ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Metro Pillar Collapse: ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ

|
Google Oneindia Kannada News

ಬೆಂಗಳೂರು, ಜ. 10: ನಗರದ ಹೆಣ್ಣೂರು ಕ್ರಾಸ್ ಬಳಿ ಮೆಟ್ರೋ ನಿರ್ಮಾಣ ಹಂತದ ಕಾಮಗಾರಿಯ ಪಿಲ್ಲರ್ ಕುಸಿದು ತಾಯಿ - ಮಗು‌ ಮೃತಪಟ್ಟಿದ್ದಾರೆ. ಮೃತ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಮೆಟ್ರೊ 2 ನೇ ಹಂತದ ಕಾಮಗಾರಿ ನಡೆಯುತ್ತಿದ್ದ ನಾಗವಾರ ಬಳಿ‌ (ಹೆಣ್ಣೂರು ಕ್ರಾಸ್) ಮಂಗಳವಾರ ಬೆಳಗ್ಗೆ ಕಬ್ಬಿಣದ ಸರಳುಗಳ ಪಿಲ್ಲರ್‌ ಕುಸಿದು 23 ವರ್ಷದ ತೇಜಸ್ವಿನಿ ಮತ್ತು ಅವರ ಎರಡೂವರೆ ವರ್ಷದ ಕಂದಮ್ಮ ಮೃತಪಟ್ಟಿದ್ದಾರೆ.

Namma Metro: ಪಿಲ್ಲರ್ ಕುಸಿತ: 20ಲಕ್ಷ ಪರಿಹಾರ ಘೋಷಿಸಿದ ಅಂಜುಮ್ ಪರ್ವೇಜ್Namma Metro: ಪಿಲ್ಲರ್ ಕುಸಿತ: 20ಲಕ್ಷ ಪರಿಹಾರ ಘೋಷಿಸಿದ ಅಂಜುಮ್ ಪರ್ವೇಜ್

ಘಟನೆಗೆ ಸಂಬಂಧಿಸಿದಂತೆ ಧಾರವಾಡದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಘಟನೆ ಬಗ್ಗೆ ಮಾಹಿತಿ ಬಂದಿದೆ. ನಾಗವಾರದಲ್ಲಿ ಪಿಲ್ಲರ್ ಕಿಸಿದಿದೆ. ಗದಗದ ಹೆಣ್ಣು ಮಗು ಮೃತಪಟ್ಟಿದ್ದಾರೆ. ಇದು ದುರಾದೃಷ್ಟಕರ. ಈ ಘಟನೆ ಹೇಗೆ ನಡೆದಿದೆ ಎಂಬುದನ್ನು ವಿಚಾರಿಸಿ ತನಿಖೆ ನಡೆಸುತ್ತೇವೆ. ಘಟನೆಗೆ ಕಾರಣವಾದವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

Metro PIllar Collapse: CM Basavaraj Bommai announces rs 10 lakh compensation

ಕೆಲವು ಗಂಟೆಗಳ ಹಿಂದಷ್ಟೇ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಘಟನಾ ಸ್ಥಳಕ್ಕೆ ಭೇಟಿ ನಿಡಿ ಪರಿಶಿಲನೆ ನಡೆಸಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮೃತರಿಗೆ 20 ಲಕ್ಷ ರೂಪಾಯಿ ಹಣವನ್ನು ಪರಿಹಾರವಾಗಿ ನೀಡಲಾಗುವುದು ಎಂದು ಘೋಷಿಸಿದ್ದರು.

ಇದರ ಜೊತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಸಂಪೂರ್ಣ ವೆಚ್ಚ ಭರಿಸಲಾಗುವುದು ಎಂದು ಅಂಜುಮ್ ಪರ್ವೇಜ್ ತಿಳಿಸಿದ್ದರು.

ಮೆಟ್ರೊ 2 ನೇ ಹಂತದ ನಾಗವಾರ - ಗೊಟ್ಟಿಗೆರೆ ಮಾರ್ಗದ ಹೆಣ್ಣೂರು ಮುಖ್ಯ ರಸ್ತೆ ಎಚ್‌ಬಿಆರ್‌ ಲೇಔಟ್‌ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿತ್ತು. ಹೆಣ್ಣೂರು ಕ್ರಾಸ್ ಬಳಿ ಮೆಟ್ರೋ ಪಿಲ್ಲರ್ ನಿರ್ಮಾಣಕ್ಕೆ ಕಬ್ಬಿಣದ ಸರಳುಗಳನ್ನು ಜೋಡಿಸಲಾಗಿತ್ತು. ಈ ಕಬ್ಬಿಣದ ಪಿಲ್ಲರ್‌ಗೆ ಕಾಂಕ್ರೀಟ್ ಹಾಕುವುದು ಬಾಕಿ ಇತ್ತು. ಇಷ್ಟರಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಾಯಿ ಮಗಿವಿನ ಮೇಲೆ ಈ ಕಂಬಿಗಳು ಬಿದ್ದು ದುರಂತ ಘಟನೆ ನಡೆದು ಎರಡು ಜೀವಗಳು ಅಸುನೀಗಿವೆ.

English summary
Metro PIllar Collapse: Chief minister Basavaraj Bommai announces rs 10 lakh compensation for the family . know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X