ಡಿಸೆಂಬರ್ 7ಕ್ಕೆ ಮೇಕೆದಾಟಿಗೆ ಡಿ.ಕೆ.ಶಿವಕುಮಾರ್ ಭೇಟಿ
ಬೆಂಗಳೂರು, ಡಿಸೆಂಬರ್ 04: ಮೇಕೆದಾಟುವಿನಲ್ಲಿ ಕರ್ನಾಟಕ ಸರ್ಕಾರ ಅಣೆಕಟ್ಟು ನಿರ್ಮಿಸಲು ಉದ್ದೇಶಿಸಿರುವ ಸ್ಥಳಕ್ಕೆ ಡಿ.ಕೆ.ಶಿವಕುಮಾರ್ ಅವರು ಡಿಸೆಂಬರ್ 7 ರಂದು ಭೇಟಿ ನೀಡಲಿದ್ದಾರೆ.
ಜಲ ತಜ್ಞರು ಮತ್ತು ಎಂಜಿನಿಯರ್‌ಗಳೊಂದಿಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮೇಕೆದಾಟಿಗೆ ಭೇಟಿ ನೀಡಲಿದ್ದು, ಸ್ಥಳ ಪರಿಶೀಲನೆ ನಡೆಸಲಿದ್ದಾರೆ.
ಮೇಕೆದಾಟು ಯೋಜನೆಗೆ ಸುಪ್ರಿಂ ಅಸ್ತು ಎಂದ ಬೆನ್ನಲ್ಲೇ ತಮಿಳುನಾಡು ಸರ್ಕಾರವು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದಲ್ಲಿ ಆಕ್ಷೇಪ ತೆಗೆದಿತ್ತು, ಆದರೆ ಇದಕ್ಕೆ ಸೊಪ್ಪು ಹಾಕದ ಪ್ರಾದೀಕಾರವು ಸರ್ಕಾರ ಸಲ್ಲಿಸಿರುವ ಡಿಪಿಆರ್ ಅನ್ನು ಪರಿಶೀಲಿಸುವುದಾಗಿ ಹೇಳಿದೆ.

ಕಾವೇರಿ ನಿರ್ವಹಣಾ ಮಂಡಳಿಯು ಮೇಕೆದಾಟು ಯೋಜನೆಯ ಪೂರ್ಣ ಕಾರ್ಯಸಾಧು ವರದಿಯನ್ನು ಪರಿಶೀಲಿಸಿ ಯೋಜನೆಗೆ ಒಪ್ಪಿಗೆ ನೀಡಲಿದೆ. ತಮಿಳುನಾಡು ಆಕ್ಷೆಪಣೆಗೆ ಪ್ರಾಧಿಕಾರವು ಸೊಪ್ಪು ಹಾಕದಿರುವುದು ರಾಜ್ಯಕ್ಕೆ ದೊರಕಿದ ಮುನ್ನಡೆ ಎಂದು ಭಾವಿಸಬಹುದಾಗಿದೆ.












Click it and Unblock the Notifications