ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ರಾಜಕಾರಣ, ಸಮಾವೇಶಗಳು ಹಾಗೂ ಜೆಡಿಎಸ್‌ನ ಯಶಸ್ಸು!

By ಕಿಕು
|
Google Oneindia Kannada News

ಬೆಂಗಳೂರು, ಮಾರ್ಚ್ 09 : ಚುನಾವಣೆಗಳು ಬಂತೆಂದರೆ ಸಮಾವೇಶಗಳು ಸಾಮಾನ್ಯ. ಚುನಾವಣೆಗೆ ಒಂದು ವರ್ಷವಿರುವಾಗಲೇ ಸಮಾವೇಶಗಳ ಪರ್ವ ಆರಂಭವಾಗುತ್ತವೆ. 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗಾಗಲೇ ಪ್ರಮುಖ ರಾಜಕೀಯ ಪಕ್ಷಗಳು ಸಮಾವೇಶಗಳನ್ನು ಯಶಸ್ವಿಯಾಗಿ ನಡೆಸುತ್ತಿವೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ, ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ ಸೇರಿದಂತೆ ಅನೇಕ ಪ್ರಮುಖರು ಈಗಾಗಲೇ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

ದಾವಣಗೆರೆಯಲ್ಲಿ ಮೋದಿ ಹೇಳಿದ್ದೇನು?ದಾವಣಗೆರೆಯಲ್ಲಿ ಮೋದಿ ಹೇಳಿದ್ದೇನು?

ಕೆಲವೇ ದಿನಗಳಲ್ಲಿ ಚುನಾವಣಾ ಆಯೋಗ, ಚುನಾವಣಾ ದಿನಾಂಕ ಪ್ರಕಟಿಸಲಿದೆ. ನಂತರ ಚುನಾವಣೆಗಾಗಿ ರಾಜಕೀಯ ಪಕ್ಷಗಳಿಗೆ ಚುನಾವಣಾ ತಯಾರಿಗಾಗಿ ಸುಮಾರು 40ರಿಂದ 50 ದಿನಗಳ ಕಾಲಾವಕಾಶವನ್ನು ನೀಡಲಾಗುತ್ತದೆ.

ಬೃಹತ್ ಸಮಾವೇಶದಲ್ಲಿ ಜೆಡಿಎಸ್ ಪಟ್ಟಿ ಬಿಡುಗಡೆಬೃಹತ್ ಸಮಾವೇಶದಲ್ಲಿ ಜೆಡಿಎಸ್ ಪಟ್ಟಿ ಬಿಡುಗಡೆ

Recommended Video

ಕರ್ನಾಟಕ ಚುನಾವಣೆ 2018 : ಬೆಂಗಳೂರು ನಗರದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ | Oneindia Kannada

ಫೆಬ್ರವರಿ 17 ರಂದು ಬೆಂಗಳೂರಿನ ಹೊರವಲಯದ ಯಲಹಂಕದಲ್ಲಿ ಆಯೋಜಿಸಿದ್ದ ಸಮಾವೇಶ ಕೇವಲ ಜೆಡಿಎಸ್ ಅಥವಾ ಜನತಾ ಪಕ್ಷವೇ ಅಲ್ಲದೇ, ದಾಖಲೆಗಳ ಪ್ರಕಾರ ಕರ್ನಾಟಕದ ಇತಿಹಾಸದಲ್ಲೇ ಅತಿ ಹೆಚ್ಚು ಜನ ಸೇರಿದ್ದ ಸಮಾವೇಶ. ಸುಮಾರು 4 ಲಕ್ಷಕ್ಕೂ ಹೆಚ್ಚು ಜನರಿದ್ದ ಸಮಾವೇಶವನ್ನು ಉದ್ದೇಶಿಸಿ ಕುಮಾರಸ್ವಾಮಿ, ದೇವೇಗೌಡ ಹಾಗು ಮಾಯಾವತಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಖರ್ಚು-ವೆಚ್ಚಗಳ ಮೇಲೆ ಕಣ್ಣು

ಖರ್ಚು-ವೆಚ್ಚಗಳ ಮೇಲೆ ಕಣ್ಣು

ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ ಚುನಾವಣಾ ಫಲಿತಾಂಶದ ದಿನದವರೆಗೂ ನಡೆಯುವ ಸಮಾವೇಶಗಳ ಖರ್ಚು, ವೆಚ್ಚಗಳ ಮೇಲೆ ಚುನಾವಣಾ ಆಯೋಗ ನಿಗಾವಹಿಸುತ್ತದೆ.

ಅದರಂತೆಯೇ ರಾಜಕೀಯ ಪಕ್ಷಗಳೂ ಸೇರಿದಂತೆ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ನಡೆಯುವ ಚುನಾವಣಾ ಕಾರ್ಯಕ್ರಮಗಳಿಗೆ ತಗುಲುವ ವೆಚ್ಚಗಳ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ.

ಆದ್ದರಿಂದಲೇ ರಾಜಕೀಯ ಪಕ್ಷಗಳು ನೀತಿಸಂಹಿತೆ ಜಾರಿಯಾಗುವ ಮೊದಲೇ ಎಷ್ಟು ಸಾಧ್ಯವೋ ಅಷ್ಟೂ ಸಮಾವೇಶಗಳನ್ನು ಮಾಡಲು ಯತ್ನಿಸುತ್ತವೆ. ಈಗಾಲಗೇ ಬಿಜೆಪಿಯ ಹಲವು ಸಮಾವೇಶಗಳು, ಜೆಡಿಎಸ್‌ನ ಹಿಂದುಳಿದ ವರ್ಗದ 5 ಸಮಾವೇಶಗಳಿಗೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 20, 21ರಂದು ರಾಹುಲ್ ಗಾಂಧಿ ರಾಜ್ಯಕ್ಕೆ ಬರಲಿದ್ದು ಹಲವು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ರಾಜ್ಯ, ರಾಷ್ಟ್ರಮಟ್ಟದ ಸ್ಟಾರ್ ಕ್ಯಾಂಪೈನೆರ್‌ಗಳು

ರಾಜ್ಯ, ರಾಷ್ಟ್ರಮಟ್ಟದ ಸ್ಟಾರ್ ಕ್ಯಾಂಪೈನೆರ್‌ಗಳು

ಬಿಜೆಪಿಯಲ್ಲಿ ಕರ್ನಾಟಕದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರನ್ನು ಹೊರತು ಪಡಿಸಿದರೆ, ಮತ್ಯಾವ ನಾಯಕರಿಗೂ ಜನರನ್ನು ಸೇರಿಸಿ ದೊಡ್ಡ ಮಟ್ಟದ ಸಮಾವೇಶಗಳನ್ನು ಮಾಡಲು ಸಾಮರ್ಥ್ಯವಿಲ್ಲದ್ದನ್ನು ಮನಗಂಡ ಬಿಜೆಪಿ ರಾಷ್ಟ್ರೀಯ ನಾಯಕರು ಸ್ವತಃ ಅಮಿತ್ ಶಾ ಹಾಗು ಮೋದಿಯವರನ್ನೇ ಚುನಾವಣಾ ಸಮಾವೇಶಕ್ಕೆ ಕರ್ನಾಟಕಕ್ಕೆ ಕಳುಹಿಸುತ್ತಿದೆ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ 3 ಬಾರಿ ರಾಜ್ಯಕ್ಕೆ ಆಗಮಿಸಿ ಬೆಂಗಳೂರು, ದಾವಣಗೆರೆ, ಮೈಸೂರಿನಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದಾರೆ. ಅಮಿತ್ ಶಾ ಅವರು ಉತ್ತರ ಕರ್ನಾಟಕದ ಕೆಲವು ಭಾಗ, ಕರಾವಳಿ ಭಾಗದಲ್ಲಿ ಸಂಚಾರ ನಡೆಸಿ ಸಮಾವೇಶಗಳನ್ನು ನಡೆಸಿದ್ದಾರೆ.

ರಾಹುಲ್ ಗಾಂಧಿ, ಸಿದ್ದರಾಮಯ್ಯ

ರಾಹುಲ್ ಗಾಂಧಿ, ಸಿದ್ದರಾಮಯ್ಯ

ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬಿಟ್ಟರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದರೆ ಮಾತ್ರ ಸಮಾವೇಶಗಳು ನಡೆಯುತ್ತಿವೆ, ಭಾರೀ ಜನರು ಸೇರುತ್ತಾರೆ. ಸಾಧನಾ ಸಮಾವೇಶದ ಹೆಸರಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಅವರು ಒಂದು ಸುತ್ತಿನ ಸಮಾವೇಶಗಳನ್ನು ನಡೆಸಿದ್ದಾರೆ. ಜನಾರ್ಶಿವಾದ ಯಾತ್ರೆ ಎಂಬ ಹೆಸರಿನಲ್ಲಿ ಎರಡು ಬಾರಿ ರಾಹುಲ್ ಗಾಂಧಿ ಕರ್ನಾಟಕ ಪ್ರವಾಸ ಮಾಡಿದ್ದಾರೆ. ಮಾರ್ಚ್ 20, 21ರಂದು ಪುನಃ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.

ಜೆಡಿಎಸ್ ವಿಚಾರಕ್ಕೆ ಬಂದರೆ ಎಚ್.ಡಿ. ಕುಮಾರಸ್ವಾಮಿ ಹಾಗು ದೇವೇಗೌಡರನ್ನು ಹೊರತುಪಡಿಸಿದರೆ, ಮತ್ಯಾರಿಗೂ ದೊಡ್ಡ ಮಟ್ಟದ ಸಮಾವೇಶ ನಡೆಸುವ ಸಾಮರ್ಥ್ಯವಿದ್ದಂತಿಲ್ಲ. ಕುಮಾರ ಪರ್ವ ಹೆಸರಿನಲ್ಲಿ ಜೆಡಿಎಸ್ ಈ ಬಾರಿಯ ಚುನಾವಣೆ ಪ್ರಚಾರ ಕೈಗೊಂಡಿದೆ. ಇದೇ ಹೆಸರಿನಲ್ಲಿ ಸಮಾವೇಶಗಳನ್ನು ಮಾಡುತ್ತಿದೆ.

ಅತಿಹೆಚ್ಚು ಜನಸ್ತೋಮ ಕಂಡ ಸಮಾವೇಶ

ಅತಿಹೆಚ್ಚು ಜನಸ್ತೋಮ ಕಂಡ ಸಮಾವೇಶ

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕಾಲದಿಂದಲೂ ಕರ್ನಾಟಕ ಸಮಾವೇಶಗಳನ್ನು ಕಂಡಿದೆ. 2009ರ ಬಳಿಕ ನಡೆದ ಚುನಾವಣೆಗಳಲ್ಲಿ ಹೆಚ್ಚಿನ ಸಮಾವೇಶಗಳು ನಡೆದಿವೆ, ಸಮಾವೇಶದಲ್ಲಿಯೇ ಭರ್ಜರಿ ಪ್ರಚಾರ ನಡೆಸಿದೆ. ಕಳೆದ 6 ರಿಂದ 8 ತಿಂಗಳಿಂದೀಚೆಗೆ ರಾಜ್ಯದಲ್ಲಿ, ನೂರಕ್ಕೂ ಹೆಚ್ಚು ಸಮಾವೇಶಗಳು ನಡೆದು ಹೋಗಿವೆ.

ಪ್ರತಿ ರಾಜಕೀಯ ಪಕ್ಷವು ತನ್ನ ಸಮಾವೇಶದಲ್ಲಿ ಅತೀ ಹೆಚ್ಚು ಜನರನ್ನು ಸೇರಿಸುವುದಕ್ಕೆ ಎಲ್ಲಿಲ್ಲದ ಸಾಹಸ ನಡೆಸುತ್ತವೆ. ಪ್ರತಿ ಪಕ್ಷಕ್ಕೂ ಚುನಾವಣಾ ಸಮಯದಲ್ಲಿ ಶಕ್ತಿ ಪ್ರದರ್ಶನ ಅತೀ ಮುಖ್ಯ. ಈ ಸಮಾವೇಶಗಳು ಒಂದಷ್ಟು ಮತಗಳ ಪಥ ಬದಲಿಸುವ ಶಕ್ತಿ ಹೊಂದಿರುತ್ತವೆ ಎಂಬುದು ರಾಜಕಾರಣಿಗಳ ನಂಬಿಕೆ. ಒಂದಷ್ಟು ನಿಜವೂ ಹೌದೂ ಎನ್ನಬಹುದು. ಅದೆಷ್ಟೋ ಬಾರಿ ಹೆಚ್ಚು ಜನರನ್ನೂ ಸೇರಿಸದ, ಹೆಚ್ಚು ಸಮಾವೇಶಗಳನ್ನೂ ಮಾಡದೇ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ನಿದರ್ಶನಗಳು ನಮ್ಮ ಮುಂದಿದೆ.

ನರೇಂದ್ರ ಮೋದಿ ಅವರ ಸಮಾವೇಶ

ನರೇಂದ್ರ ಮೋದಿ ಅವರ ಸಮಾವೇಶ

ಖುದ್ದು ಪ್ರಧಾನಿ ಮೋದಿಯವರೇ ಬೆಂಗಳೂರು, ಮೈಸೂರು, ದಾವಣಗೆರೆ ಬಂದು ಸಮಾವೇಶಗಳಲ್ಲಿ ಪಾಲ್ಗೊಂಡಿದ್ದಾರೆ. ಕಳೆದ ಫೆಬ್ರವರಿ 4 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೋದಿ ಸಮಾವೇಶ ನಡೆಯಿತು. ಸುಮಾರು 3 ರಿಂದ 4 ಲಕ್ಷದವರೆಗೆ ಜನರನ್ನು ಸೇರಿಸಿ ಎಂದು ಬಿಜೆಪಿ ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ನೀಡಿದರೂ ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರರಾವ್, ಪ್ರಕಾಶ್ ಜಾವಡೇಕರ್, ಪಿಯೂಷ್ ಗೋಯೆಲ್ ಅವರಿಗೆ ಅಷ್ಟು ಜನರನ್ನು ಸೇರಿಸಲು ಸಾಧ್ಯವಾಗಲಿಲ್ಲ.

ಒಂದು ಲಕ್ಷ ಜನರನ್ನು ಸೇರಿಸಲು ಸಾಧ್ಯವಾಗದಿದ್ದಕ್ಕೆ ಬಿಜೆಪಿ ರಾಜ್ಯ ನಾಯಕರು, ರಾಷ್ಟ್ರ ನಾಯಕರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ನಂತರ ಮೈಸೂರಿನ ಸಮಾವೇಶದಲ್ಲೂ ಅದರ ತಪ್ಪನ್ನು ದೊಡ್ಡ ಮಟ್ಟದಲ್ಲಿ ಸರಿಪಡಿಸಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಸ್ವತಃ ಮೋದಿಯವರ ಭಾಷಣದ ವೇಳೆಯಲ್ಲೇ ಸಾವಿರಾರು ಖಾಲಿ ಕುರ್ಚಿಗಳು ಎದ್ದು ಕಾಣುತ್ತಿದ್ದುದು ಸುದ್ದಿಯಾಗಿತ್ತು. ಮಾಹಿತಿಯ ಪ್ರಕಾರ, ಮೋದಿಗಾಗಿ ಸಮಾವೇಶಗಳನ್ನು ಆಯೋಜಿಸುವುದು, ಲಕ್ಷಾಂತರ ಜನರನ್ನು ಕರೆತರುವುದು ರಾಜ್ಯ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ಕಾಂಗ್ರೆಸ್ ಸಮಾವೇಶಗಳ ಕಥೆ

ಕಾಂಗ್ರೆಸ್ ಸಮಾವೇಶಗಳ ಕಥೆ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಕರ್ನಾಟಕ ಹಾಗು ಹೈದರಾಬಾದ್ ಕರ್ನಾಟಕದ ಹಲವು ಭಾಗಗಳಲ್ಲಿ ರೋಡ್ ಷೋ ನಡೆಸಿ, ಸುಮಾರು 8 ಸಮಾವೇಶಗಳನ್ನು ಮಾಡಿದ್ದಾರೆ.

ಜೆಡಿಎಸ್ ನ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸುಮಾರು 40 ರಿಂದ 50 ಕ್ಷೇತ್ರಗಳಲ್ಲಿ 'ಕುಮಾರ ಪರ್ವ' ಹೆಸರಿನ ರೋಡ್ ಷೋ ಹಾಗು ಸಮಾವೇಶಗಳನ್ನು ನಡೆಸಿದ್ದಾರೆ.

ಸಾಮಾನ್ಯವಾಗಿ ದೊಡ್ಡ ಗಾತ್ರದ ಸಮಾವೇಶವೆಂದರೆ ಸುಮಾರು 80 ಸಾವಿರದಿಂದ 1 ಲಕ್ಷದವರೆಗೆ ಜನರನ್ನು ಸೇರಿಸುವುದು ಸಾಧ್ಯವಾಗುತ್ತದೆ. ಆದರೆ, ಜೆಡಿಎಸ್ ಪಕ್ಷ ಐತಿಹಾಸಿಕ ಸಮಾವೇಶವನ್ನು ನಡೆಸುವ ಮೂಲಕ ರಾಜ್ಯದ ಜನರ ಗಮನವನ್ನು ಸೆಳೆದಿದೆ. ಬೆಂಗಳೂರು ಹೊರವಲಯದಲ್ಲಿ ನಡೆದ ಸಮಾವೇಶದಲ್ಲಿ ಲಕ್ಷಾಂತರ ಜನರು ಪಾಲ್ಗೊಂಡಿದ್ದರು.

4 ಲಕ್ಷ ಜನರು ಪಾಲ್ಗೊಂಡಿದ್ದರು

4 ಲಕ್ಷ ಜನರು ಪಾಲ್ಗೊಂಡಿದ್ದರು

ಫೆಬ್ರವರಿ 17 ರಂದು ಬೆಂಗಳೂರಿನ ಹೊರವಲಯದ ಯಲಹಂಕದಲ್ಲಿ ಆಯೋಜಿಸಿದ್ದ ಸಮಾವೇಶ ಕೇವಲ ಜೆಡಿಎಸ್ ಅಥವಾ ಜನತಾ ಪಕ್ಷವೇ ಅಲ್ಲದೇ, ದಾಖಲೆಗಳ ಪ್ರಕಾರ ಕರ್ನಾಟಕದ ಇತಿಹಾಸದಲ್ಲೇ ಅತಿ ಹೆಚ್ಚು ಜನ ಸೇರಿದ್ದ ಸಮಾವೇಶ. ಸುಮಾರು 4 ಲಕ್ಷಕ್ಕೂ ಹೆಚ್ಚು ಜನರಿದ್ದ ಸಮಾವೇಶವನ್ನು ಉದ್ದೇಶಿಸಿ ಕುಮಾರಸ್ವಾಮಿ, ದೇವೇಗೌಡ ಹಾಗು ಮಾಯಾವತಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು.

ಸುಮಾರು 500 ಕ್ಕೂ ಹೆಚ್ಚು ಬಸ್ಸುಗಳು ಸಂಚಾರ ದಟ್ಟಣೆಯಿಂದ ಸಮಾವೇಶ ಸ್ಥಳವನ್ನೂ ತಲುಪಲಾಗದೆ ಹಿಂದಿರುಗಿದ ಘಟನೆಯೂ ನಡೆಯಿತು. ಜೆಡಿಎಸ್ ಎಲ್ಲಿದೆ?, ಜೆಡಿಎಸ್ ನಮಗೆ ಎಂದಿಗೂ ಪ್ರತಿಸ್ಪರ್ದಿಯಾಗಲಾರದು ಎಂದು ಹೇಳುತಿದ್ದ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ನ ವಿರೋಧಿ ಬಣಗಳಿಗೆ ಅತಿದೊಡ್ಡ ಸಮಾವೇಶ ಕಂಡು ನಡುಕ ಉಂಟಾಗಿತ್ತು.

English summary
Stage set for Karnataka assembly elections 2018. Karnataka witnessing rally of political party's ahead of assembly elections. With the mega rally in Yelahanka, Bengaluru JD(S) shocked BJP and Congress in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X