ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷಾರಂಭದಲ್ಲೇ, ಬಿಜೆಪಿ ಮುಖಂಡರಿಗೆ ಡಿಕೆಶಿ ಬರೆದ ಬಹಿರಂಗ ಪತ್ರ

|
Google Oneindia Kannada News

Recommended Video

BJP ಮುಖಂಡರಿಗೆ ಬಹಿರಂಗವಾಗಿಯೆ ಶಾಕ್ ನೀಡಿದ ಡಿಕೆಶಿ..! | Oneindia Kannada

ಬೆಂಗಳೂರು, ಜ 2: ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯಲ್ಲಿ ತಮ್ಮ ಪ್ರಾಭಲ್ಯವನ್ನು ಹೆಚ್ಚಿಸುವ ನಡೆಯೆಂದೇ ಹೇಳಬಹುದಾದ, ರಾಜಕೀಯ ಹೆಜ್ಜೆಯನ್ನು ವರ್ಷದ ಮೊದಲ ದಿನವೇ ರಾಜ್ಯ ಜಲಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್ ಇಟ್ಟಿದ್ದಾರೆ.

ರಾಮನಗರ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯಲ್ಲಿ ತಮ್ಮ ಖದರ್ ಅನ್ನು ಬಿಜೆಪಿಯವರಿಗೆ ತೋರಿಸಿದ್ದ ಡಿಕೆಶಿ, ಈಗ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದ್ದು, ಬಿಜೆಪಿ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರುವಂತೆ ಬಹಿರಂಗವಾಗಿಯೇ ಆಹ್ವಾನಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಡಿಕೆಶಿ ಇಟ್ಟಿರುವ ರಾಜಕೀಯ ನಡೆಯಿದು ಎಂದೇ ವ್ಯಾಖ್ಯಾನಿಸಲಾಗುತ್ತಿದ್ದು, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಇದಕ್ಕೆ ಯಾವರೀತಿ ಸ್ಪಂದಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಹೈಕಮಾಂಡ್ ಒಪ್ಪಿದರೆ ಯೋಗೇಶ್ವರ್ ಅವರಿಗೆ ಸ್ವಾಗತ ಕೋರುತ್ತೇವೆ, ಕಾಂಗ್ರೆಸ್ ಮುಖಂಡರುಹೈಕಮಾಂಡ್ ಒಪ್ಪಿದರೆ ಯೋಗೇಶ್ವರ್ ಅವರಿಗೆ ಸ್ವಾಗತ ಕೋರುತ್ತೇವೆ, ಕಾಂಗ್ರೆಸ್ ಮುಖಂಡರು

ಸಹೋದರ ಡಿ ಕೆ ಸುರೇಶ್ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ಬರುವ ಚನ್ನಪಟ್ಟಣ ಅಸೆಂಬ್ಲಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರನ್ನು ಉದ್ದೇಶಿಸಿ ಬರೆದ ಪತ್ರದಲ್ಲೇನಿದೆ? ಮುಂದೆ ಓದಿ..

ಡಿ ಕೆ ಶಿವಕುಮಾರ್ ನೀಡಿದ ಆಹ್ವಾನ

ಡಿ ಕೆ ಶಿವಕುಮಾರ್ ನೀಡಿದ ಆಹ್ವಾನ

ತಮ್ಮ ಲೆಟರ್ ಹೆಡ್ ನಲ್ಲಿ ಡಿ ಕೆ ಶಿವಕುಮಾರ್ ನೀಡಿದ ಆಹ್ವಾನ ಈ ರೀತಿಯಿದೆ, " ಕಾಂಗ್ರೆಸ್ ತತ್ವ ಮತ್ತು ಸಿದ್ದಾಂತದಲ್ಲಿ ನಂಬಿಕೆಯಿರುವ ಚನ್ನಪಟ್ಟಣ ತಾಲೂಕಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪಕ್ಷದ ಬಾಗಿಲು ಸದಾ ತೆರೆದಿದೆ'. ಇನ್ನೂ ಇದೆ

ಸಿ.ಪಿ.ಯೋಗೇಶ್ವರ್ ವಿರುದ್ಧ ತಿರುಗಿ ಬಿದ್ದ ರಾಮನಗರ ಬಿಜೆಪಿ ಮುಖಂಡರು ಸಿ.ಪಿ.ಯೋಗೇಶ್ವರ್ ವಿರುದ್ಧ ತಿರುಗಿ ಬಿದ್ದ ರಾಮನಗರ ಬಿಜೆಪಿ ಮುಖಂಡರು

ಪಟ್ಟಭದ್ರ ಹಿತಾಶಕ್ತ ಬಿಜೆಪಿ ಮುಖಂಡರ ಸ್ವಾರ್ಥ

ಪಟ್ಟಭದ್ರ ಹಿತಾಶಕ್ತ ಬಿಜೆಪಿ ಮುಖಂಡರ ಸ್ವಾರ್ಥ

ತಾಲೂಕಿನ ಕೆಲವು ಪಟ್ಟಭದ್ರ ಹಿತಾಶಕ್ತ ಬಿಜೆಪಿ ಮುಖಂಡರ ಸ್ವಾರ್ಥ ನಡೆ-ನುಡಿಯಿಂದಾಗಿ, ಬೇಸತ್ತು ಹೋಗಿರುವುದಾಗಿ ಬಿಜೆಪಿಯ ಕೆಲವು ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಬಳಿಯೇ ಅಳಲನ್ನು ತೋಡಿಕೊಂಡಿದ್ದಾರೆ.

ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಎಂದು ಯಡಿಯೂರಪ್ಪ ಅವರನ್ನು ಕೇಳಿ:ಡಿಕೆಶಿ ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಎಂದು ಯಡಿಯೂರಪ್ಪ ಅವರನ್ನು ಕೇಳಿ:ಡಿಕೆಶಿ

ಕಾಂಗ್ರೆಸ್ ಬರಲು ಉತ್ಸುಕರಾಗಿದ್ದಾರೆ

ಕಾಂಗ್ರೆಸ್ ಬರಲು ಉತ್ಸುಕರಾಗಿದ್ದಾರೆ

ನೋವಿನ ಜೊತೆಗೆ, ಕಾಂಗ್ರೆಸ್ ಬರಲು ಉತ್ಸುಕರಾಗಿರುವುದಾಗಿಯೂ ಹೇಳಿದ್ದಾರೆ. ಅವರು ಯಾವಾಗ ಬೇಕಾದರೂ ಪಕ್ಷಕ್ಕೆ ಬರಬಹುದು. ಸಾಮಾಜಿಕ ನ್ಯಾಯ, ಜಾತ್ಯಾತೀತತೆ, ಕೋಮು ಸಾಮರಸ್ಯ, ಸರ್ವರಿಗೂ ಸಮಬಾಳು, ಏಕತೆಯಲ್ಲಿ ವೈವಿಧ್ಯತೆ, ದೇಶದ ಆಮೂಲಾಗ್ರ ಪ್ರಗತಿ ಕಾಂಗ್ರೆಸ್ಸಿನ ಮೂಲ ಮಂತ್ರ.

ಎಸ್ ಎಂ ಕೃಷ್ಣ ಅವರನ್ನು ಡಿಕೆ ಶಿವಕುಮಾರ್ ಭೇಟಿ ಮಾಡಿದ್ದೇಕೆ? ಎಸ್ ಎಂ ಕೃಷ್ಣ ಅವರನ್ನು ಡಿಕೆ ಶಿವಕುಮಾರ್ ಭೇಟಿ ಮಾಡಿದ್ದೇಕೆ?

ಅನ್ಯಾಯ, ಸರ್ವಾಧಿಕಾರಿ ಧೋರಣೆ

ಅನ್ಯಾಯ, ಸರ್ವಾಧಿಕಾರಿ ಧೋರಣೆ

ಕಾಂಗ್ರೆಸ್ಸಿನಲ್ಲಿ ಅನ್ಯಾಯ, ಸರ್ವಾಧಿಕಾರಿ ಧೋರಣೆಗೆ ಆಸ್ಪದವಿಲ್ಲ. ಎಲ್ಲರನ್ನೂ ಸಮಭಾವದಿಂದ ಕಾಣಲಾಗುವುದು' ಇದು ಸಚಿವ ಡಿ ಕೆ ಶಿವಕುಮಾರ್, ಚನ್ನಪಟ್ಟಣದ ಬಿಜೆಪಿ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಬಹಿರಂಗವಾಗಿ ಪತ್ರದ ಮೂಲಕ ನೀಡಿದ ಆಹ್ವಾನ.

ಯೋಗೇಶ್ವರ್ ಅವರಿಗೆ ಪರೋಕ್ಷವಾಗಿ ಚಮಕ್

ಯೋಗೇಶ್ವರ್ ಅವರಿಗೆ ಪರೋಕ್ಷವಾಗಿ ಚಮಕ್

ಡಿಕೆ ಶಿವಕುಮಾರ್ ಬರೆದ ಪತ್ರ ಮೇಲ್ನೋಟಕ್ಕೆ ಸಿ ಪಿ ಯೋಗೇಶ್ವರ್ ಅವರಿಗೆ ಪರೋಕ್ಷವಾಗಿ ಚಮಕ್ ನೀಡಲು ಎಂದು ಹೇಳಲಾಗುತ್ತಿದ್ದರೂ, ಚನ್ನಪಟ್ಟಣ ಬ್ಲಾಕ್ ಕಾಂಗ್ರೆಸ್ ಮುಖಂಡರು, ಹೈಕಮಾಂಡ್ ಒಪ್ಪಿದರೆ, ಯೋಗೇಶ್ವರ್ ಕಾಂಗ್ರೆಸ್ ಸೇರುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಹೇಳಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

English summary
Minister DK Shivakumar open letter to Channapattana BJP leaders and Karyakartas. In his letter DK Shivakumar openly welcomed party leaders to join Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X