ಸಿದ್ದರಾಮಯ್ಯರನ್ನು ಕಡೆಗಣಿಸಿದರೆ ಸರ್ಕಾರ ಉಳಿಯಲ್ಲ: ಕಾಂಗ್ರೆಸ್ ಶಾಸಕ
Recommended Video

ಧರ್ಮಸ್ಥಳ, ಜೂನ್ 27: 'ಸಿದ್ದರಾಮಯ್ಯ ಇಲ್ಲ ಅಂದ್ರೆ ಸರ್ಕಾರವೇ ಇಲ್ಲ' ಎಂದು ಬಸವಕಲ್ಯಾಣ ಕಾಂಗ್ರೆಸ್ ಶಾಸಕ ಬಿ.ನಾರಾಯಣ ರಾವ್ ಹೇಳಿದ್ದಾರೆ.
ನರಾಯಣರಾವ್ ಅವರ ಈ ಹೇಳಿಕೆ ಹೊಸ ಅನುಮಾನಕ್ಕೂ ಕಾರಣವಾಗಿದೆ. ಸಿದ್ದರಾಮಯ್ಯ ಅವರು ಭಿನ್ನಮತೀಯ ಶಾಸಕರ ಮುಂದಾಳತ್ವ ವಹಿಸಿದ್ದಾರೆ ಎಂಬ ಗುಮಾನಿ ಸ್ಪಷ್ಟವಾಗುತ್ತಿದೆ.
ಇಂದು ಧರ್ಮಸ್ಥಳದ ಶಾಂತಿವನಕ್ಕೆ ಸಿದ್ದರಾಮಯ್ಯ ಭೇಟಿಗೆ ಆಗಮಿಸಿದ್ದ ಬಿ.ನಾರಾಯಣ ರಾವ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

'ಸಿದ್ದರಾಮಯ್ಯ ಅವರೇ ಮುಂದೆ ನಿಂತು ಸಮ್ಮಿಶ್ರ ಸರ್ಕಾರಕ್ಕೆ ಬುನಾದಿ ಹಾಕಿದ್ದಾರೆ ಅವರನ್ನು ಕಡೆಗಣಿಸಿದರೆ ಸರ್ಕಾರವೇ ಉಳಿಯಲ್ಲ' ಎಂದಿರುವ ಅವರು, ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಬಣದ ಕಡೆಯಿಂದ ಎಚ್ಚರಿಕೆ ರವಾನಿಸಿದ್ದಾರೆ.
ಇಷ್ಟೆ ಅಲ್ಲದೆ ಸಚಿವ ರಮೇಶ್ ಜಾರಿಕೊಹೊಳಿ ಜೊತೆಗೆ ವಿಶೇಷ ವಿಮಾನದಲ್ಲಿ ಹತ್ತು ಮಂದಿ ಶಾಸಕರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಕೂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರು ಅತೃಪ್ತ ಶಾಸಕರ ನಾಯಕತ್ವ ಹೊರುತ್ತಿರುವುದು ಸ್ಪಷ್ಟವಾಗಿದ್ದು, ಹೈಕಮಾಂಡ್ ಏನಾದರೂ ಸಿದ್ದರಾಮಯ್ಯ ಅವರನ್ನು ಕಡೆಗಣಿಸಿದರೆ ಸಿದ್ದರಾಮಯ್ಯ ಅವರು ರಾಜಕೀಯ ದಾಳ ಉರುಳಿಸುವುದು ಖಾತ್ರಿ ಎಂಬಂತಾಗಿದೆ.











Click it and Unblock the Notifications