ವಿ.ಸೋಮಣ್ಣ, ಶಿವರಾಮ್‌ ಹೆಬ್ಬಾರ್ ಕಾಂಗ್ರೆಸ್‌ ಸೇರ್ಪಡೆ ಕುರಿತು ಮಹತ್ವದ ಮಾಹಿತಿ ನೀಡಿದ ಮಾಜಿ ಡಿಸಿಎಂ

ಬಾಗಲಕೋಟೆ, ನವೆಂಬರ್‌ 20: ಕರ್ನಾಟಕ ಕಾಂಗ್ರೆಸ್‌ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಬ ಅಸಮಾಧಾನಿತ ನಾಯಕರಿಗೆ ಗಾಳ ಹಾಕಿತ್ತಿದ್ದು, ಮಾಜಿ ಸಚಿವ ವಿ ಸೋಮಣ್ಣ, ಶಿವರಾಮ್‌ ಹೆಬ್ಬಾರ್‌ ಕಾಂಗ್ರೆಸ್‌ ಸೇರ್ಪಡೆ ಕುರಿತು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ವಿ.ಸೋಮಣ್ಣ, ಹೆಬ್ಬಾರ್ ಸೇರಿ ಯಾರಾದರೂ ಕಾಂಗ್ರೆಸ್‌ಗೆ ಬರುವ ಸಾಧ್ಯತೆ ಇದೆಯಾ, ಅವರನ್ನು ಕರೆತರುವ ಪ್ರಯತ್ನ ನಡಿತಿದೆಯಾ ಎಂಬ ಪ್ರಶ್ನೆಗೆ ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿ ಮಾತನಾಡಿ, ಈ ಬಗ್ಗೆ ನಾವು ಸದ್ಯ ಚರ್ಚೆ ಮಾಡೋಕೆ ಹೋಗಲ್ಲ‌. ಜನವರಿ 26 ರವರೆಗೆ ನೀವು ಕಾಯಬೇಕು. ಆ ನಂತರ ಚಲನವಲನಗಳನ್ನ ಆರಂಭ ಮಾಡುತ್ತೇವೆ ಎಂದು ಸ್ಟೋಟಕ ಮಾಹಿತಿಯನ್ನ ನೀಡಿದ್ದಾರೆ.

laxman-savadi

ಬಿಜೆಪಿ ಪಕ್ಷದಿಂದ ಬಹಳಷ್ಟು ಜನ ನಮ್ಮ ಜೊತೆಗೆ ಸಂಪರ್ಕದಲ್ಲಿದ್ದಾರೆ. ಇಲ್ಲಿ ಬಂದ ಮೇಲೆ ಅವರ ಸ್ಥಾನಮಾನದ ಬಗ್ಗೆ ಆಲೋಚನೆ ಮಾಡಬೇಕಾಗುತ್ತದೆ. ಬಿಜೆಪಿ ಪಕ್ಷದಿಂದ ಕರೆ ತಂದವರಿಗೆ ಯಾವ ಸ್ಥಾನಮಾನ ಕೊಡಬೇಕು, ಅವರ ಕ್ಷೇತ್ರದಲ್ಲಿ ಸಹಮತದ ಇರುವ ಬಗ್ಗೆ ಚರ್ಚೆ ಮಾಡುತ್ತೇವೆ. ಬರುವವರನ್ನ ಕರೆತಂದಾಗ ಯಾರಿಗೂ ಅನ್ಯಾಯ ಮತ್ತು ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಬಿಜೆಪಿಯ ಎಷ್ಟು ಜನ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಗೋಲಿ ಹೊಡೆಯುವಾಗ ಎರಡು ರೀತಿಯಿಂದ ಹೊಡೆಯುತ್ತೇವೆ. ಒಂದು ಚರ್ರಿಗೋಲಿ ಅಂತ ಇರುತ್ತೇ, ಅದು ಛಿದ್ರವಾಗಿರುತ್ತೇ. ಅದು ಎಷ್ಟು ಮಂದಿಗೆ ಬಡಿಯುತ್ತೋ ಗೊತ್ತಿಲ್ಲ. ಫೈರಿಂಗ್​ನಲ್ಲಿ ಎರಡು ರೀತಿ ಇರುತ್ತೇ, ಯಾವಾಗ ಯಾವ ಸಂದರ್ಭದಲ್ಲಿ ಯಾವ ಫೈರಿಂಗ್​ ಹೊಡೆಯುತ್ತೇವೆ ಗೊತ್ತಿಲ್ಲ ಎಂದು ಹೇಳಿದರು.

ಪೈರಿಂಗ್ ಮಾಡೋದೆ ಫಿಕ್ಸಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಇದು ನಮ್ಮ ಕರ್ತವ್ಯ, ಯಾಕೆಂದ್ರೆ ಲೋಕಸಭೆಯಲ್ಲಿ ಗೆಲ್ಲಬೇಕಾದ್ರೆ ರಾಜಕೀಯದಲ್ಲಿ ಕೆಲವೊಂದು ದೃವೀಕರಣ ಮಾಡಬೇಕಾಗುತ್ತೇ,ಆದನ್ನ ನಾವು ಮಾಡುತ್ತಿದ್ದೇವೆ.ಇದು ಆಪರೇಷನ್​ ಹಸ್ತ ಅಂತಲ್ಲ, ಯಾರು ಬಿಜೆಪಿಯಲ್ಲಿ ನಮಗೆ ಅವಹೇಳನಕಾರಿಯಾಗಿದೆ, ಬೇಸತ್ತಿದ್ದೇವೆ ಅಂತ ಹೇಳುತ್ತಿದ್ದಾರೋ, ಅಂತವರನ್ನ ಗೌರವದಿಂದ ಪಕ್ಷಕ್ಕೆ ಕರೆತರುವ ಕೆಲಸ ಮಾಡುತ್ತೆವೆ ಎಂದು ಹೇಳಿದರು.

ವಿಜಯೇಂದ್ರ ಮತ್ತು ಆರ್​ ಅಶೋಕ್​ ಜೋಡೆತ್ತುಗಳಾಗಿ ಲೋಕಸಭೆ ಗೆಲ್ಲುವ ವಿಚಾರವಾಗಿ ಮಾತನಾಡಿ, ಬರೀ ಜೋಡೆತ್ತಲ್ಲ, ಉತ್ತರ ಕರ್ನಾಟಕದಲ್ಲಿ ನಾಲ್ಕು ಎತ್ತು ಹೊಡೆಯುವ ಪದ್ಧತಿ ಇದೆ.ಅದನ್ನು ಮಾಡಿದ್ರೂ ಸಹ ಏನು ಮಾಡೋದಕ್ಕೆ ಆಗೋದಿಲ್ಲ. ಜೋಡೆತ್ತಲ್ಲ, ನಾಲ್ಕೆತ್ತು ಹೂಡಿದ್ರೂ ಸಹ ಅದನ್ನ ಎಳೆಯೋಕೆ ಆಗೋದಿಲ್ಲ. ಜೋಡೆತ್ತುಗಳಲ್ಲಿ ಆ ಶಕ್ತಿ ಉಳಿದಿಲ್ಲ ಎಂದ ಅವರು, ನೆಲ ಗಟ್ಟಿಯಾಗಿದೆ, ಬಿರುಸಾಗಿದೆ, ಆದರೆ ಎರಡೆತ್ತು ಎಳೆದ್ರೆ ಎಳೆಯುವಂತಹ ಶಕ್ತಿ ಅಲ್ಲಿ ಉಳಿದಿಲ್ಲ. ಆ ನೇಗಿಲು ನೋಡಿದ್ರೆ ಎಂಟತ್ತು ಎತ್ತು ಹೂಡಿದ್ರೆ ಜಗ್ಗು ಪರಿಸ್ಥಿತಿ ಇಲ್ಲ ಎಂದು ವ್ಯಂಗ್ಯವಾಡಿದರು.

ಸಿಎಂ ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ ಸಂಭಾಷಣೆ ವಿವಾದ ವಿಚಾರವಾಗಿ ಮಾತನಾಡಿದ ಲಕ್ಷಣ ಸವದಿ,ಈ ವಿಷಯ ಬಿಜೆಪಿಗರು ಮಾತನಾಡಿದ್ದನ್ನ ನೋಡಿ ನನಗೆ ನಗು ಬರುತ್ತೇ, ಬಿಜೆಪಿಗರೆಲ್ಲಾ ಸತ್ಯ ಹರಿಶ್ಚಂದ್ರನ ಮನೆಯಲ್ಲಿ ಬಾಡಿಗೆ ಇದ್ದೋರ ತರಹ ಮಾತನಾಡ್ತಾರೆ. 20 ವರ್ಷ ನಾನು ಇವರ ಕಥೆ ಏನು ಅನ್ನೋದನ್ನ ನಾನು ನೋಡಿಲ್ವಾ. ಬೇರೆಯವರಿಗೆ ಬೇರೆ ತರಹ ಅರ್ಥ ಆಗಬಹುದು, ಆದರೆ ನನಗೇ ಬೇರೆ‌, ಯಾರಾರೋ ಏನೇನೋ ಮಾತನಾಡ್ತಾರೆ ಮಾತನಾಡಲಿ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+