• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಖ್ಯಮಂತ್ರಿ ಯಡಿಯೂರಪ್ಪಗೆ ಸಲಹೆಗಾರರ ನೇಮಕ

|
   ಮುಖ್ಯಮಂತ್ರಿ ಯಡಿಯೂರಪ್ಪಗೆ ಸಲಹೆಗಾರರ ನೇಮಕ | BS Yeddyurappa | Oneindia Kannada

   ಬೆಂಗಳೂರು, ಆಗಸ್ಟ್ 30: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಲಹೆಗಾರರನ್ನಾಗಿ ಮೋಹನ ಆ. ಲಿಂಬಿಕಾಯಿ ಮತ್ತು ಮಹದೇವ ಪ್ರಕಾಶ್ ಅವರನ್ನು ನೇಮಿಸಲಾಗಿದೆ.

   ಹುಬ್ಬಳ್ಳಿಯ ನಿವಾಸಿ ಮೋಹನ ಲಿಂಬಿಕಾಯಿ ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರನ್ನಾಗಿ ನೇಮಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಆರ್‌ಎಸ್ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

   ಸಂಪುಟ, ಖಾತೆ ಹಂಚಿಕೆ ಬಳಿಕ ಯಡಿಯೂರಪ್ಪ ಮುಂದೆ ಮತ್ತೊಂದು ಸವಾಲು

   ವಿಧಾನಪರಿಷತ್ ಸದಸ್ಯರೂ ಆಗಿದ್ದ ಮೋಹನ ಲಿಂಬಿಕಾಯಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತರ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಯಡಿಯೂರಪ್ಪ ಅವರು ಕೆಜೆಪಿ ಸೇರ್ಪಡೆಯಾಗಿದ್ದಾಗ ಮೋಹನ ಅವರೂ ಬಿಜೆಪಿ ತೊರೆದು ಕೆಜೆಪಿ ಸೇರಿಕೊಂಡಿದ್ದರು. ಬಳಿಕ ಯಡಿಯೂರಪ್ಪ ಅವರೊಂದಿಗೆ ಬಿಜೆಪಿಗೆ ಮರಳಿದ್ದರು. ಪಶ್ಚಿಮ ಪದವೀಧರ ಕ್ಷೇತ್ರದಿಂದ ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾಗಿದ್ದರು.

   ಹಾಗೆಯೇ, ಬೆಂಗಳೂರಿನ ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ ಅವರನ್ನು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರನ್ನಾಗಿ ನೇಮಿಸಿ ಆದೇಶಿಸಲಾಗಿದೆ. ಇಬ್ಬರ ನೇಮಕಾತಿಯನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ಮಾಡಲಾಗಿದೆ.

   Infographics: ವಾಸ್ತುಪ್ರಕಾರ ಸಚಿವರಿಗೆ ಹಂಚಿಕೆಯಾದ ಕೊಠಡಿ, ಗೃಹ ಕಚೇರಿ

   ಅನೇಕ ವರ್ಷಗಳಿಂದ ಪತ್ರಿಕಾ ರಂಗದಲ್ಲಿರುವ ಮಹದೇವ ಪ್ರಕಾಶ್ ಅವರು ರಾಜಕೀಯ ವಿಶ್ಲೇಷಕರು ಹಾಗೂ ಅಂಕಣಕಾರರಾಗಿದ್ದಾರೆ. ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನನೀಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.

   English summary
   Karnataka government has appointed Mohan Limbikayi as legal advisor and Mahadev Prakash as media advisor to Chief Minister BS Yediyurappa.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X