ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಸಭೆಯಿಂದ ದೂರವುಳಿದ ಶಾಸಕರು!

|
Google Oneindia Kannada News

ಬೆಂಗಳೂರು, ಡಿ.4 : 'ಕೆಲವು ಶಾಸಕರು ಪಕ್ಷಕ್ಕಿಂತಲೂ ದೊಡ್ಡವರಾಗಿ ಬೆಳೆದಿದ್ದು, ಶಾಸಕಾಂಗ ಸಭೆಗೆ ಬಂದರೆ ಅವರ ಘನತೆಗೆ ಕುಂದಾಗಬಹುದೆಂಬ ಹಿನ್ನೆಲೆಯಲ್ಲಿ ಶಾಸಕರು ಗೈರು ಹಾಜರಾಗಿದ್ದಾರೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ ಮಾತು. ಇದಕ್ಕೆ ಕಾರಣ ಇಂದು ನಡೆದ ಶಾಸಕಾಂಗ ಸಭೆಗೆ ಹಲವು ಶಾಸಕರು ಗೈರಾಗಿದ್ದದ್ದು.

ಮುಂದಿನ ವಾರ ಆರಂಭವಾಗಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದ ಹಿನ್ನಲೆಯಲ್ಲಿ ಗುರುವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಜರಾಗಬೇಕೆಂದು ಸೂಚನೆ ನೀಡಲಾಗಿತ್ತು. [ಶಾಸಕಾಂಗ ಸಭೆಗೆ ಶಾಸಕ ಜಮೀರ್ ಗೈರು]

HD Kumaraswamy

ಆದರೆ, ಹಲವು ಶಾಸಕರು ಸಭೆಗೆ ಗೈರು ಹಾಜರಾಗಿದ್ದರು. ಕೆಲವರು ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿ ಪೂರ್ವನಿಯೋಜಿತ ಕಾರ್ಯಕ್ರಗಳಲ್ಲಿ ಭಾಗಿಯಾಗಿದ್ದರೆ, ಹಲವರು ಯಾವುದೇ ಮಾಹಿತಿ ನೀಡದೆ ಸಭೆಯಿಂದ ದೂರವುಳಿದರು. [ಶಾಸಕರಿಗೆ ಕುಮಾರಸ್ವಾಮಿ ಭಾವನಾತ್ಮಕ ಪತ್ರ]

ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕೆಲವರು ಶಾಸಕಾಂಗ ಸಭೆಗೆ ಭಾಗವಹಿಸಿದರೆ ತಮ್ಮ ಘನತೆಗೆ ಎಲ್ಲಿ ಧಕ್ಕೆ ಬರುತ್ತದೆಯೋ ಎಂದು ಭಾವಿಸಿರಬಹುದು. ಪಕ್ಷಕ್ಕಿಂತಲೂ ದೊಡ್ಡವರಾಗಿ ಬೆಳೆದಿರುವವರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಕೆಲವರು ಪ್ರತಿಷ್ಠೆಯನ್ನು ಮುಂದಿಟ್ಟುಕೊಂಡು ಸಭೆಗೆ ಗೈರು ಹಾಜರಾಗಿರಬಹುದೆಂದು ಶಾಸಕರಿಗೆ ಮಾತಿನ ಏಟು ಕೊಟ್ಟರು.

ಸರ್ಕಾರಕ್ಕೆ ಚಳಿ ಬಿಡಿಸುವ ಬಗ್ಗೆ ಚರ್ಚೆ : ಡಿ.9ರಿಂದ 20ರವರೆಗೆ ನಡೆಯಲಿರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಎರಡು ಸದನಗಳಲ್ಲಿ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಅಂದಹಾಗೆ ಇಂದಿನ ಸಭೆಯಲ್ಲಿ ಶಾಸಕರಾದ ಮಧು ಬಂಗಾರಪ್ಪ , ವೈ.ಎಸ್.ವಿ.ದತ್ತ , ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರಾದ ಪಟೇಲ್ ಶಿವರಾಮ್, ರಾಮಕೃಷ್ಣ , ಚೌಡರೆಡ್ಡಿ , ಸೈಯದ್ ಆಗಾ, ಶರವಣ, ಪುಟ್ಟಣ್ಣ , ಮರಿತಿಬ್ಬೇಗೌಡ ಮುಂತಾದವರು ಭಾಗವಹಿಸಿದ್ದರು.

English summary
The CLP which met under the leadership of Janata Dal (Secular) state president H.D. Kumaraswamy, saw the absence of MLAs. Kumaraswamy also expressed un happy over absence of leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X