ಸಚಿವ ಸಿ. ಟಿ. ರವಿ ಟ್ವೀಟ್‌ನಲ್ಲಿ ಬೀಫ್; ಬಿಸಿ-ಬಿಸಿ ಚರ್ಚೆ!
Recommended Video
ಬೆಂಗಳೂರು, ಜನವರಿ 16 : ಕರ್ನಾಟಕದ ಬಿಜೆಪಿ ನಾಯಕ, ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಮಾಡಿರುವ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ. ಟ್ವೀಟ್‌ನಲ್ಲಿ ಬೀಫ್ ಫೋಟೋ ಇದ್ದು ಜನರು ಸಾಮಾಜಿಕ ಜಾಲತಾಣದಲ್ಲಿ ಸಚಿವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳ ರಾಜ್ಯದ ಪ್ರವಾಸೋದ್ಯಮ ಇಲಾಖೆ ಬೀಫ್ ಖಾದ್ಯದ ಫೋಟೋವನ್ನು ಟ್ವೀಟ್ ಮಾಡಿತ್ತು. ಖಾದ್ಯ ತಯಾರು ಮಾಡುವುದು ಹೇಗೆ? ಎಂಬ ಲಿಂಕ್ ಸಹ ನೀಡಿತ್ತು. ಸಂಕ್ರಾಂತಿ ದಿನ ಮಾಡಿದ್ದ ಟ್ವೀಟ್ ಜನರ ಅಸಮಾಧಾನಕ್ಕೆ ಕಾರಣವಾಗಿತ್ತು.
ಸಚಿವ ಸಿ. ಟಿ. ರವಿ ಗುರುವಾರ ಇದೇ ಟ್ವೀಟ್ ಅನ್ನು ತಮ್ಮ ಖಾತೆ ಮೂಲಕ ಮಾಡಿದ್ದಾರೆ. Welcome to Karnataka. #KarnatakaTourism, #OneStateManyWorlds ಎಂಬ ಹ್ಯಾಷ್ ಟ್ಯಾಗ್ ಹಾಕಿದ್ದಾರೆ. ಇದಕ್ಕೆ ರಾಜ್ಯದ ಜನರು ಆಕ್ರೋಶ ಹೊರಹಾಕಿದ್ದಾರೆ.
ಹಿಂದೂ ಧರ್ಮ, ಗೋ ಮಾತೆ, ಗೋರಕ್ಷಕರು ಮುಂತಾದ ಪದಗಳನ್ನು ಬಳಸಿ ಸಿ. ಟಿ. ರವಿಯನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿ. ಟಿ. ರವಿ ಅವರು ಸಹ ಕೊನೆಗೆ ಟ್ವೀಟರ್‌ನಲ್ಲಿ ಉತ್ತರವನ್ನು ನೀಡಿದ್ದಾರೆ.
|
ಟಿವಿ ರವಿ ಟ್ವೀಟ್ ಏನು?
ಕರ್ನಾಟಕದ ಬಿಜೆಪಿ ನಾಯಕ, ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಮಾಡಿರುವ ಟ್ವೀಟ್. ಈ ಟ್ವೀಟ್‌ನಲ್ಲಿ ಬೀಫ್ ಖಾದ್ಯ ಇರುವುದು ಹಲವು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಕೇರಳ ಪ್ರವಾಸೋದ್ಯಮ ಇಲಾಖೆ ಬುಧವಾರ ಮಾಡಿದ್ದ ಟ್ವೀಟ್.

ಟ್ವೀಟ್‌ಗೆ ಜನರ ಆಕ್ರೋಶ
ಇವರೇ ನೋಡಿ ಗೋ ರಕ್ಷಕರು. ಎಲ್ಲಾ ಢೋಂಗಿ ಹಿಂದೂವಾದಿಗಳು ಎಂದು ಸಿ. ಟಿ. ರವಿ ಅವರಿಗೆ ಟ್ವಿಟರ್ ಮೂಲಕವೇ ಜನರು ಪ್ರತಿಕ್ರಿಯೆ ನೀಡಿದ್ದಾರೆ.

ಸಚಿವರಿಗೆ ಪ್ರಶ್ನೆ
ಮಿಸ್ಟರ್ ಮಿನಿಸ್ಟರ್ ಕರ್ನಾಟಕಕ್ಕೆ ಬೀಫ್ ಅನ್ನು ಸ್ವಾಗತಿಸುತ್ತಿದ್ಧೀರಾ? ಎಂದು ಸಹ ಪ್ರಶ್ನೆ ಮಾಡಲಾಗಿದೆ.

ಸಚಿವರ ಟ್ವೀಟ್
ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತು ಅನ್ನೋ ಗಾದೆ ನಿಮಗೆ ಸರಿಯಾಗಿ ಅನ್ವಯಿಸುತ್ತೆ, ನೀವು ಯಾವುದನ್ನ ಸ್ವಾಗತಿಸುತ್ತಿದ್ದೀರಿ ಗೋಮಾಂಸ ಭಕ್ಷನೆಯನ್ನೋ !? ಕೇರಳ ಪ್ರವಾಸೋದ್ಯಮವನ್ನೋ!? ಎಂದು ಜನರು ಪ್ರಶ್ನೆ ಮಾಡಿದ್ದಾರೆ.
|
ಸ್ಪಷ್ಟನೆ ನೀಡಿದ ಟಿವಿ ರವಿ
ತಮ್ಮ ಟ್ವೀಟ್‌ಗೆ ಹಲವಾರು ಪ್ರತಿಕ್ರಿಯೆ ಬರುತ್ತಿದ್ದಂತೆ ಸಿ. ಟಿ. ರವಿ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.












Click it and Unblock the Notifications