ಕುಕ್ಕೆ ಸುಬ್ರಹ್ಮಣ್ಯ ತುಲಾಭಾರ ಹರಕೆ ತೀರಿಸಿಕೊಂಡ ಡಿಕೆಶಿ
ಸುಬ್ರಹ್ಮಣ್ಯ (ದಕ್ಷಿಣ ಕನ್ನಡ), ಸೆ. 24: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಸಂಸಾರ ಸಮೇತ ಭೇಟಿ ನೀಡಿದರು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಚಿವ ಡಿಕೆ ಶಿವಕುಮಾರ್ ಹಾಗೂ ಅವರ ಪತ್ನಿ, ಪುತ್ರಿ ಮತ್ತು ಪರಿವಾರದೊಡನೆ ಭಾನುವಾರ ಮುಂಜಾನೆ ಕುಕ್ಕೆ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನದಲ್ಲಿ ತುಲಾಭಾರ (ಧಾನ್ಯಗಳು) ಪೂಜೆ ಸಲ್ಲಿಸಲಿರುವ ಡಿಕೆ ಶಿವಕುಮಾರ್ ಅವರು ರಾಜ್ಯದ ಏಳಿಗೆಗಾಗಿ ಪ್ರಾರ್ಥಿಸಿದರು.
ಐಟಿ ದಾಳಿಯ ನಂತರ ನೊಣವಿನ ಕೆರೆ ಅಜ್ಜಯ್ಯನ ದರ್ಶನ ಪಡೆದಿದ್ದ ಡಿಕೆ ಶಿವಕುಮಾರ್ ಅವರು ಇಂದು ಇಲ್ಲಿ ಬಹುಕಾಲದ ಹರಕೆಯನ್ನು ತೀರಿಸಿಕೊಂಡರು.[ವಿಡಿಯೋ : ಕಿರಣ್ ಸಿರ್ಸಿಕರ್]












Click it and Unblock the Notifications