Mega Survey: ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 92-102 ಸ್ಥಾನ, ಬಿಜೆಪಿ-ಜೆಡಿಎಸ್‌ಗೆ ಎಷ್ಟು ಸ್ಥಾನ? ಅಂಕಿ ಸಂಖ್ಯೆ ಇಲ್ಲಿದೆ
ಬೆಂಗಳೂರು, ಏಪ್ರಿಲ್ 24: ಕರ್ನಾಟಕ ಸಾರ್ವತ್ರಿಕ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಸಾಕಷ್ಟು ಸಂಸ್ಥೆ ಮತ್ತು ಏಜೆನ್ಸಿಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿವೆ. ಈ ಪೈಕಿ ಸೋಮವಾರ ರಾತ್ರಿ ಪಬ್ಲಿಕ್ ಟಿವಿ ಕನ್ನಡ ವಾಹಿನಿಯ 'ಮೆಗಾ ಸರ್ವೇ' ವರದಿ ಬಿಡುಗಡೆಯಾಗಿದೆ. ಇಲ್ಲಿ ಅಚ್ಚರಿಯ ಫಲಿತಾಂಶದ ಮುನ್ಸೂಚನೆ ಸಿಕ್ಕಿದೆ.
ಈ ಚುನಾವಣೆ ಪೂರ್ವ 'ಮೆಗಾ ಸರ್ವೇ'ಯಲ್ಲಿ ಕಳೆದ ಬಾರಿ ಹಿನ್ನಡೆ ಅನುಭವಿಸಿದ್ದ ಪ್ರಮುಖ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಈ ಸಲ ಮುನ್ನಡೆ ಸಾಧಿಸಲಿದ್ದು, ಅತ್ಯಧಿಕ ಸ್ಥಾನ ಪಡೆಯಲಿದೆ ಎಂದು ಹೇಳಲಾಗಿದೆ.

2018ರಲ್ಲಿ ಕೇವಲ 80 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಕಾಂಗ್ರೆಸ್ ಈ ಬಾರಿ 92-102 ಸ್ಥಾನಗಳನ್ನು ಗೆಲ್ಲಲಿದೆ ಎಂದು ಮೆಗಾ ಸರ್ವೇ ಹೇಳುತ್ತಿದೆ. ಅದೇ ರೀತಿ ಕಳೆದ ಬಾರಿ 104 ಸ್ಥಾನ ಗಳಿಸಿ ಆಪರೇಷನ್ ಕಮಲ ಮಾಡಿದ್ದ ಬಿಜೆಪಿಗೆ ಈ ಸಲ ಕೇವಲ 83-90 ಸೀಟುಗಳನ್ನು ತನ್ನದಾಗಿಸಿಕೊಳ್ಳಲಿದೆ.
ಅದೇ ರೀತಿ ಜೆಡಿಎಸ್ ಕಳೆದ ಬಾರಿಗೆ ಹೋಲಿಕೆ ಮಾಡಿದರೆ ತುಸು ಕಡಿಮೆ ಕ್ಷೇತ್ರಗಳನ್ನು ಬಾಚಿಕೊಳ್ಳಲಿದೆ. ಜೆಡಿಎಸ್ 2018ರಲ್ಲಿ 37 ಸ್ಥಾನ ಪಡೆದಿದ್ದು, ಈ ಚುನಾವಣೆಯಲ್ಲಿ 29-34 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ. ಉಳಿದಂತೆ ಇನ್ನಿತರ ಪಕ್ಷಗಳು 2ರಿಂದ 4 ಸ್ಥಾನಗಳ್ನು ಹೊಂದಲಿವೆ ಎಂದು ಮೆಗಾ ಸರ್ವೇ ತಿಳಿಸಿದೆ.
ಕರ್ನಾಟಕಕ್ಕೆ ಸಿಗದ ಸ್ಪಷ್ಟ ಬಹುಮತ
ಚುನಾವಣೆ ದಿನಾಂಕ ಘೋಷಣೆಯಾದ ಮಾರ್ಚ್ 29ರಿಂದಲೇ ರಾಜ್ಯ ರಾಜಕೀಯದಲ್ಲಿ ಚುನಾವಣೆ ಪ್ರಕ್ರಿಯೆಗಳು ಗರಿಗೆದರಿದವು. ಅದಾದ ಬಳಿಕ ವಿವಿಧ ಏಜೆನ್ಸಿಗಳು, ಕಂಪನಿಗಳು ಹಾಗೂ ಸಂಸ್ಥೆಗಳಿಂದ ಚುನಾವಣೆ ಪೂರ್ವ ಸಮೀಕ್ಷೆಯ ವರದಿಗಳು ಒಂದೊಂದೆ ಹೊರ ಬಿದ್ದವು.
ಬಹುತೇಕ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಸಾಧಿಸಲಿದೆ ಎಂಬ ಅಂಶ ಸಾಮಾನ್ಯ ಎಂಬಂತಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆ ಕಂಡು ಬಂದಿದೆ. ಅಧಿಕಾರ ಹಿಡಿಯಲು ತುದಿಗಾಲಲ್ಲೇ ನಿಂತಿರುವ ಪ್ರಮುಖ ರಾಷ್ಟ್ರೀಯ ಪಕ್ಷಗಳಿಗೆ ಈ ಸಮೀಕ್ಷೆ ನಿದ್ದೆಗೆಡಿಸಿದೆ. ಸರ್ವೆ ಪ್ರಕಾರ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಈ ಸಲವು ಸಿಗುವುದಿಲ್ಲ ಎಂಬ ಅಂಶಗಳು ಬೆಳಕಿಗೆ ಬಂದಿವೆ.
ಹೀಗಿದ್ದರೂ ಸದ್ಯ ಭರ್ಜರಿ ಚುನಾವಣೆ ಪ್ರಚಾರದಲ್ಲಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಾಯಕರು 120ರಿಂದ 150 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಜೆಡಿಎಸ್ ಸಹ ತಾನು ಈ ಬಾರಿ ಪ್ರಬಲ ಪಕ್ಷವಾಗಿ ಹೊರ ಹೊಮ್ಮುವುದಾಗಿ ವಿಶ್ವಾಸ ವ್ಯಕ್ತಪಡಿಸಿದೆ. ಇನ...












Click it and Unblock the Notifications