ಸೀಟು ಹಂಚಿಕೆ ಒಪ್ಪಂದ, ಸರ್ಕಾರಕ್ಕೆ ಕಾಮೆಡ್‌-ಕೆ ಸೆಡ್ಡು

Posted By:
Subscribe to Oneindia Kannada

ಬೆಂಗಳೂರು, ಮೇ 28 : ಕಾಮೆಡ್-ಕೆ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರಿ ಕೋಟಾದ ಶೇ 40ರಷ್ಟು ವೈದ್ಯ ಹಾಗೂ ದಂತವೈದ್ಯ ಸೀಟುಗಳನ್ನು ಬಿಟ್ಟುಕೊಡದಿರಲು ನಿರ್ಧರಿಸಿದೆ. ಇದರಿಂದಾಗಿ ಸುಮಾರು 1,500 ಸೀಟುಗಳು ಕೈತಪ್ಪಲಿವೆ.

ಶುಕ್ರವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಖಾಸಗಿ ವೈದ್ಯ ಹಾಗೂ ದಂತ ವೈದ್ಯ ಕಾಲೇಜುಗಳ ಒಕ್ಕೂಟ (ಕಾಮೆಡ್‌-ಕೆ) ಕಾರ್ಯದರ್ಶಿ ಎಂ.ಆರ್.ಜಯರಾಂ ಅವರು ಈ ಕುರಿತು ಮಾಹಿತಿ ನೀಡಿದರು. ರಾಜ್ಯದಲ್ಲಿ 12 ಖಾಸಗಿ ವೈದ್ಯ ಮತ್ತು 24 ದಂತವೈದ್ಯಕೀಯ ಕಾಲೇಜುಗಳಿವೆ. [ಮೇ 28ರಂದು ಸಿಇಟಿ ಫಲಿತಾಂಶ ಪ್ರಕಟ]

comedk

ಸುಪ್ರೀಂಕೋರ್ಟ್ ಆದೇಶ ಮತ್ತು ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯಂತೆ ಖಾಸಗಿ ವೈದ್ಯ ಹಾಗೂ ದಂತ ವೈದ್ಯ ಕಾಲೇಜುಗಳು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶದ ಅನ್ವಯ ಸೀಟುಗಳನ್ನು ಕೌನ್ಸಿಲಿಂಗ್ ಮೂಲಕ ಹಂಚಿಕೆ ಮಾಡಬೇಕು. [ಇಂಜಿನಿಯರಿಂಗ್ ಪ್ರವೇಶ ಶುಲ್ಕ ಶೇ 10ರಷ್ಟು ಹೆಚ್ಚಳ]

ಸುಗ್ರೀವಾಜ್ಞೆ ಪ್ರಕಾರ ಇನ್ನು ಮುಂದೆ ರಾಜ್ಯ ಸರ್ಕಾರದ ಜೊತೆ ಮಾಡಿಕೊಂಡ ಒಪ್ಪಂದಕ್ಕೆ ಮಾನ್ಯತೆ ಇರುವುದಿಲ್ಲ. ಈ ಅಂಶವನ್ನು ಮುಂದಿಟ್ಟುಕೊಂಡು ಕಾಮೆಡ್‌-ಕೆ ರಾಜ್ಯ ಸರ್ಕಾರಿ ಕೋಟಾದ ಶೇ 40ರಷ್ಟು ವೈದ್ಯ ಹಾಗೂ ದಂತವೈದ್ಯ ಸೀಟುಗಳನ್ನು ಬಿಟ್ಟುಕೊಡದಿರಲು ನಿರ್ಧರಿಸಿದೆ. [ಈ ವರ್ಷ ನೀಟ್ ತಲೆಬಿಸಿ ಇಲ್ಲ, ಸಿಇಟಿ ಸಾಕು]

ಇಂಜಿನಿಯರಿಂಗ್ ಸೀಟು ಯಥಾಸ್ಥಿತಿ : ಇಂಜಿನಿಯರಿಂಗ್ ಕಾಲೇಜುಗಳ ಸೀಟು ಹಂಚಿಕೆ ಒಪ್ಪಂದ ಯಥಾಸ್ಥಿತಿಯಂತೆ ಮುಂದುವರೆಯಲಿದೆ. ಒಪ್ಪಂದದ ಅನ್ವಯ ಸರ್ಕಾರಕ್ಕೆ ಶೇ 45, ಕಾಮೆಡ್‌-ಕೆಗೆ ಶೇ 30 ಮತ್ತು ಆಡಳಿತ ಮಂಡಳಿಗೆ ಶೇ 25ರಷ್ಟು ಸೀಟುಗಳು ಲಭ್ಯವಾಗಲಿವೆ.

ಶುಲ್ಕ ಹೆಚ್ಚಳ : ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶ ಶುಲ್ಕಗಳು ಶೇ 10ರಷ್ಟು ಏರಿಕೆ ಯಾಗಲಿದೆ. ವೈದ್ಯ ಶಿಕ್ಷಣದ ಕೋರ್ಸ್‌ಗಳ ಶುಲ್ಕಗಳು ಏರಿಕೆಯಾಗುವ ಸಾಧ್ಯತೆ ಇದ್ದು, ಮುಂದಿನ ವಾರ ನಡೆಯುವ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟ ಮತ್ತು ಸರ್ಕಾರ ಸೀಟು ಹಂಚಿಕೆ ಮತ್ತು ಶುಲ್ಕ ಹೆಚ್ಚಳದ ಕುರಿತು ಒಪ್ಪಂದಕ್ಕೆ ಗುರುವಾರ ಸಹಿ ಹಾಕಿವೆ. ಒಕ್ಕೂಟದ ಪರವಾಗಿ ಕಾರ್ಯದರ್ಶಿ ಪಾಂಡುರಂಗ ಶೆಟ್ಟಿ ಮತ್ತು ಸರ್ಕಾರ ಪರವಾಗಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್ ಮೀನಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
COMEDK will not share its MBBS and BDS seats for government quota from this year. The common entrance test (CET) conducted by Karnataka Examination Authority will be valid only to fill the seats in 15 government medical colleges.
Please Wait while comments are loading...