ಸ್ಪುಟ್ನಿಕ್ ವಿ ಲಸಿಕೆ 2ನೇ ಡೋಸ್ ಪಡೆಯಲಿಲ್ಲ ಹಲವರು!

ಬೆಂಗಳೂರು, ಸೆಪ್ಟೆಂಬರ್ 10; ಕೋವಿಡ್ ಸೋಂಕಿನ ವಿರುದ್ಧ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯನ್ನು ಭಾರತದಲ್ಲಿ ನೀಡಲಾಗುತ್ತಿದೆ. ಈ ಲಸಿಕೆಯೂ ಸಹ ಎರಡು ಡೋಸ್ ಆಗಿದ್ದು, 21 ದಿನಗಳ ಅಂತರದಲ್ಲಿ ಪಡೆಯಬಹುದಾಗಿದೆ.

ಕರ್ನಾಟಕದಲ್ಲಿ ಮೊದಲ ಡೋಸ್ ಸ್ಪುಟ್ನಿಕ್ ವಿ ಲಸಿಕೆ ಪಡೆದ 83,431 ಜನರು ಎರಡನೇ ಡೋಸ್ ಪಡೆಯಲು ಆಗಮಿಸಿಲ್ಲ. ರಾಜ್ಯದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಮೂರು ಜಿಲ್ಲೆಗಳ 9 ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದೆ.

ವಿಜಯಪುರ, ಮಂಗಳೂರು ಮತ್ತು ಬೆಂಗಳೂರಿನ ಆಯ್ದ ಆಸ್ಪತ್ರೆಗಳಲ್ಲಿ ಮಾತ್ರ ಸ್ಪುಟ್ನಿಕ್ ವಿ ಲಸಿಕೆ ಸಿಗುತ್ತಿದೆ. ಮೊದಲ ಡೋಸ್ ಪಡೆದವರಲ್ಲಿ 2ನೇ ಡೋಸ್ ಪಡೆಯಲು ಆಗಮಿಸದವರಲ್ಲಿ ಹೆಚ್ಚಿನ ಸಂಖ್ಯೆ ಬೆಂಗಳೂರು ನಗರದ್ದೇ ಆಗಿದೆ.

Many People Not Returned To Get Second Jab Of Sputnik V Vaccine

ಯುನೈಟೆಡ್ ಆಸ್ಪತ್ರೆಯಲ್ಲಿ ಮೊದಲ ಡೋಸ್ ಸ್ಪುಟ್ನಿಕ್ ವಿ ಲಸಿಕೆ ಪಡೆದ 156 ಜನರು 21 ದಿನಗಳು ಕಳೆದರೂ 2ನೇ ಡೋಸ್ ಪಡೆಯಲು ಆಗಮಿಸಿಲ್ಲ. ಮೊದಲ ಡೋಸ್ ಪಡೆದವರಿಗೆ 2ನೇ ಡೋಸ್ ನೀಡಲು ಆಸ್ಪತ್ರೆಗಳು ಆದ್ಯತೆ ನೀಡುತ್ತಿವೆ.

ಬೆಂಗಳೂರಿನ ಜಯನಗರದಲ್ಲಿರುವ ಆಸ್ಪತ್ರೆಯಲ್ಲಿ 3277 ಜನರು ಮೊದಲ ಡೋಸ್ ಪಡೆದಿದ್ದಾರೆ. ಇವರಲ್ಲಿ 2,761 ಜನರು ಮಾತ್ರ 2ನೇ ಡೋಸ್ ಪಡೆದಿದ್ದಾರೆ. 156 ಜನರು ಮೊದಲ ಡೋಸ್ ಪಡೆದು 21 ದಿನಗಳು ಕಳೆದರೂ ಸ್ಪುಟ್ನಿಕ್ ವಿ ಲಸಿಕೆಯ 2ನೇ ಡೋಸ್ ಪಡೆಯಲು ಆಗಮಿಸಿಲ್ಲ.

ಆಸ್ಪತ್ರೆಯ ವತಿಯಿಂದ ಮೊದಲ ಡೋಸ್ ಪಡೆದ ಎಲ್ಲರಿಗೂ 2ನೇ ಡೋಸ್ ಪಡೆದುಕೊಳ್ಳುವಂತೆ ಸಂದೇಶಗಳನ್ನು ಕಳಿಸಲಾಗುತ್ತಿದೆ. ಆದರೆ ಜನರು ಆಸ್ಪತ್ರೆಗೆ ಆಗಮಿಸಿಲ್ಲ. ಬೇರೆ ಎಲ್ಲೂ 2ನೇ ಡೋಸ್ ಪಡೆಯಬೇಡಿ ಮೊದಲ ಡೋಸ್ ಪಡೆದ ಆಸ್ಪತ್ರೆಗೆ ಆಗಮಿಸಿ ಪಡೆದುಕೊಳ್ಳಿ ಎಂದು ಆಸ್ಪತ್ರೆ ಜನರಿಗೆ ಮನವಿಯನ್ನು ಸಹ ಮಾಡಿದೆ.

ಸ್ಪುಟ್ನಿಕ್ ವಿ ಲಸಿಕೆಯ ಅವಧಿ ಕಡಿಮೆ ದಿನಗಳಾಗಿವೆ. ಆದ್ದರಿಂದ ಯುವಕರು ಈ ಲಸಿಕೆಯನ್ನು ಹೆಚ್ಚಾಗಿ ಹಾಕಿಸಿಕೊಳ್ಳುತ್ತಿದ್ದಾರೆ. ಹೆಚ್ಚು ಪ್ರಯಾಣ ಮಾಡುವವರಿಗೆ ಸಹ ಈ ಲಸಿಕೆ ಉತ್ತಮವಾಗಿದೆ. ಉಳಿದಂತೆ ಹಿರಿಯರು ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆಗೆ ಹೆಚ್ಚು ಬೇಡಿಕೆ ಇಡುತ್ತಿದ್ದಾರೆ.

ಮಣಿಪಾಲ್ ಆಸ್ಪತ್ರೆಯಲ್ಲಿ ಸ್ಪುಟ್ನಿಕ್ ವಿ ಲಸಿಕೆ ಪಡೆದ ಶೇ 90 ರಷ್ಟು ಜನರು ಮರಳಿ ಬಂದು 2ನೇ ಡೋಸ್ ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ಇದುವರೆಗೂ 9,570 ಜನರು ಮೊದಲ ಡೋಸ್ ಪಡೆದಿದ್ದಾರೆ. 4,466 ಜನರು 2ನೇ ಡೋಸ್ ಪಡೆದಿದ್ದಾರೆ.

ರಾಜ್ಯದಲ್ಲಿ ಸ್ಪುಟ್ನಿಕ್ ವಿ ಲಸಿಕೆ ವಿತರಣೆ ಆರಂಭವಾದ ನಾಲ್ಕು ದಿನದಲ್ಲಿಯೇ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಮೊದಲು ಬೆಂಗಳೂರು ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ಲಭ್ಯವಿತ್ತು. ಈಗ ಇನ್ನೂ ಎರಡು ಜಿಲ್ಲೆಗಳಲ್ಲಿ ಲಸಿಕೆ ಸಿಗುತ್ತಿದೆ.

ಕರ್ನಾಟಕ ಖಾಸಗಿ ಆಸ್ಪತ್ರೆಗಳು & ನರ್ಸಿಂಗ್ ಹೋಮ್ಸ್ ಒಕ್ಕೂಟ 10 ಲಕ್ಷ ಡೋಸ್ ಸ್ಪುಟ್ನಿಕ್ ವಿ ಲಸಿಕೆ ಬೇಕು ಎಂದು ಬೇಡಿಕೆ ಇಟ್ಟಿದ್ದವು. ಸ್ಪುಟ್ನಿಕ್ ವಿ ಲಸಿಕೆ ಇನ್ನೂ ಕೇಂದ್ರ ಸರ್ಕಾರದ ಲಸಿಕಾ ವಿತರಣಾ ಅಭಿಯಾನದ ಅಡಿಯಲ್ಲಿ ಬಂದಿಲ್ಲ.

ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆ ಎರಡು ಡೋಸ್‌ಗಳನ್ನು ಹೊಂದಿದೆ. ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ಗೆ ಹೋಲಿಕೆ ಮಾಡಿದರೆ ಎರಡು ಡೋಸ್ ಪಡೆಯುವ ಅವಧಿ ಕಡಿಮೆ ಇದೆ.

ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯ ಒಂದು ಡೋಸ್ ಸಹ ಲಭ್ಯವಿದೆ. ಆದರೆ ಭಾರತಕ್ಕೆ ಇದು ಇನ್ನು ಬಂದಿಲ್ಲ. ಸೆಪ್ಟೆಂಬರ್ ಅಂತ್ಯದ ವೇಳೆಗೆ ದೇಶದಲ್ಲಿ ಲಭ್ಯವಾಗುವ ನಿರೀಕ್ಷೆ ಇದ್ದು, ಮೆಟ್ರೋ ನಗರಗಳಲ್ಲಿ ಮಾತ್ರ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+