸ್ಥೆ ಮಾಡುವಂತೆಯೂ ನಾನು ಅವರ ಸಹಾಯವನ್ನು ಕೋರಿದೆ. ಅವರು ಸಹಾಯ ಮಾಡಲು ಒಪ್ಪಿಕೊಂಡಿದ್ದಾರೆ.

ಎಲ್ಲಾ 9 ಮೃತದೇಹಗಳು ಮಧ್ಯಾಹ್ನ 12 ಗಂಟೆಗೆ ಡೆಹ್ರಾಡೂನ್ ತಲುಪುವ ಸಾಧ್ಯತೆಯಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಎಂಬಾಮ್ ಮಾಡಿದ ನಂತರ ನಾವು ಇಂದು ಎಲ್ಲಾ ಮೃತದೇಹಗಳನ್ನು ವಿಮಾನ ಮೂಲಕ ಬೆಂಗಳೂರಿಗೆ ರವಾನಿಸಲು ಯೋಜಿಸುತ್ತಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+