ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳು

|
Google Oneindia Kannada News

ಬೆಂಗಳೂರು, ಮೇ 28: ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಸರ್ಕಾರ ತೆಗೆದುಕೊಂಡಿದೆ.

ಜಿಂದಾಲ್‌ ಸಂಸ್ಥೆಗೆ ಈ ಹಿಂದೆ ನೀಡಲಾಗಿದ್ದ ಭೂಮಿಯನ್ನು ಕ್ರಯ ಮಾಡಿಕೊಡುವುದು, ಗುಲ್ಬರ್ಗ ವಿವಿಯನ್ನು ವಿಭಜಿಸಿ ರಾಯಚೂರು ವಿವಿ ಸ್ಥಾಪನೆ ಮಾಡುವುದು ಸೇರಿದಂತೆ ಹಲವು ಪ್ರಮುಖ ನಿರ್ಣಯಗಳಿಗೆ ಸಂಪುಟ ನಿನ್ನೆ ಒಪ್ಪಿಗೆ ನೀಡಿದೆ.

ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳ ಪೂರ್ಣ ಮಾಹಿತಿ ಇಲ್ಲಿದೆ.

* 1998ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಗೊಂಡ ಕೆಎಎಸ್‌ ಅಧಿಕಾರಿಗಳಿಗೆ ಸೇವಾಭದ್ರತೆ ನೀಡಲು ಸುಗ್ರೀವಾಜ್ಞೆ ಹೊರಡಿಸುವುದು. ಸುಪ್ರಿಂ ಆದೇಶ ಪಾಲಿಸಿದಲ್ಲಿ 28 ಉನ್ನತ ಅಧಿಕಾರಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. 115 ಅಧಿಕಾರಿಗಳಿಗೆ ಹಿಂಬಡ್ತಿ ನೀಡಬೇಕಾಗುತ್ತದೆ ಹಾಗಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಅಮ್ಮನ ಸಾಕಲು ಹೆಣಗುತ್ತಿದ್ದ ಪುಟ್ಟ ಬಾಲಕಿಗೆ ಸಿಎಂ ನೆರವು ಅಮ್ಮನ ಸಾಕಲು ಹೆಣಗುತ್ತಿದ್ದ ಪುಟ್ಟ ಬಾಲಕಿಗೆ ಸಿಎಂ ನೆರವು

* ಜಿಂದಾಲ್‌ ಸಂಸ್ಥೆಗೆ ನೀಡಲಾಗಿದ್ದ 2000.58 ಎಕರೆ ಹಾಗೂ ಯರಬನಹಳ್ಳಿ ಗ್ರಾಮದ ಬಳಿಯ 1666.73 ಎಕರೆಯ ಭೂಮಿಯನ್ನು ಲೀಸ್‌ನಿಂದ ಬದಲಾಯಿಸಿ ಕ್ರಯಪತ್ರ ಮಾಡಿಕೊಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಹಲವು ಸರ್ಕಾರಿ ಹುದ್ದೆ ಭರ್ತಿಗೆ ಒಪ್ಪಿಗೆ

ಹಲವು ಸರ್ಕಾರಿ ಹುದ್ದೆ ಭರ್ತಿಗೆ ಒಪ್ಪಿಗೆ

* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 358 ಗ್ರಾಮ ಪಂಚಾಯತ್ ಕಾರ್ಯದರ್ಶಿ, ಗ್ರೇಡ್ - II ಹುದ್ದೆಗಳನ್ನು ತುಂಬಲು ಹಾಗೂ 95 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ತುಂಬಲು ಅನುಮೋದನೆ ನೀಡಲಾಗಿದೆ.

ವಿಕ್ಟೋರಿಯಾ ಆಸ್ಪತ್ರೆಗೆ 59 ಕೋಟಿ

ವಿಕ್ಟೋರಿಯಾ ಆಸ್ಪತ್ರೆಗೆ 59 ಕೋಟಿ

* ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ 1000 ಹಾಸಿಗೆ ಸಾಮಥ್ರ್ಯದ ಹೆಚ್ಚುವರಿ ವಾರ್ಡ್ ನಿರ್ಮಾಣಕ್ಕಾಗಿ 59 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಿದೆ.

* ಮೈಸೂರಿನಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಶಾಖೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಹೆಚ್ಚುವರಿಯಾಗಿ ಉಂಟಾಗಿರುವ ಮಾರ್ಪಾಡು ಕಾಮಗಾರಿಗಳಿಗೆ ಸೇರಿದಂತೆ 168.59 ಕೋಟಿ ರೂ.ಗಳ ಪರಿಷ್ಕೃತ ಮೊತ್ತಕ್ಕೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಹಾಸನ ಜಿಲ್ಲೆಗೆ ಹಲವು ಹೊಸ ಯೋಜನೆ

ಹಾಸನ ಜಿಲ್ಲೆಗೆ ಹಲವು ಹೊಸ ಯೋಜನೆ

* ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿ ಕೆರೆಗೆ ಹೇಮಾವತಿಯಿಂದ 140 ಎಂ.ಸಿ.ಎಫ್.ಟಿ ನೀರನ್ನು ಎತ್ತಿ ಕುಡಿಯುವ ನೀರಿಗಾಗಿ ಏತ ನೀರಾವರಿ ನಾಲೆ ನಿರ್ಮಾಣ ಕಾಮಗಾರಿಗೆ 54 ಕೋಟಿ ರೂ.ಗಳನ್ನು ಒದಗಿಸಲು ತೀರ್ಮಾನ.

* ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿಗೆ ಹೇಮಾವತಿ ನದಿಯಿಂದ ಕುಡಿಯುವ ನೀರು ಒದಗಿಸಲು ಯೋಜನೆಗಾಗಿ 62.45 ಕೋಟಿ ರೂ.ಗಳ ಕಾಮಗಾರಿಗೆ ಸಂಪುಟ ಅನುಮೋದನೆ ನೀಡಿದೆ.

* ಹಾಸನದಲ್ಲಿ ನೋ ಫ್ರಿಲ್ ಗ್ರೀಲ್‌ಫೀಲ್ಡ್‌ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಖಾಸಗಿ ಸಂಸ್ಥೆಗೆ ತಾಂತ್ರಿಕ ಸಹಾಯ ಮತ್ತು ಮೂರನೇ ವ್ಯಕ್ತಿ ಪರಿವೀಕ್ಷಣಾ ಸೇವೆ ಪಡೆಯಲು ಸಂಪುಟ ಸಭೆ ಒಪ್ಪಿಗೆ.

ದಕ್ಷಿಣ ಕನ್ನಡ ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ ದಕ್ಷಿಣ ಕನ್ನಡ ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ

ಮೋಡಬಿತ್ತನೆಗೆ ಸಂಪುಟ ಒಪ್ಪಿಗೆ

ಮೋಡಬಿತ್ತನೆಗೆ ಸಂಪುಟ ಒಪ್ಪಿಗೆ

* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಬರ ಇರುವ ಪ್ರದೇಶಗಳಲ್ಲಿ 2019 ಮತ್ತು 2020 ರಲ್ಲಿ ಮೋಡಬಿತ್ತನೆ ಕಾರ್ಯಾಚರಣೆ ಕೈಗೊಳ್ಳಲು 98 ಕೋಟಿ. ರೂಗಳನ್ನು ವೆಚ್ಚ ಮಾಡಲು ಒಪ್ಪಿಗೆ.

* ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ತೇರಗಾಂವ, ಕಾವಲವಾಡ ಮತ್ತು 91 ಗ್ರಾಮಗಳಿಗೆ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರಿನ ಯೋಜನೆಯನ್ನು ಕೈಗೊಳ್ಳಲು 119 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ರಾಮನಗರ ಎಂಜಿಜನಿಯರಿಂಗ್ ಕಾಲೇಜಿಗೆ ಅನುದಾನ

ರಾಮನಗರ ಎಂಜಿಜನಿಯರಿಂಗ್ ಕಾಲೇಜಿಗೆ ಅನುದಾನ

* ರಾಮನಗರ ಜಿಲ್ಲೆಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿವಿಧ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಾಗಿ 61.24 ಕೋಟಿ ರೂ.ಗಳನ್ನು ಮಂಜೂರು ಒಪ್ಪಿಗೆ.

* ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಸತಿ ಶಿಕ್ಷಣ ಸಂಸ್ಥೆಗಳ 15 ಪರಿಶಿಷ್ಟ ಜಾತಿ ಮತ್ತು ಪಂಗಡದ ವಿವಿಧ ವಸತಿ ಶಾಲೆಗಳ ಕಟ್ಟಡದ ನಿರ್ಮಾಣಕ್ಕೆ 377.15 ಕೋಟಿ ರೂ.ಗಳಿಗೆ ಕಾಮಗಾರಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಮೈತ್ರಿ ಸರ್ಕಾರದ ಸಂಪುಟ ಸೇರುವ ಸಂಭಾವ್ಯ ಶಾಸಕರ ಪಟ್ಟಿ ಮೈತ್ರಿ ಸರ್ಕಾರದ ಸಂಪುಟ ಸೇರುವ ಸಂಭಾವ್ಯ ಶಾಸಕರ ಪಟ್ಟಿ

ರಾಯಚೂರು ವಿವಿ ಸ್ಥಾಪನೆಗೆ 6.99 ಕೋಟಿ

ರಾಯಚೂರು ವಿವಿ ಸ್ಥಾಪನೆಗೆ 6.99 ಕೋಟಿ

* ರಾಯಚೂರು ವಿಶ್ವವಿದ್ಯಾನಿಲಯದ ಸ್ಥಾಪನೆಗಾಗಿ 6.99 ಕೋಟಿ ರೂ.ಗಳನ್ನು ಒದಗಿಸಲು ಅನುಮೋದನೆ ನೀಡಲಾಗಿದೆ. * ಕಾರ್ಕಳ ಪಟ್ಟಣದ ಹಾಲಿ ಒಳಚರಂಡಿ ಅಭಿವೃದ್ಧಿ ಯೋಜನೆಗಾಗಿ 13 ಕೋಟಿ ರೂ.ಗಳನ್ನು ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೋಟಾ

ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೋಟಾ

* ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನೋಟಾ (NOTA) ಅಳವಡಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

* ಮದ್ದೂರು ಪಟ್ಟಣಕ್ಕೆ 2ನೇ ಹಂತದ ಒಳಚರಂಡಿ ನಿರ್ಮಿಸಲು 50.15 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಮೈತ್ರಿ ಸರ್ಕಾರದ ಸಂಪುಟ ಪುನಾರಚನೆ : 6 ಸಚಿವರು ಸಂಪುಟದಿಂದ ಔಟ್ ಮೈತ್ರಿ ಸರ್ಕಾರದ ಸಂಪುಟ ಪುನಾರಚನೆ : 6 ಸಚಿವರು ಸಂಪುಟದಿಂದ ಔಟ್

ಮೈಸೂರು ನಗರಕ್ಕೆ ಕುಡಿಯುವ ನೀರಿಗೆ ಕ್ರಮ

ಮೈಸೂರು ನಗರಕ್ಕೆ ಕುಡಿಯುವ ನೀರಿಗೆ ಕ್ರಮ

* ವಿಜಯಪುರ ನಗರದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ವಿ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯಕ್ಕೆ ಗುತ್ತಿಗೆ ನೀಡಿರುವ 12584 ಚದರ ಯಾರ್ಡ್ ಜಮೀನನ್ನು ಸದರಿ ಸಂಸ್ಥೆಗೆ ಖಾಯಂ ಮಂಜೂರು ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

* ಜವಹರಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಮೀಷನ್ ಯೋಜನೆಯಡಿ ಮೈಸೂರು ನಗರಕ್ಕೆ 24 X7 ನೀರು ಸರಬರಾಜು ಮಾಡುವ ಯೋಜನೆಗೆ ಕೇಂದ್ರ ಸರ್ಕಾರದ ಅನುದಾನ ಪಾಲು 85.60 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರದಿಂದಲೇ ಒದಗಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಕೆಆರ್‌ಎಸ್‌ ನಾಲೆ ಅಭಿವೃದ್ಧಿಗೆ 522.37 ಕೋಟಿ

ಕೆಆರ್‌ಎಸ್‌ ನಾಲೆ ಅಭಿವೃದ್ಧಿಗೆ 522.37 ಕೋಟಿ

* ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಲು 22.89 ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

* ಕೃಷ್ಣರಾಜಸಾಗರ ಅಣೆಕಟ್ಟೆಯ ಎಡಭಾಗದ ವಿಶ್ವೇಶ್ವರಯ್ಯ ನಾಲೆಯ ಮುಖ್ಯ ನಾಲೆ ಮತ್ತು ಶಾಖಾ ನಾಲೆಗಳನ್ನು ಶಿಥಿಲವಾಗಿರುವುದರಿಂದ ಇವುಗಳ ಅಭಿವೃದ್ಧಿ ಕಾಮಗಾರಿಗಾಗಿ 522.37 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಕುಮಾರಸ್ವಾಮಿ-ಸಿದ್ದರಾಮಯ್ಯ ಭೇಟಿ: ಮಹತ್ವದ ಮಾತುಕತೆ ಕುಮಾರಸ್ವಾಮಿ-ಸಿದ್ದರಾಮಯ್ಯ ಭೇಟಿ: ಮಹತ್ವದ ಮಾತುಕತೆ

English summary
Karnataka cabinet meeting held yesterday. Many development oriented dissensions taken in yesterday's meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X