ಸಿದ್ದರಾಮಯ್ಯ, ಡಿಕೆಶಿ ಸತ್ಯಹರಿಶ್ಚಂದ್ರರಾ?; ಸುಧಾಕರ್

ಬೆಂಗಳೂರು, ಮಾರ್ಚ್ 24: " ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ರಮೇಶ್ ಕುಮಾರ್ ಸತ್ಯಹರಿಶ್ಚಂದ್ರರಾ?. ಇವರೆಲ್ಲರೂ ಏಕಪತ್ನಿ ವ್ರತ ಮಾಡುತ್ತಿದ್ದಾರಾ?" ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.

Recommended Video

      'ಎಲ್ಲಾ ನಾಯಕರ ತನಿಖೆಯಾಗಲಿ ಯಾರು ಏಕಪತ್ನಿವ್ರತಸ್ಥರು? ಯಾರಿಗೆಲ್ಲ ಅನೈತಿಕ ಸಂಬಂಧ ಇದೆ ಗೊತ್ತಾಗುತ್ತೆ' ಸಚಿವ ಸುಧಾಕರ್ ಹೇಳಿಕೆ | Oneindia Kannada

      ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವರು, "ನಾನೂ ಸೇರಿದಂತೆ 224 ಶಾಸಕರ ಮೇಲೆಯೂ ತನಿಖೆಯಾಗಲಿ. ಎಲ್ಲರನ್ನು ತನಿಖೆ ಮಾಡಿದಾಗ ಬಂಡವಾಳ ಗೊತ್ತಾಗುತ್ತೆ" ಎಂದು ತಿಳಿಸಿದರು.

       Minister K Sudhakar Statement Sparked Controversy

      "ಎಲ್ಲಾ ಮಂತ್ರಿಗಳದ್ದೂ, ಶಾಸಕರದ್ದೂ, ವಿರೋಧ ಪಕ್ಷದವರದ್ದು ಕೂಡ ತನಿಖೆಯಾಗಲಿ. ಯಾರಿಗೆ ಅನೈತಿಕ ಸಂಬಂಧವಿದೆ? ಎಂಬುದು ತಿಳಿಯಲಿ ಬಿಡಿ" ಎಂದು ಡಾ. ಕೆ. ಸುಧಾಕರ್ ಹೇಳಿದ್ದಾರೆ.

      ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿಕೆಗೆ ಹಲವು ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ವಿವಿಧ ಪಕ್ಷದ ನಾಯಕರು ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.

      ಡಿ. ಕೆ. ಶಿವಕುಮಾರ್ ಪ್ರತಿಕ್ರಿಯೆ; ಎಲ್ಲರ ವಿರುದ್ಧ ತನಿಖೆಯಾಗಲಿ ಎಂಬ ಡಾ. ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, "ಬಹಳ ಸಂತೋಷ. ರಾಜ್ಯಕ್ಕೆ ನುಡಿಮುತ್ತುಗಳನ್ನು ಕೊಟ್ಟಿದ್ದಾರೆ. ನನಗಿರುವುದು ಒಬ್ಬಳೇ ಹೆಂಡತಿ, ಒಂದೇ ಸಂಸಾರ. ಈ ಹೇಳಿಕೆ ಬಗ್ಗೆ ಇಲ್ಲಿ ಚರ್ಚೆ ಮಾಡೋಲ್ಲ, ಸದನದಲ್ಲಿ ಚರ್ಚೆ ಮಾಡುತ್ತೇವೆ. ಎಲ್ಲಾ ನಾಯಕರ ಜೊತೆ ಮಾತನಾಡುತ್ತೇನೆ. ಇದು ಸಾಮೂಹಿಕ ವಿಚಾರ" ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+