ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರದೀಪ್ ಆತ್ಮಹತ್ಯೆ ಪ್ರಕರಣ; ಶಾಸಕರ‌ ದುರ್ವರ್ತನೆಯಿಂದ‌ ಅನೇಕ ಸಾವುಗಳು ಆಗುತ್ತಿವೆ: ಡಿ ಕೆ ಶಿವಕುಮಾರ್

|
Google Oneindia Kannada News

ಬೆಂಗಳೂರು,ಜನವರಿ 3 : ಶಾಸಕರ ದುರ್ವರ್ತನೆಯಿಂದ ಅನೇಕ ಸಾವುಗಳು ಆಗುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಈ ಕುರಿತು ಬೆಂಗಳೂರಿನಲ್ಲಿ ಮಂಗಳವಾರ ಉದ್ಯಮಿ ಪ್ರದೀಪ್ ಆತ್ಮಹತ್ಯೆ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇದನ್ನ ಕೊನೆ ಮಾಡಬೇಕು. ಇದಕ್ಕಾಗಿ ಜನರ ಧ್ವನಿ, ಭಾವನೆ ತಿಳಿಸಬೇಕಾಗಿದೆ. ಕಾನೂನು ಬದ್ಧವಾಗಿ ಹೋರಾಟ‌ ಮಾಡಬೇಕಿದೆ ಎಂದು ತಿಳಿಸಿದರು.

ನಾವು 2ಎ ವರ್ಗದವರಿಗೆ, ಪರಿಶಿಷ್ಟರಿಗೆ ಅನ್ಯಾಯ ಮಾಡಲು ಬಯಸುವುದಿಲ್ಲ: ಡಿ ಕೆ ಶಿವಕುಮಾರ್ನಾವು 2ಎ ವರ್ಗದವರಿಗೆ, ಪರಿಶಿಷ್ಟರಿಗೆ ಅನ್ಯಾಯ ಮಾಡಲು ಬಯಸುವುದಿಲ್ಲ: ಡಿ ಕೆ ಶಿವಕುಮಾರ್

ಕಾನೂನಿನ ಮುಂದೆ ಎಲ್ಲರೂ ಒಂದೇ ಅರವಿಂದ ಲಿಂಬಾವಳಿ ಬೇರೆ ಅಲ್ಲ,ಡಿ.ಕೆ.ಶಿವಕುಮಾರ್ ಬೇರೆ ಅಲ್ಲ, ಈ ಸರ್ಕಾರ ಎಲ್ಲರನ್ನೂ ರಕ್ಷಣೆ ಮಾಡ್ಕೊಂಡು ಬಂದಿದೆ. ಲಂಚಕ್ಕೆ, ಮಂಚಕ್ಕೆ, ಇಂತಹ‌ ಸಾವಿಗೆ ರಕ್ಷಣೆ ಮಾಡ್ಕೊಂಡು ಬಂದಿದೆ. ಕಾನೂನಿನ ಶಿಕ್ಷೆಗೆ ಒಳಗಾಗಲೇ ಬೇಕಿದೆ ಎಂದು ಹೇಳಿದರು.

Many Deaths Are Happening Due To Misbehavior Of MLAs DK Shivakumar Alleges

ಆತ್ಮಹತ್ಯೆಗೆ ಶರಣಾದ ಪ್ರದೀಪ್ ಅವರ ಹುಡ್ಗ. ಅವರ ಕೈಯಲ್ಲಿ ನಾವೇನಾದರೂ ಬರೆಸಿದ್ದೀವಾ? ನಾವೇನಾದರೂ ಷಡ್ಯಂತ್ರದಲ್ಲಿ ಭಾಗಿಯಾಗಿದ್ದರೆ ಹೇಳಲಿ, ಕಾಂಗ್ರೆಸ್ ನ ಸಿದ್ದರಾಮಯ್ಯ, ‌ಡಿಕೆ ಶಿವಕುಮಾರ್ ಯಾರಾದರೂ ಇದ್ದರೆ ಹೇಳಲಿ ನೋ‌ ಪ್ರಾಬ್ಲಂ, ನಾವ್ಯಾರು ಇದರಲ್ಲಿ ಭಾಗಿಯಾಗಿಲ್ಲ. ಎರಡ್ಮೂರು ಪೇಜ್ ಕಾಗದ ಬರೆದಿದ್ದಾನೆ. ಎಲ್ಲರಿಗೂ ಏನು ಕಾನೂನಿದ್ಯೋ ಅದರಂತೆ ತನಿಖೆಗೊಳಗಾಗಬೇಕು, ಹಾಗೂ ಶಿಕ್ಷೆಗೊಳಗಾಬೇಕು ಎಂದರು.

ಆರೋಪಿ ಅರವಿಂದ ಲಿಂಬಾವಳಿ ಅವರನ್ನು ಅರೆಸ್ಟ್ ಮಾಡಬೇಕು: ಸಿದ್ದರಾಮಯ್ಯ

ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಆರೋಪಿಗಳ ಬಂಧನವಾಗಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು. ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯಮಿ ಕಗ್ಗಲೀಪುರದ ಪ್ರದೀಪ್ ಅವರ ನಿವಾಸಕ್ಕೆ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಶಾಸಕರು ಇರಲಿ, ಯಾರೇ ಇರಲಿ, ತಪ್ಪು ಯಾರೇ ಮಾಡಿದ್ರು ತಪ್ಪು‌ ಎಂದರು‌.

ಪ್ರದೀಪ್ ಆತ್ಮಹತ್ಯೆ ಫಟನೆ ನಡೆಯಬಾರದ ಘಟನೆಯಾಗಿದೆ. ಹಣಕಾಸಿನ ವ್ಯವಹಾರದಲ್ಲಿ ಇಂತಹ ಘಟನೆ ಆಗಿದೆ. ಪ್ರದೀಪ್ ಪತ್ನಿ ಪ್ರದೀಪ್ ಗೆ ನ್ಯಾಯ ಕೊಡಿಸಿ ಅಂತ ಕೇಳಿದ್ದಾರೆ. 1.5 ಕೋಟಿ ನಾವು ಇನ್ವೆಸ್ಟ್ ಮಾಡಿದ್ವಿ. ಒಂದೇ ಒಂದು ಪೈಸೆ ಲಾಭ ಬಂದಿಲ್ಲ. ನಮ್ಮ ಹಣ ವಾಪಸ್ ಕೊಡಿ ಅನ್ನುವುದು ಇವರ ವಾದ ಎಂದು‌ ವಿವರಿಸಿದರು.

ಲಿಂಬಾವಳಿ ಈ ಭಾಗದ ಶಾಸಕರು. ಹಣಕಾಸು ವ್ಯವಹಾರವನ್ನು ಅವರು ಸೆಟ್ಲ್ಮೆಂಟ್ ಮಾಡಿದ್ದಾರೆ. ಪ್ರದೀಪ್ ಡೆತ್ ನೋಟ್ ನಲ್ಲಿ 6 ಜನರ ಹೆಸರು ಇದೆ. ಈ ಪೈಕಿ ಬಿಜೆಪಿ‌ ಶಾಸಕ ಲಿಂಬಾವಳಿ ಹೆಸರು ಇದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐ ಆರ್ ದಾಖಲಾಗಿದೆ. ಪೊಲೀಸರು ಹಣವನ್ನು ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಿದರು.

Many Deaths Are Happening Due To Misbehavior Of MLAs DK Shivakumar Alleges

ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧನ ಮಾಡಬೇಕು. ಸಾವಿಗೆ ಕಾರಣವಾದರ ಮೇಲೆ ಕಾನೂನು ಕ್ರಮ ಆಗಬೇಕು. ಶಿಕ್ಷೆ ಆಗುವಂತೆ ಮಾಡಬೇಕು. ಆರೋಪಿತ ಶಾಸಕ ಅರವಿಂದ ಲಿಂಬಾವಳಿ ಅವರನ್ನು ಅರೆಸ್ಟ್ ಮಾಡಬೇಕು. ಇಲ್ಲದೆ ಹೋದ್ರೆ ಸಾಕ್ಷಿ ನಾಶ ಮಾಡಬಹುದು ಎಂದು ಹೇಳಿದರು.

ಪೊಲೀಸರು ಮೃತ ಪ್ರದೀಪ್ ಮನೆಯವರ ಮೊಬೈಲ್ ಕೇಳ್ತಿದ್ದಾರೆ ಅಂತೆ. ಹೀಗೆಲ್ಲ ಮಾಡೋದು ಸರಿಯಲ್ಲ. ಸಂತೋಷ್ ‌ಪಾಟೀಲ್ ಆತ್ಮಹತ್ಯೆ ಗೆ ಕೆ.ಎಸ್ ಈಶ್ವರಪ್ಪ ಕಾರಣ ಅಂತ ಹೇಳಿದ್ರು. ಆದರೆ 3 ತಿಂಗಳಲ್ಲಿ ಅವರಿಗೆ ಕ್ಲೀನ್ ಚಿಟ್ ಕೊಟ್ರು. ಇದೇ ಪರಿಸ್ಥಿತಿ ಈ ಕೇಸ್ ನಲ್ಲಿ ಆಗಬಾರದು.‌ಸರ್ಕಾರ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸರ್ಕಾರದಲ್ಲಿ ಅನೇಕ ಜನ ಸಾಯೋದು, ದಯಾ ಮರಣ ಕೋರೋದು ಆಗ್ತಿದೆ.‌ಇದಕ್ಕೆ ಭ್ರಷ್ಟಾಚಾರ ಕಾರಣ. ಭ್ರಷ್ಟಾಚಾರದ ವಿರುದ್ದ ಕ್ರಮ ಆಗದೆ ಇರೋದಕ್ಕೆ ಹೀಗೆ ಅಗ್ತಿದೆ. ಈ ಕೇಸ್ ನಲ್ಲಿ ಪ್ರದೀಪ್ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

ಉದ್ಯಮಿ ಪ್ರದೀಪ್ ತಲೆಗೆ‌ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿ 6 ಮಂದಿ ವಿರುದ್ಧ ಎಫ್​​ಐಆರ್ ದಾಖಲಾಗಿದೆ. ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306ರಡಿ (ಆತ್ಮಹತ್ಯೆಗೆ ಪ್ರಚೋದನೆ) ಎಫ್​ಐಆರ್ ದಾಖಲಾಗಿದೆ.

ಉದ್ಯಮಿ ಪ್ರದೀಪ್ ಪತ್ನಿ ನೀಡಿದ ದೂರಿನನ್ವಯ ಪೊಲೀಸರು ಎಫ್​ಐಆರ್​​ ದಾಖಲಿಸಲಾಗಿದೆ. ಡೆತ್‌ನೋಟ್‌ನಲ್ಲಿ ಅರವಿಂದ ಲಿಂಬಾವಳಿ, ಜಿ.ರಮೇಶ್‌ ರೆಡ್ಡಿ, ಕೆ.ಗೋಪಿ‌, ಜಯರಾಮ್ ರೆಡ್ಡಿ, ರಾಘವ ಭಟ್, ಸೋಮಯ್ಯ ಹೆಸರು ಉಲ್ಲೇಖವಾಗಿದೆ ಎಂದರು.

English summary
Businessman Pradeep Suicide Case;Many Deaths Are Happening Due To Misbehavior Of MLAs DK Shivakumar Alleges
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X